ಡೆಂಗ್ಯು ಜ್ವರ: ನಾವು ತಿಳಿದಿರಬೇಕಾದ ಮಾಹಿತಿ

ನಮ್ಮ ರಾಜ್ಯ ಸೇರಿದಂತೆ ದೇಶಾದ್ಯಂತ ಕಾಡುವ ಒಂದು ಮಾರಣಾಂತಿಕ ಜ್ವರ ಡೆಂಗ್ಯು. ಈ ವರ್ಷ ನಮ್ಮ ರಾಜ್ಯವೊಂದರಲ್ಲೇ ಸಾವಿರಕ್ಕೂ ಹೆಚ್ಚು ಡೆಂಗ್ಯು...
ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಡೆಂಗ್ಯು ಜ್ವರಕ್ಕೆ ಚಿಕಿತ್ಸೆ ನೀಡುತ್ತಿರುವುದು
ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಡೆಂಗ್ಯು ಜ್ವರಕ್ಕೆ ಚಿಕಿತ್ಸೆ ನೀಡುತ್ತಿರುವುದು

ನಮ್ಮ ರಾಜ್ಯ ಸೇರಿದಂತೆ ದೇಶಾದ್ಯಂತ ಕಾಡುವ ಒಂದು ಮಾರಣಾಂತಿಕ ಜ್ವರ ಡೆಂಗ್ಯು. ಈ ವರ್ಷ ನಮ್ಮ ರಾಜ್ಯವೊಂದರಲ್ಲೇ ಸಾವಿರಕ್ಕೂ ಹೆಚ್ಚು ಡೆಂಗ್ಯು ಪ್ರಕರಣಗಳು ಪತ್ತೆಯಾಗಿವೆ. ದೇಶದ ರಾಜಧಾನಿ ದೆಹಲಿಯ ಜನತೆ ಈಗ ಡೆಂಗ್ಯು ಜ್ವರದಿಂದ ನಲುಗಿ ಹೋಗಿದ್ದಾರೆ. ಈ ಜ್ವರ ಹೇಗೆ ಬರುತ್ತದೆ, ಕಾರಣ ಮತ್ತು ಪರಿಹಾರವೇನು ಎಂಬ ಬಗ್ಗೆ ಸ್ವಲ್ಪ ಮಾಹಿತಿ:

ಹೆಣ್ಣು ಏಡಿಸ್ ಈಜಿಪ್ಟಿ ಎಂಬ ಸೊಳ್ಳೆಯಿಂದ ಹರಡುವ ಸೋಂಕು ಇದಾಗಿದ್ದು, ಮನುಷ್ಯನ ದೇಹಕ್ಕೆ ಕಚ್ಚಿ ರಕ್ತದಲ್ಲಿ ಮೊಟ್ಟೆಯನ್ನಿಡುತ್ತದೆ. ಇದು ಇತರ ಜ್ವರದಂತೆ ಒಬ್ಬರಿಂದ ಒಬ್ಬರಿಗೆ ನೇರವಾಗಿ ಹರಡುವುದಿಲ್ಲ.ಏಡಿಸ್ ಈಜಿಪ್ಟಿ ಸೊಳ್ಳೆ ಹಗಲು ಹೊತ್ತಿನಲ್ಲಿ ಕಚ್ಚುತ್ತದೆ. ಮಳೆ ನೀರಿನಲ್ಲಿ, ನಿಂತ ನೀರಿನಲ್ಲಿ, ಹೂವಿನ ಕುಂಡ, ಪ್ಲಾಸ್ಟಿಕ್ ಬ್ಯಾಗ್, ಹಳೆಯ ಟೈರ್, ಪಾತ್ರೆಗಳು, ಗುಂಡಿಗಳು ಮತ್ತು ಕಸಗಳಲ್ಲಿ ಸೊಳ್ಳೆ ಉತ್ಪತ್ತಿಯಾಗುತ್ತದೆ.

ಲಕ್ಷಣಗಳೇನು?
ಒಬ್ಬ ಮನುಷ್ಯನಿಗೆ ಸೊಳ್ಳೆ ಕಚ್ಚಿ 5ರಿಂದ 6 ದಿನಗಳಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಜ್ವರ 7ರಿಂದ 10 ದಿವಸಗಳವರೆಗೆ ಬರುತ್ತದೆ. ಡೆಂಗ್ಯು ಜ್ವರಕ್ಕೆ ತುತ್ತಾದವರು ಇತರ ಜ್ವರಕ್ಕಿಂತ ಹೆಚ್ಚು 103 ಡಿಗ್ರಿ ಫ್ಯಾರನ್ ಹೇಟ್ ಗಿಂತ ಅಧಿಕ ಜ್ವರದಿಂದ ಬಳಲುತ್ತಾರೆ. ಹಣೆಯಲ್ಲಿ, ಕಣ್ಣಿನ ಹಿಂದೆ, ದೇಹದ ಗಂಟುಗಳಲ್ಲಿ ವಿಪರೀತ ನೋವು, ವಾಕರಿಕೆ ಅನುಭವ ಮತ್ತು ವಾಂತಿ, ಹೊಟ್ಟೆ ಸೆಳೆತ,  ವಸಡು ಸೇರಿದಂತೆ ಆಂತರಿಕ ರಕ್ತಸ್ರಾವ, ತುರಿಕೆ ಡೆಂಗ್ಯು ಜ್ವರದ ಲಕ್ಷಣಗಳು.
ಡೆಂಗ್ಯು ಜ್ವರದಲ್ಲಿ ನಾಲ್ಕು ವಿಧಗಳಿವೆ. ವೈರಸ್ -ಡೆನ್-1, ಡೆನ್-2, ಡೆನ್-3 ಮತ್ತು ಡೆನ್-4 ಎಂದು. ಡೆಂಗ್ಯು ಜ್ವರವು ಜೀವನದಲ್ಲಿ 4 ಬಾರಿ ಬರಬಹುದು ಎನ್ನುತ್ತಾರೆ ವೈದ್ಯರು.

ಚಿಕಿತ್ಸೆ ಏನು?: ಡೆಂಗ್ಯು ವೈರಸ್ ಸೋಂಕು ಆಗಿರುವುದರಿಂದ ಜ್ವರಕ್ಕೆ ಔಷಧ ತೆಗೆದುಕೊಳ್ಳಲು ಆರಂಭಿಸಿ ಒಂದು ವಾರದಲ್ಲಿ ಗುಣಮುಖನಾಗುತ್ತಾ ಬರುತ್ತಾನೆ. ನೋವಿಗೆ ಮಾತ್ರೆ ತೆಗೆದುಕೊಳ್ಳುವುದು ಮತ್ತು ದೇಹ ನೀರಿಲ್ಲದೆ ಒಣಗುವುದನ್ನು ತಪ್ಪಿಸಲು ಧಾರಾಳವಾಗಿ ದ್ರವ ಪದಾರ್ಥ ತೆಗೆದುಕೊಳ್ಳಬೇಕು.

ಡೆಂಗ್ಯು ಜ್ವರಕ್ಕೆ ಯಾವುದೇ ಚುಚ್ಚುಮದ್ದು ಇಲ್ಲ. ಮನುಷ್ಯನ ಪ್ರತಿ ಎಂಎಲ್ ರಕ್ತದಲ್ಲಿ ಪ್ಲೇಟ್ಲೆಟ್ ನ ಸಂಖ್ಯೆ 30 ಸಾವಿರಕ್ಕಿಂತ ಕಡಿಮೆಯಾದರೆ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗುವುದು ಉತ್ತಮ. ಮನುಷ್ಯನ ರಕ್ತದಲ್ಲಿ ಪ್ಲೇಟ್ಲೆಟ್ ಗಳ ಪಾತ್ರ ಅತ್ಯಂತ ಮುಖ್ಯ. ಒಂದು ಎಂಎಲ್ ರಕ್ತದಲ್ಲಿ ಒಂದು ಲಕ್ಷದ 50 ಸಾವಿರದಿಂದ 4 ಲಕ್ಷದ 50 ಸಾವಿರದವರೆಗೆ ಪ್ಲೇಟ್ಲೆಟ್ ಗಳ ಸಂಖ್ಯೆ ಇರಬೇಕು. ಇದಕ್ಕಿಂತ ಕಡಿಮೆ ಹೋದರೆ ರಕ್ತಸ್ರಾವವಾಗಿ, ಆಘಾತವುಂಟಾಗಿ ಮನುಷ್ಯ ಸಾವನ್ನಪ್ಪಬಹುದು.

ಮನೆಯಲ್ಲಿ ಹೇಗೆ ಜಾಗೃತೆ ಮಾಡಬಹುದು? ಸೊಳ್ಳೆ ಕಚ್ಚದಂತೆ ಆದಷ್ಟು ದೇಹವನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಕು. ಸೊಳ್ಳೆ ಮನೆ ಸುತ್ತಮುತ್ತ, ಮನೆಯೊಳಗೆ ಬಾರದಂತೆ ತಡೆಗಟ್ಟಬೇಕು. ಮನೆ ಸುತ್ತಮುತ್ತ ನೀರು ನಿಂತುಕೊಳ್ಳದಂತೆ, ಸ್ವಚ್ಛವಾಗಿಟ್ಟುಕೊಂಡರೆ ಆದಷ್ಟು ಡೆಂಗ್ಯು ಬಾರದಂತೆ ತಡೆಗಟ್ಟಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com