ಉತ್ತಮ ಆರೋಗ್ಯ ಹಾಗೂ ಹೊಳೆಯುವ ತ್ವಚೆಗಾಗಿ ನಿಂಬೆಹಣ್ಣು ಸಹಕಾರಿ

ಪ್ರತಿದಿನ ನಿಂಬೆಹಣ್ಣನ್ನು ಬಳಸುವುದರಿಂದ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ಜೊತೆಗೆ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಜ್ಞರು ...
ನಿಂಬೆಹಣ್ಣು
ನಿಂಬೆಹಣ್ಣು

ನವದೆಹಲಿ: ಪೂಜೆ, ಹಬ್ಬ ಹರಿದಿನ ಮುಂತಾದ ಸಮಾರಂಭಗಳಿಗೆ ಬಳಸುವ ನಿಂಬೆಹಣ್ಣು ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ.

ಪ್ರತಿದಿನ ನಿಂಬೆಹಣ್ಣನ್ನು ಬಳಸುವುದರಿಂದ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ಜೊತೆಗೆ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಸೌಂದರ್ಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ನಿಂಬೆಹಣ್ಣು ರಸ ಸೇವನೆ ಮಾಡುವುದರಿಂದ ದೇಹದ ರೋೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಬೆವರಿನ ಮೂಲಕ ಕಳೆದು ಕೊಂಡ ಗ್ಲುಕೋಸ್ ನಿಂಬೆ ಹಣ್ಣಿನ ಸೇವನೆಯಿಂದ ವಾಪಸ್ ದೇಹಕ್ಕೆ ಸಿಗುತ್ತದೆ. ಬೇಸಿಗೆಯಲ್ಲಿ ನಿಂಬೆಹಣ್ಣಿನ ರಸ ಸೇವನೆ ಮಾಡುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ.

ಪ್ರತಿನಿತ್ಯ ನಿಂಬೆಹಣ್ಣು ರಸ ಸೇವನೆ ಮಾಡುವುದರಿಂದ ಆಗಾಗ್ಗೆ ಬರುವ ತಲೆ ನೋವಿಗೆ ಉತ್ತಮ ಔಷಧವಾಗಿದೆ, ನಿಂಬೆ ಹಣ್ಣಿನ ರಸ ಜೀರ್ಣ ಕ್ರಿಯೆ ಹೆಚ್ಚಿಸುತ್ತದೆ. ರಕ್ ಸಂಚಾರ ಹೆಚ್ಚಿಸುತ್ತದೆ. ಒತ್ತಡ ನಿವಾರಣೆ ಮಾಡುತ್ತದೆ.

ಖಾಲಿ ಹೊಟ್ಟಗೆ ಬಿಸಿ ನೀರು ಮತ್ತು ನಿಂಬೆಹಣ್ಣು ಬೆರೆಸಿ ಕುಡಿಯುವುದರಿಂದ ದೇಹದಲ್ಲಿನ ವಿಷಯುಕ್ತ ಅಂಶ ಹಾಗೂ ತ್ಯಾಜ್ಯಗಳನ್ನು ಹೊರಹಾಕಲು ಸಹಾಯಮ ಮಾಡುತ್ತದೆ. ಜೊತೆಗೆ ದೇಹದ ತೂಕವನ್ನು ಕೂಡ ಕಡಿಮೆ ಮಾಡುತ್ತದೆ. ನಿಂಬೆಹಣ್ಣು ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ.

ಇತ್ತೀಚಿನ ಸಂಶೋಧನೆ ಪ್ರಕಾರ ನಿಂಬೆಹಣ್ಣು ಸೇವನೆ ಮಾಡುವುದರಿಂದ ಕ್ಯಾನ್ಸರ್ ಜೀವಕೋಶಗಳನ್ನು ತಡೆಗಟ್ಟುತ್ತದೆ ಎಂಬುದು ಸಾಬೀತಾಗಿದೆ.

ನಿಂಬೆ ಹಣ್ಣಿನ ರಸ ಮಾತ್ರವಲ್ಲದೇ ನಿಂಬೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಫೇಸ್ ಪ್ಯಾಕ್ ರೀತಿ ಹಚ್ಚಿಕೊಳ್ಳಬಹುದು. ಮತ್ತು ನಿಂಬೆಹಣ್ಣಿನ ಸಿಪ್ಪೆ ಪುಡಿಯನ್ನು ಸ್ಕರ್ಬ್ ನಂತೆಯೂ ಉಪಯೋಗಿಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com