ಅಜೀರ್ಣ ಸಮಸ್ಯೆ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ...ಬ್ಲಾಕ್ ಟೀ ಪ್ಲೀಸ್

ಉತ್ತಮ ತ್ವಚೆಗೆ ಕಪ್ಪು ಚಹಾ ತುಂಬಾ ಒಳ್ಳೆಯದು.ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ಮೊಡವೆ ಬರದಂತೆ ರಕ್ಷಿಸುತ್ತವೆ. ಹಾಗಂತ ಅಧಿಕ...
ಕಪ್ಪು ಚಹಾ
ಕಪ್ಪು ಚಹಾ
ಚಳಿಗಾಲದಲ್ಲಿ ಬಿಸಿ ಬಿಸಿ ಚಹಾ ಸಿಕ್ಕಿದ್ದರೆ ಒಳ್ಳೇದಿತ್ತು ಎಂದು ಬಯಸುವ ಚಹಾ ಪ್ರಿಯರು ನೀವಾಗಿದ್ದರೆ, ಇನ್ಮುಂದೆ ಕಪ್ಪು ಚಹಾ (ಬ್ಲಾಕ್ ಟೀ) ಕುಡಿಯುವುದನ್ನೂ ರೂಢಿ ಮಾಡಿಕೊಳ್ಳಿ. ಯಾಕೆಂದರೆ  ಸದಾ ಕಾಫಿ ಅಥವಾ ಟೀ ಗಿಂತ ಕಪ್ಪು ಚಹಾ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಕಪ್ಪು ಚಹಾ ಯಾಕೆ ಉತ್ತಮ ಎಂಬುದಕ್ಕೆ ಇಲ್ಲಿದೆ ಕಾರಣ
ತ್ವಚೆಗೆ ಒಳ್ಳೆಯದು
ಉತ್ತಮ ತ್ವಚೆಗೆ ಕಪ್ಪು ಚಹಾ ತುಂಬಾ ಒಳ್ಳೆಯದು.ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ಮೊಡವೆ ಬರದಂತೆ ರಕ್ಷಿಸುತ್ತವೆ. ಹಾಗಂತ ಅಧಿಕ ಪ್ರಮಾಣದಲ್ಲಿ ಕಪ್ಪು ಚಹಾ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ
ಕೂದಲಿನ ಆರೈಕೆಗೆ
ಕೂದಲು ಸುಂದರವಾಗಲು ಹಾಗೂ ತಲೆಯ ಚರ್ಮದ ಆರೋಗ್ಯಕ್ಕೆ ಬ್ಲಾಕ್ ಟೀ ಉತ್ತಮ
ಅಜೀರ್ಣ ಸಮಸ್ಯೆ 
ಬ್ಲಾಕ್ ಟೀಯಲ್ಲಿರುವ ಟೆನಿನ್ ಮತ್ತು ಇತರ ರಸಾಯನಿಕ ವಸ್ತುಗಳು ಜೀರ್ಣ ಕ್ರಿಯೆಗೆ ಸಹಕರಿಸುತ್ತವೆ.
ಬೇಧಿ
ಬೇಧಿಯಾಗುತ್ತಿದ್ದರೆ ಒಂದು ಕಪ್ ಕಪ್ಪು ಚಹಾ ಕುಡಿದರೆ ಬೇಧಿ ನಿಲ್ಲುತ್ತದೆ
ಕ್ಯಾನ್ಸರ್ 
ಹೊಟ್ಟೆ, ಕರುಳು, ಶ್ವಾಸಕೋಶ, ಗರ್ಭಕೋಶ ಮತ್ತು ಸ್ತನ ಕ್ಯಾನ್ಸರ್ ಮೊದಲಾದವುಗಳನ್ನು ತಡೆಯಲು ಬ್ಲಾಕ್ ಟೀ ಸಹಕಾರಿ
ಕೊಲೆಸ್ಟ್ರಾಲ್ ನಿಯಂತ್ರಣ
ದಿನಾ ಬ್ಲಾಕ್ ಟೀ ಸೇವಿಸುತ್ತಿದ್ದರೆ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುವುದು ಮಾತ್ರವಲ್ಲದೆ ಹೃದಯಾಘಾತವನ್ನು ತಡೆಯುತ್ತದೆ.
ಆರೋಗ್ಯವಂತ ಹೃದಯಕ್ಕೆ
ಪ್ರತಿ ದಿನ ಕಪ್ಪು ಚಹಾ ಕುಡಿದರೆ ಹೃದಯ ಸಂಬಂಧಿ ರೋಗಗಳಿಂದ ದೂರವಿರಬಹುದು.
ಅಸ್ತಮಾ
ಬಿಸಿ ಬಿಸಿ ಬ್ಲಾಕ್ ಟೀ ಕುಡಿದರೆ ಉಸಿರಾಟ ಸಮಸ್ಯೆ ದೂರವಾಗುತ್ತದೆ.
ಏಕಾಗ್ರತೆ
ಬ್ಲಾಕ್ ಟೀ ಮೆದುಳನ್ನು ಉತ್ತೇಜಿಸುವ ಮೂಲಕ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com