
ನೋಡಲು ಎಷ್ಟು ಡಿಫರೆಂಟ್ ಆಗಿದೆಯೋ ರುಟಿಯಲ್ಲೂ ಕೂಡ ವಿಭಿನ್ನ ಕಿವಿಹಣ್ಣು. ಕಿವಿ ಹಣ್ಣಿನಲ್ಲಿ ಹಲವಾರು ಜೀವಸತ್ವಗಳು ಮತ್ತು ಖನಿಜಾಂಶ ಇದ್ದು, ಆರೋಗ್ಯಕ್ಕೆ ಉತ್ತಮವಾಗಿವೆ. ಕಿವಿ ಹಣ್ಣಿನಲ್ಲಿ ಪೊಟಾಷಿಯಂ ಅಂಶ ಜಾಸ್ತಿ ಇದೆ. ಅಲ್ಲದೇ ಹೃದಯ ಬಡಿತ ಹಾಗೂ ರಕ್ತದೊತ್ತಡ ನಿವಾರಿಸಲು ಇದು ಬಹಳ ಉಪಕಾರಿ.
ಕಿವಿ ಹಣ್ಣಿನಲ್ಲಿ ವಿಟಮಿನ್ ಇ ಅಂಶವಿದ್ದು, ಇದು ಚರ್ಮದ ಆರೋಗ್ಯಕ್ಕೆ ಉತ್ತಮ. ಕಿವಿ ಹಣ್ಣು ಆಂಟಿ ಆಕ್ಸಿಡೆಂಟ್ ಒಳಗೊಂಡಿದ್ದು, ಚರ್ಮ ಹೊಳೆಯುವಂತೆ ಮಾಡುತ್ತದೆ. ಹಣ್ಣಿನಲ್ಲಿ ವಿಟಮಿನ್ ಸಿ ಇದ್ದು, ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಜೀರ್ಣಕಾರಿಯೂ ಹೌದು. ಮಲಬದ್ಧತೆ ಮತ್ತು ಇತರ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ತಡೆಯುತ್ತದೆ. ಕಿವಿ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ.
ಇನ್ನು ಡೆಂಘೀ ಜ್ವರದಿಂದ ಬಳಲುತ್ತಿರುವವರು ಪ್ರತಿದಿನ ಕಿವಿಹಣ್ಣನ್ನು ತಿಂದರೆ ರಕ್ತಕಣವನ್ನು ಹೆಚ್ಚು ಮಾಡುತ್ತದೆ. ಹೀಗಾಗಿ ಡೆಂಘೀ ಸೋಂಕಿಗೆ ರಾಮಭಾಣವಾಗಿದೆ. ಹಿಮಾಚಲ ಪ್ರದೇಶದಲ್ಲಿ ಇದರ ಕೃಷಿ ಅತ್ಯಂತ ಯಶಸ್ವಿಯಾಗಿದ್ದು ಜಮ್ಮು-ಕಾಶ್ಮೀರಕ್ಕೂ ಕಾಲಿರಿಸಿದೆ. ಮಾರುಕಟ್ಟೆಯಲ್ಲಿ ತುಂಬ ಬೇಡಿಕೆಯಿದೆ ಈ ಹಣ್ಣಿಗೆ.
ಕಿವಿ ಹಣ್ಣಿನಿಂದ ತಯಾರಾಗುವ ವೈನ್‌ಗೆ ಭಾರೀ ಬೇಡಿಕೆ ಇದೆ. ಸೌಂದರ್ಯ ವರ್ಧಕವಾಗಿಯೂ ಕಿವಿ ಹಣ್ಣು ಬಳಸಲಾಗುತ್ತದೆ. ದಿನಕ್ಕೆ ಒಂದು ಕಿವಿಹಣ್ಣು ತಿಂದರೆ ದೇಹಕ್ಕೆ ಅಗತ್ಯವಿರುವಷ್ಟು ‘ಸಿ’ ಜೀವಸತ್ವ ಪೂರ್ಣವಾಗಿ ಸಿಗುತ್ತದೆ ಎನ್ನುತ್ತಾರೆ ಆಹಾರ ಪರಿಣಿತರು.
ಕಿವಿ ಹಣ್ಣಿನಲ್ಲಿರುವ ಫೈಟೊ ನ್ಯೂಟ್ರಿಯೆಟ್ಸ್ ಸತ್ವಗಳು ರೋಗಾಣುಗಳೊಂದಿಗೆ ಹೋರಾಡಲು ಶಕ್ತವಾಗಿವೆ. ಹೃದಯಕ್ಕೆ ಅಗತ್ಯವಾದ ‘ಇ’ ಜೀವಸತ್ವವಿದೆ. ಕೊಲೆಸ್ಟ್ರಾಲ್ ತಗ್ಗಿಸುತ್ತದೆ. ಹೃದಯಾಘಾತದ ಅಪಾಯವನ್ನು ನಿವಾರಿಸುತ್ತದೆ. ಹೆಂಗಸರು ಮತ್ತು ಮಕ್ಕಳ ಆರೋಗ್ಯಕ್ಕೆ ಸಹಕಾರಿ. ಗರ್ಭಿಣಿಯರು ನಿತ್ಯವೂ ತಿನ್ನುವುದರಿಂದ ಗರ್ಭಸ್ಥ ಶಿಶುವಿಗೂ ಸುರಕ್ಷೆ ನೀಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಬಾಳೆಹಣ್ಣಿಗಿಂತ ಹೆಚ್ಚು ಪೊಟಾಷಿಯಂ ಇದರಲ್ಲಿದೆ. ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆದು ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ.
ಅಧಿಕ ರಕ್ತದೊತ್ತಡ, ಮೂತ್ರಪಿಂಡದ ಕಲ್ಲು ಇದಕ್ಕೆಲ್ಲ ಮದ್ದಾಗುವ ಕೀವಿ ಜೀವಕೋಶಗಳಲ್ಲಿ ಡಿಎನ್‌ಎ ಹಾನಿಯನ್ನು ತಡೆಯಲು ಸಮರ್ಥವಾಗಿದೆ.
ಕಿವಿ ಹಣ್ಣಿನಲ್ಲಿ ಇತರ ಹಣ್ಣಿನಲ್ಲಿರುವುದಕ್ಕಿಂತ ಅಧಿಕ ಪ್ರಮಾಣದಲ್ಲಿ ಫಾಲಿಕ್ ಆಸಿಡ್ ಇರುವುದರಿಂದ ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ನಂತರ ಇದನ್ನು ತಿನ್ನುವುದು ಒಳ್ಳೆಯದು. ಕಿವಿ ಹಣ್ಣಿನಲ್ಲಿರುವ ಸತು ಪುರುಷರಲ್ಲಿರುವ ಹಾರ್ಮೋನ್ ಟೆಸ್ಟೋಸ್ಟಿರೋನ್(testosterone) ಹೆಚ್ಚು ಮಾಡುವಲ್ಲಿ ಸಹಕಾರಿಯಾಗಿದೆ.
ಕಿವಿ ಹಣ್ಣು ರುಚಿ ಮಾತ್ರವಲ್ಲ ಅನೇಕ ಆರೋಗ್ಯಕರ ಗುಣವನ್ನು ಹೊಂದಿದೆ. ಈ ಎಲ್ಲಾ ಹಣ್ಣಿನ ಅಂಗಡಿಗಳಲ್ಲಿ, ಫುಡ್ ಬಜಾರ್ ಗಳಲ್ಲಿ ದೊರೆಯುತ್ತದೆ.
Advertisement