ಕುರುಕು ತಿಂಡಿ ತಿನ್ನುವುದರಿಂದ ಒಂದೇ ವಾರದಲ್ಲಿ ಹೆಚ್ಚುತ್ತದೆ ಕೊಬ್ಬಿನ ಅಂಶ!

ಕುರುಕು ತಿಂಡಿ ತಿನ್ನುವುದರಿಂದ ಕೇವಲ ಒಂದೇ ವಾರದಲ್ಲಿ ಕೊಬ್ಬಿನ ಅಂಶವನ್ನು ಹೆಚ್ಚು ಮಾಡುತ್ತದೆ ಎಂಬುದು ಹೊಸ ಸಂಶೋಧನೆಯಿಂದ ತಿಳಿದುಬಂದಿದೆ.
ಕುರುಕು ತಿಂಡಿ ತಿನ್ನುವುದರಿಂದ ಒಂದೇ ವಾರದಲ್ಲಿ ಹೆಚ್ಚುತ್ತದೆ ಕೊಬ್ಬಿನ ಅಂಶ!
ಕುರುಕು ತಿಂಡಿ ತಿನ್ನುವುದರಿಂದ ಒಂದೇ ವಾರದಲ್ಲಿ ಹೆಚ್ಚುತ್ತದೆ ಕೊಬ್ಬಿನ ಅಂಶ!

ವಾಷಿಂಗ್ ಟನ್: ಕುರುಕು ತಿಂಡಿ ತಿನ್ನುವುದರಿಂದ ಕೇವಲ ಒಂದೇ ವಾರದಲ್ಲಿ ಕೊಬ್ಬಿನ ಅಂಶವನ್ನು ಹೆಚ್ಚು ಮಾಡುತ್ತದೆ ಎಂಬುದು ಹೊಸ ಸಂಶೋಧನೆಯಿಂದ ತಿಳಿದುಬಂದಿದೆ.
ಸಮೀಕ್ಷೆಗೊಳಪಟ್ಟ ಆರು ಜನರಿಗೆ ಪ್ರತಿ ದಿನ ಪಿಜ್ಜಾ, ಬರ್ಗರ್ ಮತ್ತು ಇತರ ಜಂಕ್ ಆಹಾರ ಸೇರಿದಂತೆ 6 ,000 ಕ್ಯಾಲೊರಿ ಆಹಾರವನ್ನು ನೀಡಲಾಗಿತ್ತು, ಜಂಕ್ ಆಹಾರ ಸೇವಿಸಿದ ಎರಡೇ ದಿನಗಳಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಆರು ಜನರ ಪೈಕಿ ಮೂವರ ತೂಕದಲ್ಲಿ ಯಾವುದೇ ಬದಲಾವಣೆಗಳಾಗಿರಲಿಲ್ಲ. ಇನ್ನು ಮೂವರು ತೂಕ ಹೆಚ್ಚಿಸಿಕೊಂದಿದ್ದರು. ಜಂಕ್ ಫುಡ್ ತಿಂದ ವ್ಯಕ್ತಿಗಳಲ್ಲಿ 3 .5 ಕೆ ತೂಕ ಹೆಚ್ಚಿದ್ದು ಇನ್ಸುಲಿನ್ ಪ್ರತಿರೋಧ ಲಕ್ಷಣಗಳು ಗೋಚರಿಸಿದ್ದು,  2 ನೇ ವಿಧದ ಮಧುಮೇಹದ ಪ್ರಮುಖ ಅಂಶ ಇದಾಗಿದೆ.
ಅಮೆರಿಕನ್ನರ ಸರಾಸರಿ ಆಹಾರ ಕ್ರಮ ಹಾಗೂ ಅದು ಎರಡನೇ ಹಂತದ ಮಧುಮೇಹಕ್ಕೆ ಹೇಗೆ ಕಾರಣವಾಗಲಿದೆ ಎಂಬುದನ್ನು ತಿಳಿಯಲು ಈ ಸಂಶೋಧನೆ ನಡೆಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com