ಚಳಿಗಾಲದಲ್ಲಿ ಒಡೆಯುವ ಪಾದಗಳ ಆರೈಕೆಗೆ ಮನೆಮದ್ದು

ಪಾದಗಳ ಆರೈಕೆಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ಮನೆಯಲ್ಲೇ ಸಿಗುವ ಕೆಲವು ವಸ್ತುಗಳನ್ನು ಉಪಯೋಗಿಸಿಕೊಂಡು ಪಾದಗಳ ಬಿರುಕಿಗೆ ಚಿಕಿತ್ಸೆ ನೀಡಬಹುದು. ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಳಿಗಾಲದಲ್ಲಿ ಚರ್ಮದದ ಆರೈಕೆ ಬಹು ದೊಡ್ಡ ಸಮಸ್ಯೆ. ಒಣ ಚರ್ಮದವರಿಗೆ ತಣ್ಣನೆ ಗಾಳಿಯಿಂದಾಗಿ ಪಾದಗಳು ಬಿರುಕು ಬಿಡುತ್ತವೆ.  ಚರ್ಮ ಒಣಗಿ  ಪಾದ ಬಿರುಕು ಪಡುವುದು ಚಳಿಗಾಲಗದಲ್ಲಿ ಸಾಮಾನ್ಯ.

ಹಾಗಂತ ಅದಕ್ಕೆ ಆರೈಕೆ ಮಾಡದೇ ಹಾಗೆ ಬಿಟ್ಟರೇ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ. ಹೀಗಾಗಿ ಪಾದಗಳ ಆರೈಕೆಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ಮನೆಯಲ್ಲೇ ಸಿಗುವ ಕೆಲವು ವಸ್ತುಗಳನ್ನು ಉಪಯೋಗಿಸಿಕೊಂಡು ಪಾದಗಳ ಬಿರುಕಿಗೆ ಚಿಕಿತ್ಸೆ ನೀಡಬಹುದು.

ಕ್ಯಾಂಡಲ್ ನ ಮೇಣವನ್ನು ಸಾಸಿವೆ ಎಣ್ಣೆ ಜೊತೆ ಮಿಕ್ಸ್ ಮಾಡಿ ಒಡೆದ ಪಾದಗಳಿಗೆ  ಹಚ್ಚಿ ಒಂದಿಡಿ ರಾತ್ರಿ ಬಿಡುವುದರಿಂದ ಕಾಲುಗಳು ಮೃದುವಾಗಿ ಬಿರುಕು ಮಾಯವಾಗುತ್ತದೆ. ಸುಮಾರು ಒಂದು ವಾರಗಳ ಕಾಲ ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.

ಗ್ಲಿಸರಿನ್ ಮತ್ತು ರೋಸ್ ವಾಟರ್ ಮಿಕ್ಸ್ ಮಾಡಿ ಸುಮಾರು 15 ದಿನಗಳ ಕಾಲ ಹಚ್ಚಿದರೇ ಉತ್ತಮ ಫಲಿತಾಂಶ ದೊರೆಯುತ್ತದೆ.

ಇನ್ನು ಎಳ್ಳೆಣ್ಣೆ ಒಡೆದ ಪಾದಗಳ ಚಿಕಿತ್ಸೆಗೆ ರಾಮಬಾಣ. ಪ್ರತಿ ದಿನ ರಾತ್ರಿ ಮಲಗುವ ಮುನ್ನ ಪಾದಗಳಿಗೆ ಎಳ್ಳೆಣ್ಣೆ ಹಚ್ಚಿದರೇ  ಕಾಲುಗಳ ಸೌಂದರ್ಯ ಇಮ್ಮಡಿಗೊಂಡು, ಪಾದಗಳಿಗೆ ಹೊಳಪು ದೊರೆಯುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com