ಪ್ರತಿದಿನ ಬಾಳೆಹಣ್ಣು ಸೇವನೆಯಿಂದ ದೃಷ್ಟಿದೋಷ ನಿವಾರಣೆ: ಸಂಶೋಧನೆ

ದಿನನಿತ್ಯ ಬಾಳೆಹಣ್ಣು ಸೇವಿಸುವುದರಿಂದ ಕಣ್ಣಿನ ಸಂಬಧಿತ ರೋಗಗಳಿಂದ ದೂರ ಇರಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ...
ಬಾಳೆಹಣ್ಣು
ಬಾಳೆಹಣ್ಣು

ಸಿಡ್ನಿ: ದಿನನಿತ್ಯ ಬಾಳೆಹಣ್ಣು ಸೇವಿಸುವುದರಿಂದ ಕಣ್ಣಿನ ಸಂಬಧಿತ ರೋಗಗಳಿಂದ ದೂರ ಇರಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ.

ಬಾಳೆಹಣ್ಣಿನಲ್ಲಿರುವ ಕ್ಯಾಟೋರಿನಾಯ್ಡ್ ಎಂಬ ದ್ರವ್ಯ ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ. ಈ ದ್ರವ್ಯ ಹಣ್ಣು ಮತ್ತು ತರಕಾರಿಗಳ ಬಣ್ಣ ಬದಲಾವಣೆಗೆ ಸಹಾಯ ಮಾಡುತ್ತದೆ.

ಹಾಗಾಗಿ ಬಾಳೆಹಣ್ಣು ಸೇವನೆ ಮಾಡುವುದರಿಂದ ಈ ದ್ರವ್ಯ ನಮ್ಮ ಕಣ್ಣುಗಳನ್ನು ಆರೋಗ್ಯವಾಗಿಡುತ್ತದೆ. ಇನ್ನೂ ಬಾಳೆಹಣ್ಣಿನಲ್ಲಿ ವಿಟಮಿನ್ ಎ ಅಧಿಕವಾಗಿದ್ದು, ಇದು ನಮ್ಮ ದೃಷ್ಟಿ ದೋಷಕ್ಕೆ ಉತ್ತಮವಾಗಿದೆ.

ಆಹಾರಗಳಲ್ಲೂ ಕೂಡ ಹೆಚ್ಚಿನ ಕ್ಯಾಟೋರಿನಾಯ್ಡ್  ಅಂಶ ಇದ್ದು, ಇದು ದೀರ್ಘಕಾಲದ ರೋಗಗಳಾದ ಕ್ಯಾನ್ಸರ್ , ಮಧುಮೇಹ, ಹಾಗೂ ಹೃದಯ ಸಂಬಂಧ ರೋಗಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ ಎಂದು ಹಿಂದಿನ ಸಂಶೋಧನೆಗಳು ತಿಳಿಸಿದ್ದವು.

ಆದರೆ ಆಹಾರದಲ್ಲಿರುವಷ್ಟೇ ಪ್ರಮಾಣದ ಕ್ಯಾಟೋರಿನಾಯ್ಡ್  ಬಾಳೆಹಣ್ಣಿನಲ್ಲಿದೆ, ಇದು ದೃಷ್ಠಿ ದೋಷ ಸಮಸ್ಯೆಯನ್ನು ನಿವಾರಿಸುತ್ತದೆ ಎಂದು ಹೊಸ ಸಂಶೋಧನೆ ತಿಳಿಸಿದೆ.

ಕಣ್ಣಿನ ದೃಷ್ಠಿದೋಷಕ್ಕೆ ವಿಟಮಿನ್ ಎ ಕೊರತೆ ಕಾರಣವಾಗಿದ್ದು,  ಅದು ಬಾಳೆಹಣ್ಣಿನಲ್ಲಿ ಯಥೇಚ್ಛವಾಗಿ ಸಿಗುವುದರಿಂದ ಕಣ್ಣಿನ ಆರೋಗ್ಯಕ್ಕೆ ಬಾಳೆ ಹಣ್ಣು ಸೇವನೆ ಉತ್ತಮವಾದದ್ದು ಎಂದು ಕ್ವೀನ್ಸ್ ಲ್ಯಾಂಡ್ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com