ಅತಿಯಾದ ದೇಹದಂಡನೆ ಹೃದಯಕ್ಕೆ ಹಾನಿಕರ

ಅತಿಯಾಗಿ ದೇಹವನ್ನು ದಂಡಿಸಿ ವ್ಯಾಯಾಮ ಮಾಡುವುದರಿಂದ ಹೃದಯಕ್ಕೆ ಅಪಾಯವಾಗುವ ಸಾಧ್ಯತೆಯಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಟೊರಾಂಟೋ: ಅತಿಯಾಗಿ ದೇಹವನ್ನು ದಂಡಿಸಿ ವ್ಯಾಯಾಮ ಮಾಡುವುದರಿಂದ ಹೃದಯಕ್ಕೆ ಅಪಾಯವಾಗುವ ಸಾಧ್ಯತೆಯಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಹೆಚ್ಚಿನ ವ್ಯಾಯಾಮ ಮತ್ತು ಹೃದಯದ ನಡುವಿನ ಸಂಬಂಧ ಕುರಿತಂತೆ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ತಿಳಿದು ಬಂದಿದೆ. ಅತಿಯಾಗಿ ವ್ಯಾಯಾಮ ಮಾಡುವುದು ಹೃದಯಕ್ಕೆ ಹಾನಿಯುಂಟು ಮಾಡುತ್ತದೆ ಎಂದು ಸಂಶೋಧನೆ ತಿಳಿಸಿದೆ. ದೀರ್ಘಕಾಲದ ಕ್ರೀಡಾಭ್ಯಾಸದಿಂದಲೂ ಹೃದಯ ಬಡಿತದಲ್ಲಿ ಏರಿಳಿತ ಉಂಟಾಗುತ್ತದೆ ಎಂದು ಈ ಹಿಂದೆಯೆ ಅಧ್ಯಯನವೊಂದು ತಿಳಿಸಿದೆ.

ಹೆಚ್ಚಿನ ಶ್ರಮವಹಿಸಿ ಕ್ರೀಡಾಪಟುಗಳು ಹಾಗೂ ಕ್ರೀಡಾ ತರಬೇತಿದಾರರರು ಮಾಡುವ ಅತಿಯಾದ ದೇಹ ದಂಡನೆಯಿಂದಾಗಿ ಹೃದಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂದು ಆಸ್ಟ್ರೇಲಿಯಾದ ಮೆಲ್ಬೋರ್ನ್ ನ ಐಡಿಐ ಹಾರ್ಟ್ ಅಂಡ್ ಡಯಾಬಿಟಿಸ್ ಸಂಸ್ಥೆಯ ಲೇಖಕ ಲಾ ಗ್ರೆಚ್ ಹೇಳಿದ್ದಾರೆ.

ಕೆನಡಿಯನ್ ಜರ್ನಲ್ ಆಫ್ ಕಾರ್ಡಿಯಾಲಜಿ ಎಂಬ ಮ್ಯಾಗಜೀನ್ ನಲ್ಲಿ ಈ ವರದಿ ಪ್ರಕಟವಾಗಿದ್ದು  ಹೆಚ್ಚೆಚ್ಚು ಕ್ರೀಡಾಭ್ಯಾಸ ಮಾಡುವುದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com