ಮಧುಮೇಹಕ್ಕೆ ನೀಡಲಾಗುವ ಔಷಧಿ ಮದ್ಯವ್ಯಸನದಿಂದ ಮುಕ್ತಿ ಪಡೆಯಲೂ ಸಹಕಾರಿ!

ಮಧುಮೇಹಕ್ಕೆ ನೀಡಲಾಗುವ ಔಷಧಿ ಮದ್ಯವ್ಯಸನದಿಂದ ಮುಕ್ತರಾಗುವುದಕ್ಕೂ ಉಪಯುಕ್ತವಾಗಲಿದೆ ಎಂದು ಹೊಸ ಸಂಶೋಧನಾ ವರದಿ ತಿಳಿಸಿದೆ.
ಮದ್ಯವ್ಯಸನ(ಸಾಂಕೇತಿಕ ಚಿತ್ರ)
ಮದ್ಯವ್ಯಸನ(ಸಾಂಕೇತಿಕ ಚಿತ್ರ)

ವಾಷಿಂಗ್ ಟನ್: ಮಧುಮೇಹಕ್ಕೆ ನೀಡಲಾಗುವ ಔಷಧಿ ಮದ್ಯವ್ಯಸನದಿಂದ ಮುಕ್ತರಾಗುವುದಕ್ಕೂ ಉಪಯುಕ್ತವಾಗಲಿದೆ ಎಂದು ಹೊಸ ಸಂಶೋಧನಾ ವರದಿ ತಿಳಿಸಿದೆ.

ಇಲಿಗಳ ಮೇಲೆ ಹೊಸ ಸಂಶೋಧನೆಯನ್ನು ನಡೆಸಲಾಗಿದ್ದು, ಮಧುಮೇಹ ಹಾಗೂ ಸ್ಥೂಲ ಕಾಯಕ್ಕೆ ನೀಡಲಾಗುವ ಔಷಧಿಯನ್ನೇ ಮದ್ಯವ್ಯಸನದಿಂದ ಮುಕ್ತಿ ಪಡೆಯುವುದಕ್ಕೂ ಬಳಸಬಹುದಾಗಿದೆ ಎಂಬುದು ಸಾಬೀತಾಗಿದೆ. ಗೋಥೆನ್ಬರ್ಗ್ ನ ವಿಶ್ವವಿದ್ಯಾನಿಲಯ ನಡೆಸಿರುವ ಸಂಶೋಧನೆಯ ಪ್ರಕಾರ ಹಾರ್ಮೋನ್ ಜಿ.ಎಲ್.ಪಿ -1 ಗೆ ಚಿಕಿತ್ಸೆ ನೀಡಿದರೆ ಮದ್ಯವ್ಯಸನದಿಂದ ಮುಕ್ತರಾಗುವುದಕ್ಕೆ ಸಾಧ್ಯವಿದೆ ಎಂಬುದನ್ನು ಕಂಡುಕೊಂಡಿದ್ದಾರೆ.

ಟೈಪ್ 2 ಡಯಾಬಿಟಿಸ್ ಗೆ ನೀಡಲಾಗುವ ಚಿಕಿತ್ಸೆಯನ್ನೇ ಮದ್ಯವ್ಯಸನಕ್ಕೂ ನೀಡಬಹುದಾಗಿದೆಯಂತೆ. ಈ ಅಧ್ಯಯನ ವರದಿ ಅಡಿಕ್ಷನ್ ಬಯಾಲಜಿ ಎಂಬ ಜರ್ನಲ್ ನಲ್ಲಿ ಪ್ರಕಟವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com