
ಬೇಸಿಗೆಯಲ್ಲಿ ಎಷ್ಟೇ ಮಳೆ ಸುರಿದರೂ ಶೆಖೆ ಹಾಗೂ ಬಿಸಿಲಿನ ತಾಪ ಮಾತ್ರ ಕಡಿಮೆಯಾಗುವುದಿಲ್ಲ. ಉರಿ ಬಿಸಿಲಿನಿಂದ ಬಳಲಿ ಬೆಂಡಾಗುವುದು...ಹೀಗಾಗಿ ಬೇಸಿಗೆಯಲ್ಲಿ ಆರೋಗ್ಯ ಮತ್ತು ಚರ್ಮದ ರಕ್ಷಣೆಗೆ ಒಂದಷ್ಟು ಗಮನ ಕೊಡುವುವು ಸೂಕ್ತ.
ಬೇಸಿಗೆಯಲ್ಲಿ ಸೂರ್ಯನ ಪ್ರಖರತೆ ಹೆಚ್ಚಿರುತ್ತದೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ಹೀಗಾಗಿ ಕೆಲವರು ಉಷ್ಣಾಘಾತಕ್ಕೊಳಗಾಗಿ ಸಾವನ್ನಪ್ಪುವ ಸಾಧ್ಯತೆಗಳು ಇರುತ್ತವೆ. ದೇಹಕ್ಕೆ ಹೆಚ್ಚಿನ ನೀರು ಪೂರೈಸುವುದು ಅಗತ್ಯ. ಪ್ರತಿದಿನ 5 ರಿಂದ 6 ಲೀಟರ್ ನೀರು ಕುಡಿಯಬೇಕು ಎಂಬುದು ಆರೋಗ್ಯ ತಜ್ಞರ ಸಲಹೆ.
ಅತ್ಯಧಿಕ ಬಿಸಿಲು ಹಾಗೂ ಏರುತ್ತಿರುವ ತಾಪಮಾನದಿಂದಾಗಿ ಎಲ್ಲ ವಯಸ್ಸಿನವರಲ್ಲೂ ಅಂದರೆ ಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಈ ಅತ್ಯಧಿಕ ಬಿಸಿಲಿನ ತಾಪ ಮಾರಕವಾಗಿಯೂ ಪರಿಣಿಸುತ್ತದೆ. ಈ ಬಿಸಿಲಿನ ತಾಪ ಹೆಚ್ಚಾಗಿ ವೃದ್ಧರು, ಕ್ರೀಡಾಪಟುಗಳು ಬಿಸಿಲಿನಲ್ಲಿ ಕೆಲಸ ಮಾಡುವವರ ಜೊತೆಗೆ ಹೃದಯ ಮತ್ತು ಶ್ವಾಸಕೋಶ ಸಂಬಂದ ರೋಗಗಳಿಂದ ಬಳಲುತ್ತಿರುವವರ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುತ್ತದೆ.
Advertisement