
ಸೊಳ್ಳೆಯೂ ತಾರತಮ್ಯ ಮಾಡುತ್ತಾ? ಒಬ್ಬರನ್ನು ಕಚ್ಚೋದು, ಮತ್ತೊಬ್ಬರನ್ನು ಸುಮ್ಮನೆ ಬಿಡೋದು! ಸೊಳ್ಳೆಯ ಈ ಬುದ್ಧಿ ಯಾಕೆ ಎಂಬ ಪ್ರಶ್ನೆಯಿಟ್ಟುಕೊಂಡು ಮೊನ್ನೆಯೊಂದು ಸಂಶೋಧನೆ ನಡೆಯಿತು.
ಸೊಳ್ಳೆಗಳು ಎಲ್ಲರ ಮೇಲೂ ಸಮಾನವಾಗಿ ದಾಳಿ ಮಾಡೋಲ್ಲ ಎಂದು ಪ್ರತಿಪಾದಿಸುತ್ತಾರೆ ಆಸ್ಟ್ರೇಲಿಯಾದ ವೈದ್ಯ ವಿಜ್ಞಾನಿಗಳು. ಸಾಮಾನ್ಯವಾಗಿ ಪ್ರತಿ ಹೆಣ್ಣು ಸೊಳ್ಳೆಗಳಷ್ಟೇ ಮನುಷ್ಯರ ಮೇಲೆ ಮೊಟ್ಟೆಗಳನ್ನು ಇಡುತ್ತವಂತೆ. ಸೊಳ್ಳೆಗಳಿಗೆ ಮೊಟ್ಟೆ ಇಡಲು ನೆರವಾಗುವ ಅಂಶ ಮನುಷ್ಯರ ರಕ್ತದಲ್ಲಿರುತ್ತದೆ. ಹೀಗಾಗಿ ಹೆಣ್ಣು ಸೊಳ್ಳೆಗಳಷ್ಟೇ ಮನುಷ್ಯರ ಮೇಲೆ ದಾಳಿಗೈದು ರಕ್ತ ಹೀರುತ್ತವೆ. ಅಲ್ಕೋಹಾಲ್ ಸೇವಿಸುವವರಿಗೆ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ ಅಂತಾರೆ ತಜ್ಞ ಕ್ಯಾರೋನ್ ವೆಬ್.
ನಾವು ಉಸಿರಾಡುವಾಗ ಕಾರ್ಬನ್ ಡೈಆಕ್ಸೈಡನ್ನು ಹೊರಚೆಲ್ಲುತ್ತೇವೆ. ನಮ್ಮ ಚರ್ಮದಿಂದಲೂ ಸಣ್ಣ ಪ್ರಮಾಣದ ಉಸಿರಾಟ ನಡೆಯುತ್ತದೆ. ಅಲ್ಲಿಂದಲೂ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆಯಾಗುತ್ತದೆ. ಇದು ಸೊಳ್ಳೆಗಳಿಗೆ ನಮ್ಮ ಇರುವಿನ ಸುಳಿವು ನೀಡುತ್ತದಂತೆ. ಈ ಮೂಲಕವೇ ಅವು ಆ ವ್ಯಕ್ತಿಯ ರಕ್ತ ಪ್ರಿಯವೋ ಅಲ್ಲವೋ ಎಂಬುದನ್ನು ಗ್ರಹಿಸುತ್ತವಂತೆ.
Advertisement