ಸೋಡಾ. ಚೀಸ್ ಬರ್ಗರ್ ಮತ್ತು ಕ್ಯಾಂಡಿ ಬೊಜ್ಜಿಗೆ ಕಾರಣವಾಗಲ್ಲ: ಸಂಶೋಧನೆ
ನ್ಯೂಯಾರ್ಕ್: ಸೋಡಾ ಮತ್ತು ಕ್ಯಾಂಡಿ, ಚಾಕೋಲೇಟ್ಸ್, ಸಾಪ್ಟ್ ಡ್ರಿಂಕ್ಸ್ ಚೀಸ್ ಬರ್ಗರ್ ಸೇವೆನೆಯಿಂದ ಬೊಜ್ಜು ಉಂಟಾಗುವುದಿಲ್ಲ ಎಂದು ಸಂಶೋಧನೆಯೊಂದು ತಿಳಿಸಿದೆ.
ಅಮೆರಿಕಾದ ನ್ಯೂ ಕಾರ್ನೆಲ್ ವಿಶ್ವ ವಿದ್ಯಾನಿಲಯದ ಸಂಶೋಧಕರಾದ ಡೇವಿಡ್ ಜಸ್ಟ್ ಮತ್ತು ಬ್ರಿಯಾನ್ ವಾನ್ ಸಿಂಕ್ ನಡೆಸಿದ ಅಧ್ಯಯನದಿಂದ ಇದು ತಿಳಿದು ಬಂದಿದೆ. ಅಮೆರಿಕಾದ ಯುವ ಜನತೆ ಮೇಲೆ ನಡೆಸಿದ ಸಂಶೋಧನೆಯಿಂದ ಇದು ಸಾಬೀತಾಗಿದೆ.
ಸೋಡಾ, ಕ್ಯಾಂಡಿ, ಜಂಕ್ ಫುಡ್ ಸೇವನೆಯಿಂದ ಶೇ. 95 ಜನರ ಬಾಡಿ ಮಾಸ್ಕ್ ಇಂಡೆಕ್ಸ್ ಮೇಲೆ ಯಾವುದೇ ಪರಿಣಾ ಬೀರಲ್ಲ ಎಂದು ಹೇಳಿದ್ದಾರೆ.
ಅಧಿಕ ತೂಕ ಮತ್ತು ಸಹಜ ತೂಕ ಹೊಂದಿರುವ ವ್ಯಕ್ತಿಗಳ ಮೇಲೆ ಈ ಪ್ರಯೋಗ ನಡೆಸಿದ್ದು, ಇದರಲ್ಲಿ ಸೋಡಾ, ಕ್ಯಾಂಡಿ, ಚೀಸ್ ಬರ್ಗರ್ ಮುಂತಾದ ಸೇವನೆ ಬೊಜ್ಜಿಗೆ ಕಾರಣವಲ್ಲ ಎಂಬ ಅಂಶ ತಿಳಿದು ಬಂದಿದೆ.
ಈ ಎಲ್ಲಾ ಆಹಾರಗಳನ್ನ ತ್ಯಜಿಸಿ ಡಯಟ್ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ದೈಹಿಕ ಚಟುವಟಿಕೆ ಅಂದರೆ, ವ್ಯಾಯಾಮ ಮಾಡುವುದರಿಂದ ಮಾತ್ರ ತೂಕ ಇಳಿಸಿಕೊಳ್ಳಲು ಸಾಧ್ಯ. ವ್ಯಾಯಾಮ ಮಾಡದೇ ಡಯಟ್ ಮಾಡಿದರೇ ಬೊಜ್ಜು ಕಡಿಮೆಯಾಗಲ್ಲ ಎಂದು ಡೇವಿಡ್ ಜಸ್ಟ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ