ಲೋಳೆಸರದ ಉಪಯೋಗಗಳು

ಆಯುರ್ವೇದದಲ್ಲಿ ಬಹಳ ಬೇಡಿಕೆಯಿರುವ ಅಲೊವೆರಾ ಅಥವಾ ಲೋಳೆಸರ ಗಿಡದಲ್ಲಿ ಅಮಿನೊ ಆಸಿಡ್, ವಿಟಮಿನ್‍ಗಳಾದ ಎ, ಎಫ್, ಸಿ ಮತ್ತು ಬಿಗಳಿರುತ್ತವೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಆಯುರ್ವೇದದಲ್ಲಿ ಬಹಳ ಬೇಡಿಕೆಯಿರುವ ಅಲೊವೆರಾ ಅಥವಾ ಲೋಳೆಸರ ಗಿಡದಲ್ಲಿ ಅಮಿನೊ ಆಸಿಡ್, ವಿಟಮಿನ್‍ಗಳಾದ ಎ, ಎಫ್, ಸಿ ಮತ್ತು ಬಿಗಳಿರುತ್ತವೆ.

ಲೋಳೆಸರದ ಎಲೆಯಲ್ಲಿ ಸಿಗುವ ಅಂಟು ರೀತಿಯ ಹೇರಳವಾದ ದ್ರವವನ್ನು ದೇಹದ ಯಾವುದೇ ಭಾಗಗಳಿಗೆ ಸುಟ್ಟು ಗಾಯವಾದ ತಕ್ಷಣವೇ ಹಚ್ಚಿದಲ್ಲಿ ಗಾಯದ ನೋವು, ಉರಿ ಸ್ವಲ್ಪ ಹೊತ್ತಿನಲ್ಲಿಯೇ ಕಡಿಮೆಯಾಗುತ್ತದೆ.

ತ್ವಚೆಯ ರಕ್ಷಣೆಯಲ್ಲಿ ಲೋಳೆಸರ ಅತ್ಯಂತ ಉಪಕಾರಿ. ಮುಖದ ಮೇಲೆ ನೆರಿಗೆ, ಕಪ್ಪು ಕಲೆ, ಮೊಡವೆ ಕಾಣಿಸಿಕೊಂಡಲ್ಲಿ ಲೋಳೆಸರದ ಜೆಲ್‍ನ್ನು ಒಂದು ತಿಂಗಳವರೆಗೆ ಹಚ್ಚುತ್ತಾ ಬಂದರೆ ಕಲೆ, ಸುಕ್ಕುಗುಟ್ಟುವಿಕೆ ಮಾಯವಾಗಿ ಹೊಸ ಕಾಂತಿ ಬರುತ್ತದೆ.

ಒಣ ಚರ್ಮದವರಿಗೆ ಲೋಳೆಸರದ ಜೆಲ್ ಉತ್ತಮ. ಮುಖಕ್ಕೆ ಮೇಕಪ್ ಮಾಡಿಕೊಳ್ಳುವ ಮೊದಲು ಇದನ್ನು ಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಟ್ಟ ನಂತರ ಮುಖ ತೊಳೆದುಕೊಂಡು ಆಮೇಲೆ ಮೇಕಪ್ ಮಾಡಿಕೊಳ್ಳಬೇಕು.

ಪುರುಷರು ಶೇವ್ ಮಾಡಿಕೊಳ್ಳುವ ಸಂದರ್ಭದಲ್ಲಿ ಗಾಯಗಳಾದರೆ ಲೋಳೆಸರವನ್ನು ಹಚ್ಚಿಕೊಂಡರೆ ನೋವು, ಗಾಯ, ರಕ್ತ ಬರುವುದು ನಿಲ್ಲುತ್ತದೆ. ಚಳಿಗಾಲದಲ್ಲಿ ಚರ್ಮ ಒಡೆಯುವುದು, ಒಣಗುವುದು ಸಾಮಾನ್ಯ. ಆಗ ಲೋಳೆಸರದ ದ್ರವವನ್ನು ಜೇನಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷಗಳ ಬಳಿಕ ತೊಳೆದರೆ ಮುಖ ಕಾಂತಿಯುಕ್ತವಾಗುತ್ತದೆ.
ದೇಹದಲ್ಲಿ ಕೊಬ್ಬು ಸಂಗ್ರಹವಾದಾಗ ಇಲ್ಲವೇ ಗರ್ಭಿಣಿ ಮಹಿಳೆಯರಿಗೆ ಹೊಟ್ಟೆಯ ಭಾಗದಲ್ಲಿ ಗೆರೆಗಳು ಉಂಟಾದರೆ ಆ ಭಾಗದಲ್ಲಿ ನಿತ್ಯವೂ ಲೋಳೆಸರವನ್ನು ಹಚ್ಚುತ್ತಾ ಬಂದರೆ ಕೆಲ ದಿನಗಳಲ್ಲಿ ಗೆರೆಗಳು ಮಾಯವಾಗುತ್ತದೆ.

ಆಸಿಡಿಟಿ ಸಮಸ್ಯೆ ಇರುವವರು ಲೋಳೆಸರದ ದ್ರವವನ್ನು ಬೆಳಿಗ್ಗೆ ಹೊತ್ತು ಖಾಲಿ ಹೊಟ್ಟೆಯಲ್ಲಿ ತಿನ್ನುತ್ತಾ ಬಂದರೆ ಸಮಸ್ಯೆ ಕಡಿಮೆಯಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com