ಸಾಂದರ್ಭಿಕ ಚಿತ್ರ
ಆರೋಗ್ಯ-ಜೀವನಶೈಲಿ
ಒಂದು ನಿಮಿಷದ ಸತತ ವ್ಯಾಯಾಮ ಕೂಡ ಸಹಾಯಕಾರಿ
ದೇಹದಲ್ಲಿರುವ ಹೆಚ್ಚಿನ ತೂಕವನ್ನು ಇಳಿಸಬೇಕು, ಆದರೆ ಆ ವ್ಯಾಯಾಮ, ಯೋಗ ಅಂತೆಲ್ಲ ಮಾಡ್ಕೊಂಡು ಕೂರೋದು ಯಾರು? ಅಂತ...
ವಾಷಿಂಗ್ಟನ್: ದೇಹದಲ್ಲಿರುವ ಹೆಚ್ಚಿನ ತೂಕವನ್ನು ಇಳಿಸಬೇಕು, ಆದರೆ ಆ ವ್ಯಾಯಾಮ, ಯೋಗ ಅಂತೆಲ್ಲ ಮಾಡ್ಕೊಂಡು ಕೂರೋದು ಯಾರು? ಅಂತ ತಲೆಕೆಡಿಸ್ಕೋಳ್ಳೋರಿಗೆ ಇಲ್ಲಿಗೆ ಗುಡ್ ನ್ಯೂಸ್. ಕೇವಲ ಒಂದು ನಿಮಿಷ ಶ್ರದ್ಧೆಯಿಂದ ವ್ಯಾಯಾಮ ಮಾಡಿದ್ರೆ ಸಾಕು ಚೀರ್ ಅಪ್ ಆಗ್ಬಹುದು.
ಅಮೆರಿಕಾದ ಮೆಕ್ ಮಾಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರು, ಒಂದು ನಿಮಿಷ ತೀವ್ರ ವ್ಯಾಯಾಮ ಮಾಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ.
ಒಂದು ನಿಮಿಷದ ವ್ಯಾಯಾಮ ತುಂಬಾ ಅಮೂಲ್ಯವಾದದ್ದು ಎನ್ನುತ್ತಾರೆ ಮುಖ್ಯ ಲೇಖಕ ಮಾರ್ಟಿನ್ ಗಿಬಾಲಾ.
ಅನೇಕರು ವ್ಯಾಯಾಮ, ಯೋಗ ಮಾಡಲು ನಮಗೆ ಸಮಯ ಸಿಗುವುದಿಲ್ಲ ಎಂದು ಹೇಳುತ್ತಾರೆ. ಆದರೆ ಕಡಿಮೆ ಸಮಯದಲ್ಲಿಯೇ ಸಾಂಪ್ರದಾಯಿಕ ಯೋಗ, ವ್ಯಾಯಾಮಗಳಿಂದ ದೇಹದ ತೂಕ ಇಳಿಸಬಹುದು ಮತ್ತು ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಬಹುದು ಎಂದು ಸಂಶೋಧಕರು ಅಧ್ಯಯನದಲ್ಲಿ ಹೇಳಿದ್ದಾರೆ. ಪ್ಲಾಸ್ ಒನ್ ಎಂಬ ನಿಯತಕಾಲಿಕೆಯಲ್ಲಿ ಈ ಲೇಖನ ವರದಿಯಾಗಿದೆ.

