ದಿನನಿತ್ಯ ಸೇವಿಸುವ ಮಜ್ಜಿಗೆಯಲ್ಲಿದೆ ಹಲವು ಔಷಧೀಯ ಗುಣಗಳು

ಬಿರು ಬಿಸಿಲಲ್ಲಿ ದಾಹ ನೀಗುವ ಸಲುವಾಗಿ ಹಾಗೂ ದೇಹ ನಿರ್ಜಲೀಕರಣ ಆಗದಂತೆ ತಡೆಯಲು ಮಜ್ಜಿಗೆ ಕುಡಿಯುವುದು ಬಹಳ ಉಪಕಾರಿ. ..
ಮಜ್ಜಿಗೆ
ಮಜ್ಜಿಗೆ

ಬಿರು ಬಿಸಿಲಲ್ಲಿ ದಾಹ ನೀಗುವ ಸಲುವಾಗಿ ಹಾಗೂ ದೇಹ ನಿರ್ಜಲೀಕರಣ ಆಗದಂತೆ ತಡೆಯಲು ಮಜ್ಜಿಗೆ ಕುಡಿಯುವುದು ಬಹಳ ಉಪಕಾರಿ.

ನಾವು ಕುಡಿಯುವ ಮಜ್ಜಿಗೆಯಲ್ಲಿ ಹಲವು ಆರೋಗ್ಯಕರ ಅಂಶಗಳು ಅಡಗಿದೆ. ಮಜ್ಜಿಗೆ ಕೇವಲ ದಾಹ ನೀಗುವ ಹಾಗೂ ದೇಹಕ್ಕೆ ತಂಪನ್ನು ನೀಡುವ ಪಾನೀಯ ಅಲ್ಲಾ. ಬದಲಾಗಿ ಇದು ನಮ್ಮ ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ.

ಮಜ್ಜಿಗೆಯಲ್ಲಿರುವ ಪ್ರೊಬಯೋಟಿಕ್ಸ್‌ ಜೀರ್ಣಕ್ರಿಯೆ ಹೆಚ್ಚಾಗಲು ಸಹಾಯ ಮಾಡುತ್ತದೆ. ಬೇಸಿಗೆಯ ಬಿಸಿಲಿನಿಂದ ದೇಹ ಬಿಸಿಯಾಗುತ್ತದೆ. ಇದನ್ನು ತಣಿಸಲು ಮಜ್ಜಿಗೆ ಸಹಾಯ ಮಾಡುತ್ತದೆ. ಮಜ್ಜಿಗೆ ಕುಡಿಯುವುದರಿಂದ ಆ್ಯಸಿಡಿಟಿ ದೂರಾಗುತ್ತದೆ.

ಹೆಚ್ಚು ಖಾರ ಹಾಗೂ ಮಸಾಲೆ ಪದಾರ್ಥ ಸೇವನೆ ಮಾಡಿದ್ದರೆ, ಹೊಟ್ಟೆ ಹಾಗೂ ಎದೆ ಉರಿಯನ್ನು ನಿವಾರಿಸಲು ಮಜ್ಜಿಗೆ ಸಹಾಯ ಮಾಡುತ್ತದೆ.

ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬಿನ ಅಂಶವನ್ನು ನಿವಾರಣೆ ಮಾಡಲು ಮಜ್ಜಿಗೆ ಸಹಕಾರಿ. ಕೆಲವು ಜನರಿಗೆ ಲ್ಯಾಕ್ಟೋಸ್‌ ಸೇವನೆಯಿಂದ ಅಜೀರ್ಣ ಉಂಟಾಗುತ್ತದೆ. ಅಂತಹ ಸಂದರ್ಭದಲ್ಲಿ ಮಜ್ಜಿಗೆ ಕುಡಿದರೆ ದೇಹಕ್ಕೆ ಕ್ಯಾಲ್ಸಿಯಂ ದೊರೆಯುತ್ತದೆ.

ನಮ್ಮ ದೇಹಕ್ಕೆ ಬೇಕಾದ ಕ್ಯಾಲ್ಸಿಯಂ, ವಿಟಮಿನ್‌, ಪ್ರೊಟೀನ್‌ಗಳನ್ನು ಮಜ್ಜಿಗೆ ನೀಡುತ್ತದೆ. ಕ್ಯಾನ್ಸರ್‌ ತಡೆ, ಕೊಲೆಸ್ಟ್ರಾಲ್‌ ಕಡಿಮೆ ಹಾಗೂ ರಕ್ತದೊತ್ತಡ ನಿಯಂತ್ರಿಸಲು ಮಜ್ಜಿಗೆ ರಾಮಬಾಣವಾಗಿದೆ. ಇನ್ನು ಮಜ್ಜಿಗೆ ಕುಡಿಯುವುದರಿಂದ ಹಲವು ಹೃದಯ ಸಂಬಂಧಿ ರೋಗಗಳಿಂದ ದೂರವಿರಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com