ವಾಲ್ ನಟ್ ಸೇವನೆಯಿಂದ ಮುಪ್ಪಿನಲ್ಲೂ ಆರೋಗ್ಯ

ವಾಲ್ ನಟ್(ಆಕ್ರೋಟ) ಸೇವನೆ ಉತ್ತಮ ಆರೋಗ್ಯ ಕಾಪಾಡುವಲ್ಲಿ ಸಹಾಯವಾಗುತ್ತದೆ. ಪ್ರತಿ ದಿನ ವಾಲ್ ನಟ್...
ವಾಲ್ ನಟ್
ವಾಲ್ ನಟ್
ವಾಷಿಂಗ್ಟನ್: ವಾಲ್ ನಟ್(ಆಕ್ರೋಟ) ಸೇವನೆ ಉತ್ತಮ ಆರೋಗ್ಯ ಕಾಪಾಡುವಲ್ಲಿ ಸಹಾಯವಾಗುತ್ತದೆ. ಪ್ರತಿ ದಿನ ವಾಲ್ ನಟ್ ಸೇವಿಸಿದರೆ, ವೃದ್ಧಾಪ್ಯದಲ್ಲಿ ಬರುವ ಕಾಯಿಲೆಗಳನ್ನು ತಡೆಯುವಲ್ಲಿ ಸಹಕಾರಿಯಾಗುತ್ತದೆ ಎಂದು ನೂತನ ಅಧ್ಯಯನ ಹೇಳಿದೆ. 
ಇತ್ತೀಚೆಗೆ ವಾಲ್ ನಟ್ ಕುರಿತು ನಡೆಸಿದ ಅಧ್ಯಯನದಲ್ಲಿ ಈ ವಿಷಯ ತಿಳಿದು ಬಂದಿದೆ. ಪ್ರತಿದಿನ ವಾಲ್ ನಟ್ ಬೀಜಗಳನ್ನು ತಿನ್ನುವುದರಿಂದ ಇವು ದೇಹದಲ್ಲಿನ ಜೀವಕೋಶಗಳ ಮೇಲ್ಪದರದ ಸಂಯೋಜನೆಯನ್ನು ಉತ್ತಮಗೊಳಿಸುವುದಲ್ಲದೆ ರಕ್ತದಲ್ಲಿನ ಬೇಡವಾದ ಕೊಲೆಸ್ಟ್ರಾಲ್ ಆಮ್ಲ ತಗ್ಗಿಸಲು ಸಹಕಾರಿಯಾಗಿದೆ ಎಂದು ಅಧ್ಯಯನ ಹೇಳಿದೆ. 
ವಾಲ್ ನಟ್ ಬೀಜಗಳ ಸೇವನೆಯಿಂದ ದೇಹದಲ್ಲಿ ರಕ್ತ ಚಲನೆ ಉತ್ತಮಗೊಂಡು ದೈಹಿಕ ಹಾಗೂ ಮಾನಸಿಕ ಉಲ್ಲಾಸವನ್ನು ಹೆಚ್ಚಿಸುತ್ತದೆ. ವಾಲ್ ನಟ್ ಸೇವನೆಯಿಂದ ತೂಕ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ಒಂದು ವರ್ಷಗಳ ಕಾಲ ಪ್ರತಿ ದಿನ ಆಕ್ರೋಟ ಬೀಜವನ್ನು ಸೇವಿಸಿದರೆ, ರಕ್ತ ಶುದ್ಧಿಯಾಗುತ್ತದೆ ಹೊರತು, ತೂಕದ ಪರಿಣಾಮ ಬೀರುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. 
ವಾಲ್ ನಟ್ ಬೀಜ ತಿಂದರೆ ವಯಸ್ಸಾದಗಲೂ ಆರೋಗ್ಯವನ್ನು ಕಾಪಾಡಬಹುದು. ವೃದ್ಧಾಪ್ಯದಲ್ಲಿ ಕಾಡುವ ಸುಸ್ತು, ಸೋಲನ್ನು ಪರಿಹರಿಸಲು ಇದು ಸಹಕಾರಿಯಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com