ಎಬೋಲಾದಿಂದ ಚೇತರಿಸಿಕೊಂಡವರ ವೀರ್ಯಾಣುಗಳಲ್ಲಿ 9 ತಿಂಗಳ ಕಾಲ ವೈರಸ್ ಜೀವಂತ: ವರದಿ

ಎಬೋಲಾದಿಂದ ಚೇತರಿಸಿಕೊಂಡಿರುವ ಪುರುಷರ ವೀರ್ಯಾಣುಗಳಲ್ಲಿ ಕನಿಷ್ಠ 9 ತಿಂಗಳ ಕಾಲ ಎಬೊಲ ವೈರಸ್ ಜೀವಂತವಾಗಿರುತ್ತವೆ ಎಂದು ಹೊಸ ಸಂಶೋಧನೆ ಎಚ್ಚರಿಸಿದೆ.
ಎಬೋಲಾ ವೈರಸ್(ಸಂಗ್ರಹ ಚಿತ್ರ)
ಎಬೋಲಾ ವೈರಸ್(ಸಂಗ್ರಹ ಚಿತ್ರ)

ವಾಷಿಂಗ್ಟನ್: ಎಬೋಲಾದಿಂದ ಚೇತರಿಸಿಕೊಂಡಿರುವ ಪುರುಷರ ವೀರ್ಯಾಣುಗಳಲ್ಲಿ ಕನಿಷ್ಠ 9 ತಿಂಗಳ ಕಾಲ ಎಬೊಲ ವೈರಸ್  ಜೀವಂತವಾಗಿರುತ್ತವೆ ಎಂದು ಹೊಸ ಸಂಶೋಧನೆ ಎಚ್ಚರಿಸಿದೆ.
ಎಬೋಲಾ ಪೀಡಿತ ಪುರುಷರ ವೀರ್ಯಾಣುಗಳಲ್ಲಿ ಎಬೋಲಾ ವೈರಸ್ ಇರುವಿಕೆ ಬಗ್ಗೆ ಮಾಹಿತಿ ಇತ್ತಾದರೂ ಅದರ ಇರುವಿಕೆ ಕಾಲಾವಧಿ ಬಗ್ಗೆ ಈ ವರೆಗೂ ಮಾಹಿತಿ ಇರಲಿಲ್ಲ. ಈಗ ನಿರ್ದಿಷ್ಟ ಕಾಲಮಿತಿ ಬಗ್ಗೆ ಸಂಧೋಧನೆ ನಡೆದಿದ್ದು ಎಬೋಲಾದಿಂದ ಬದುಕುಳಿದ ವ್ಯಕ್ತಿಗಳ ವೀರ್ಯಾಣುಗಳಲ್ಲಿ ಕನಿಷ್ಠ 9 ತಿಂಗಳ ಕಾಲ ಎಬೋಲಾ ವೈರಸ್ ಜೀವಂತವಾಗಿರುತ್ತದೆ ಎಂದು ಹೇಳಲಾಗಿದೆ.  
18 ವಯೋಮಾನದ 93 ಪುರುಷರ ವೀರ್ಯದ  ಮಾದರಿಗಳನ್ನು ಪರೀಕ್ಷಿಸಲಾಗಿದ್ದು,ಎಬೋಲಾ ಪ್ರಾರಂಭವಾದ ಮೊದಲ ಮೂರು ತಿಂಗಳಿನಿಂದ 9 ತಿಂಗಳ ವರೆಗೆ ವಿರ್ಯಾನುಗಳಲ್ಲಿ ಎಬೋಲಾ ವೈರಾಣುಗಳು ಜೀವಂತವಾಗಿರುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.  
ಎಬೋಲಾದಿಂದ ಚೇತರಿಸಿಕೊಂಡಿರಿವ ವ್ಯಕ್ತಿಗಳ ವೀರ್ಯಾಣು ಪರೀಕ್ಷೆಯಲ್ಲಿ ಕನಿಷ್ಠ ಎರಡು ಬಾರಿ ಎಬೋಲಾ ವೈರಾಣುಗಳು ಇಲ್ಲದೇ ಇರುವುದು ಖಾತ್ರಿಯಾಗುವವರೆಗೂ ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು ಅಪಾಯಕಾರಿ ಎಂದು ಸಂಶೋಧನೆಯ ವರದಿ ಎಚ್ಚರಿಸಿದೆ.
ಸಿಯೆರಾ ಲಿಯೋನ್ ನ ಆರೋಗ್ಯ ಮತ್ತು ನೈರ್ಮಲ್ಯ ಸಚಿವಾಲಯ ವಿಶ್ವ ಆರೋಗ್ಯ ಸಂಸ್ಥೆ ಮತ್ತು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಹಾಗೂ ಅಮೇರಿಕಾದ ಕೇಂದ್ರಗಳ ಸಹಯೋಗದಲ್ಲಿ ಸಂಶೋಧನೆ ನಡೆಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com