ಮುಖದ ಅಂದಗೆಡಿಸುವ ಬ್ಲ್ಯಾಕ್ ಹೆಡ್ಸ್ ನಿವಾರಣೆಗೆ ಮನೆಮದ್ದು

ಅಂದವಾದ ಮುಖದ ಮೇಲೆ ಬ್ಲ್ಯಾಕ್ ಹೆಡ್ಸ್ ಇದ್ದರೆ ಒಂದು ರೀತಿ ಹಿಂಸೆ. ಮೂಗು, ಗಲ್ಲ ಹಾಗೂ ಹಣೆಯ ಮೇಲೆ ಬರುವ ಈ ಬ್ಲ್ಯಾಕ್ ಹೆಡ್ಸ್ ಸುಂದರ ತ್ವಚೆಯ ಮೇಲೆ ಕಲೆ ,...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಂದವಾದ ಮುಖದ ಮೇಲೆ ಬ್ಲ್ಯಾಕ್ ಹೆಡ್ಸ್ ಇದ್ದರೆ ಒಂದು ರೀತಿ ಹಿಂಸೆ. ಮೂಗು, ಗಲ್ಲ ಹಾಗೂ ಹಣೆಯ ಮೇಲೆ ಬರುವ ಈ ಬ್ಲ್ಯಾಕ್ ಹೆಡ್ಸ್ ಸುಂದರ ತ್ವಚೆಯ ಮೇಲೆ ಕಲೆ ಮೂಡಿಸುತ್ತವೆ.

ಸತ್ತ ಚರ್ಮ ಹಾಗೂ ಅಧಿಕ ಎಣ್ಣೆ ಅಂಶ ಚರ್ಮದ ಮೇಲೆ ಸಂಗ್ರಹ ವಾಗುವುದರಿಂದ ಈ ಬ್ಲ್ಯಾಕ್ ಹೆಡ್ಸ್ ಉಂಟಾಗಲು ಕಾರಣವಾಗುತ್ತದೆ. ಈ ಬ್ಲ್ಯಾಕ್ ಹೆಡ್ಸ್ ಹೋಗಲಾಡಿಸಲು ಪದೇ ಪದೇ ಬ್ಯೂಟಿ ಪಾರ್ಲರ್ ಗೆ ಹೋಗುವ ಅವಶ್ಯಕತೆ ಇಲ್ಲ. ಬದಲಿಗೆ ಮನೆಯಲ್ಲೇ ಸಿಗುವ ಹಲವು ಪದಾರ್ಥಗಳಿಂದ ಬ್ಲ್ಯಾಕ್ ಹೆಡ್ಸ್ ಗಳನ್ನು ಹೋಗಲಾಡಿಸಬಹುದು.

ಸ್ಟೀಮ್ ಫೇಸಿಯಲ್: ಬ್ಲ್ಯಾಕ್ ಹೆಡ್ಸ್ ನಿವಾರಣೆಗೆ ತುಂಬಾ  ಸುಲಭ ಹಾಗೂ ಪರಿಣಾಮಕಾರಿ ವಿಧಾನ ಅಂದರೆ ಮುಖಕ್ಕೆ ನೀರಿನ ಹಬೆ ನೀಡುವುದು ಅಥವಾ ಸ್ಟೀಮ್ ಫೇಸಿಯಲ್. ಒಂದು ಪಾನ್ ನಲ್ಲಿ  ನೀರು ಹಾಕಿ, ಅದಕ್ಕೆ ಸುಮಾರು ಮೂರರಿಂದ ನಾಲ್ಕು ಹನಿಗಳಷ್ಟು ನಿಂಬೆರಸ ಸೇರಿಸಿ ಕುದಿಸಿ, ಈ ನೀರಿನಿಂದ ಬರುವ ಹಬೆಗೆ ಮುಖವನ್ನು ಒಡ್ಡಿ. ಹೀಗೆ ಮಾಡುವುದರಿಂದ ಚರ್ಮ ಮೃದುವಾಗಿ ಬ್ಲ್ಯಾಕ್ ಹೆಡ್ಸ್ ಮಾಯವಾಗುತ್ತದೆ.

ಅಡುಗೆ ಸೋಡಾ
ಇನ್ನು ಅಡುಗೆ ಸೋಡಾ ಕೂಡ ಬ್ಲ್ಯಾಕ್ ಹೆಡ್ಸ್ ಗೆ ಪರಿಣಾಮಕಾರಿ. ಎರಡು ಮೂರು ಚಮಚ ಅಡುಗೆ ಸೋಡಾವನ್ನು  1 ಚಮಚ ನೀರಿನಲ್ಲಿ ಬೆರೆಸಿ. ಅದನ್ನು ಬ್ಲ್ಯಾಕ್ ಹೆಡ್ಸ್ ಇರುವೆಡೆ ಹಚ್ಚಿ ಸುಮಾರು 5 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ಬಿಸಿ ನೀರಿನಲ್ಲಿ ತೊಳೆಯಿರಿ. ಹೀಗೆ ಸುಮಾರು ಒಂದು ವಾರ ಮಾಡಿದರೇ ಬ್ಲ್ಯಾಕ್ ಹೆಡ್ಸ್ ನಿವಾರಣೆಯಾಗುತ್ತದೆ.

ಮೊಟ್ಟೆಯ ಬಿಳಿಭಾಗ

ಬ್ಲ್ಯಾಕ್ ಹೆಡ್ಸ್ ನಿವಾರಣೆಗೆ ಮತ್ತೊಂದು ಸುಲಭ ವಿಧಾನವೆಂದರೇ ಹಸಿ ಮೊಟ್ಟೆಯ ಬಿಳಿಭಾಗವನ್ನು ಸ್ವಲ್ಪ ಕಲೆಸಿ, ನಂತರ ಅದನ್ನು ಮೇಕಪ್ ಬ್ರಷ್ ನಿಂದ ಎಲ್ಲೆಲ್ಲಿ ಬ್ಲ್ಯಾಕ್ ಹೆಡ್ಸ್ ಇದೆಯೋ ಅಲ್ಲಿಗೆ ಹಚ್ಚಿ. ಅದರ ಮೇಲೆ ಟಿಸ್ಯೂ ಪೇಪರ್ ಇಟ್ಟು ಮತ್ತೊಂದು ಲೇಯರ್ ಮೊಟ್ಟೆ ಹಚ್ಚಿ. ಅದು ಒಣಗಿದ ನಂತರ ಟಿಸ್ಯೂ ಪೇಪರ್ ಅನ್ನು ನಿಧಾನವಾಗಿ ಎಳೆಯಿರಿ. ನಂತರ ಮುಖವನ್ನು ಬಿಸಿನೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಮೂರು ಭಾರಿ ಹೀಗೆ ಮಾಡುವುದರಿಂದ ಬ್ಲ್ಯಾಕ್ ಹೆಡ್ಸ್ ನಿವಾರಣೆಯಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com