ಸಾಂದರ್ಭಿಕ ಚಿತ್ರ
ಆರೋಗ್ಯ-ಜೀವನಶೈಲಿ
ರಾತ್ರಿ ಹೊತ್ತಿನ ನಿದ್ದೆಯ ಅಡೆತಡೆಗಳು ಆತ್ಮಹತ್ಯೆಯ ಅಪಾಯವನ್ನು ಹೆಚ್ಚಿಸುತ್ತದೆ:ಅಧ್ಯಯನ
ರಾತ್ರಿಯಿಡೀ ನಿದ್ದೆ ಮಾಡದೆ ಎಚ್ಚರಿಕೆಯಿಂದಿರುವುದರಿಂದ ಮತ್ತು ದೀರ್ಘಾವಧಿಯವರಿಗೆ ರಾತ್ರಿ ಹೊತ್ತು ಉತ್ತಮ ನಿದ್ದೆ...
ಲಂಡನ್: ರಾತ್ರಿಯಿಡೀ ನಿದ್ದೆ ಮಾಡದೆ ಎಚ್ಚರಿಕೆಯಿಂದಿರುವುದರಿಂದ ಮತ್ತು ದೀರ್ಘಾವಧಿಯವರಿಗೆ ರಾತ್ರಿ ಹೊತ್ತು ಉತ್ತಮ ನಿದ್ದೆ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುವ ಮತ್ತು ಆ ರೀತಿ ಯೋಚಿಸುವ ಅಪಾಯಗಳು ಹೆಚ್ಚು ಎಂದು ಹೊಸ ಅಧ್ಯಯನವೊಂದರಿಂದ ತಿಳಿದುಬಂದಿದೆ.
ಇಂಗ್ಲೆಂಡಿನ ಆಕ್ಸ್ ಫರ್ಡ್ ಮತ್ತು ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರು 18 ಮಂದಿಯನ್ನು ಸಂದರ್ಶನ ಮಾಡಿದ್ದು ಆಗ ಆತ್ಮಹತ್ಯೆ ಪ್ರಕರಣಗಳಲ್ಲಿ ನಿದ್ದೆಯ ಸಮಸ್ಯೆ ಹೇಗೆ ಪಾತ್ರ ವಹಿಸುತ್ತದೆ ಎಂದು ತಿಳಿದುಬಂದಿದೆ.
ಸರಿಯಾಗಿ ನಿದ್ದೆ ಮಾಡದಿರುವುದರಿಂದ ಮೂರು ಅಂತರ ಸಂಬಂಧಿತ ಕಾರಣಗಳ ಮೂಲಕ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಗಳು ಬರುವುದು ಹೆಚ್ಚು ಎಂದು ಗೊತ್ತಾಗಿದೆ. ಅವುಗಳಲ್ಲಿ ಮೊದಲನೆಯದು ರಾತ್ರಿಯಿಡೀ ನಿದ್ದೆ ಮಾಡದೆ ಜಾಗರಣೆ ಕುಳಿತರೆ ಬಹಳ ಸಮಯದವರೆಗೆ ಇದೇ ಅಭ್ಯಾಸ ಮುಂದುವರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಆಲೋಚನೆಗಳು ಬರುವುದು ಹೆಚ್ಚು.
ಇನ್ನು ದೀರ್ಘ ಸಮಯಗಳವರೆಗೆ ರಾತ್ರಿ ಹೊತ್ತು ಉತ್ತಮ ನಿದ್ದೆ ಬಾರದಿದ್ದರೆ ನಂತರ ಹಗಲು ಹೊತ್ತಿನಲ್ಲಿ ನಾವು ಮಾಡುವ ಕೆಲಸದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ನಮ್ಮ ಏಕಾಗ್ರತೆ, ಚಟುವಟಿಕೆ ಮೇಲೆ ಪರಿಣಾಮ ಬೀರಿ ಒತ್ತಡ ಬೀರುತ್ತದೆ.
ಸಂದರ್ಶನಕ್ಕೊಳಪಟ್ಟವರು, ಆತ್ಮಹತ್ಯೆಗೆ ಬದಲಿಯಾಗಿ ನಿದ್ದೆ ಕೆಲಸ ಮಾಡುತ್ತದೆ. ಹಾಗೆಂದು ಹಗಲು ಹೊತ್ತಿನಲ್ಲಿ ನಿದ್ದೆ ಮಾಡಿದರೆ ನಿದ್ದೆ ಮಾಡುವ ವಿಧಾನಕ್ಕೆ ತೊಂದರೆಯಾಗುತ್ತದೆ. ಅದರಿಂದ ಮತ್ತೆ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಗೆ ಅನುವು ಮಾಡಿಕೊಳ್ಳುತ್ತದೆ.
ನಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯಕ್ಕೆ, ನಡವಳಿಕೆಗೆ ನಿದ್ದೆ ಅತಿ ಅವಶ್ಯವೆನ್ನುತ್ತಾರೆ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ದೊನ್ನ ಲಿಟ್ಲ್ ವುಡ್. ಸಂಶೋಧಕರ ಅಧ್ಯಯನ ಬಿಎಂಜೆ ಓಪನ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ