ಬಾಲ್ಯಾವಸ್ಥೆಯಲ್ಲಿ ಸ್ಥೂಲಕಾಯ, ಎತ್ತರ ಬೆಳೆಯುವುದರಿಂದ ಅಪರೂಪದ ಕ್ಯಾನ್ಸರ್ ಅಪಾಯ ಹೆಚ್ಚು

ಬಾಲ್ಯಾವಸ್ಥೆಯಲ್ಲಿ ತೂಕ ಹೆಚ್ಚುವುದು ಹಾಗೂ ಅತಿ ಎತ್ತರ ಬೆಳೆಯುವುದರಿಂದ ದುಗ್ಧನಾಳ ವ್ಯವಸ್ಥೆಗೆ ಸಂಬಂಧಿಸಿದ ಅಪರೂಪದ ಕ್ಯಾನ್ಸರ್ ಎದುರಾಗುವ ಅಪಾಯ ಹೆಚ್ಚಿರುತ್ತದೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ನ್ಯೂಯಾರ್ಕ್: ಬಾಲ್ಯಾವಸ್ಥೆಯಲ್ಲಿ ತೂಕ ಹೆಚ್ಚುವುದು ಹಾಗೂ ಅತಿ ಎತ್ತರ ಬೆಳೆಯುವುದರಿಂದ ದುಗ್ಧನಾಳ ವ್ಯವಸ್ಥೆಗೆ ಸಂಬಂಧಿಸಿದ ಅಪರೂಪದ ಕ್ಯಾನ್ಸರ್ ಎದುರಾಗುವ ಅಪಾಯ ಹೆಚ್ಚಿರುತ್ತದೆ ಎಂದು ಹೊಸ ಸಂಶೋಧನೆಯೊಂದು ಎಚ್ಚರಿಸಿದೆ.
ತೂಕ ಹೆಚ್ಚುವುದರಿಂದ ದುಗ್ಧನಾಳ ಕ್ಯಾನ್ಸರ್ ಗೆ ಕಾರಣವಾಗಲಿರುವ ನಾನ್-ಹಾಗ್ಕಿನ್ಸ್ ಲಿಂಫೊಮ ಹೆಚ್ಚಾಗುತ್ತದೆ. ಪ್ರಪಂಚದಾದ್ಯಂತ  ಹಾಗ್ಕಿನ್ಸ್ ಲಿಂಫೊಮದ ಪ್ರಮಾಣ ಹೆಚ್ಚುತ್ತಿದೆ ಎಂದು ಇಸ್ರೇಲ್ ಶೇಬ ಮೆಡಿಕಲ್ ಸೆಂಟರ್ ನ ಸಂಶೋಧನಾ ವರದಿ ಹೇಳಿದೆ. ಸ್ಥೂಲಕಾಯ ಮಧುಮೇಹ ಹಾಗೂ ಹೃದಯ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗುವುದರ ಜೊತೆಗೆ ಎನ್ ಹೆಚ್ ಎಲ್ ಗೂ (ನಾನ್-ಹಾಗ್ಕಿನ್ಸ್ ಲಿಂಫೊಮ) ಕಾರಣವಾಗಲಿದೆ.
1967 ರಿಂದ 2012 ವರೆಗೆ 16 - 19 ವರ್ಷದವರೆಗಿನ 2,352,988 ಹದಿಹರೆಯದವರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಈ ಅಧ್ಯಯನ ವರದಿ ಮಾಹಿತಿಯನ್ನು ಇಸ್ರೇಲ್ ನ್ಯಾಷನಲ್ ಕ್ಯಾನ್ಸರ್ ರಿಜಿಸ್ಟ್ರಿಯೊಂದಿಗೆ ಹೋಲಿಕೆ ಮಾಡಲಾಗಿದ್ದು 1967 ರಿಂದ 2012 ವರೆಗೆ 4 ,021 ಎನ್ ಹೆಚ್ ಎಲ್ ಪ್ರಕರಣಗಳು ಬೆಳಕಿಗೆ ಬಂದಿವೆ.
ಎಲ್ಲಾ ಎನ್ ಹೆಚ್ ಎಲ್ ಪ್ರಕರಣಗಳಲ್ಲಿ ಬಾಲ್ಯದಲ್ಲೇ ಸ್ಥೂಲ ಕಾಯ ಹಾಗೂ ಎತ್ತರದ ಬೆಳವಣಿಗೆ ಅನುಕ್ರಮವಾಗಿ ಶೇ.3 ಹಾಗೂ ಶೇ.6 ರಷ್ಟು ಪರಿಣಾಮ ಬೀರಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com