
ನ್ಯೂಯಾರ್ಕ್: ಹೆಚ್ಚೆಚ್ಚು ಪೋರ್ನ್ ಸಿನೆಮಾ ನೋಡುವುದು ನಿಮ್ಮನ್ನು ಲೈಂಗಿಕವಾಗಿ ಆಕ್ರಮಣಶೀಲರನ್ನಾಗಿಸಬಹುದು ಎನ್ನುತ್ತದೆ ನೂತನ ಅಧ್ಯಯನ.
ಏಳು ದೇಶಗಳಲ್ಲಿ ನಡೆಸಲಾಗಿರುವ ೨೨ ಅಧ್ಯಯನಗಳ ಪ್ರಕಾರ, ಪೋರ್ನ್ ಸಿನೆಮಾಗಳನ್ನು ನೋಡುವುದು, ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಲೈಂಗಿಕ ಆಕ್ರಮಣಶೀಲತೆಯನ್ನೊಡ್ಡೂತ್ತದೆ ಎನ್ನುತ್ತದೆ.
ದೈಹಿಕ ಲೈಂಗಿಕ ಆಕ್ರಮಣಶೀಲತೆಗಿಂತಲೂ, ಮಾತಿನ ಆಕ್ರಮಣಶೀಲತೆ ಹೆಚ್ಚಾಗುತ್ತದೆ ಎಂದು ಕೂಡ ಈ ಅಧ್ಯಯನ ತಿಳಿಸಿದೆ.
ಹೆಚ್ಚೆಚ್ಚು ಪೋರ್ನ್ ನೋಡಿದವರ ಲೈಂಗಿಕ ಆಕ್ರಮಣಶೀಲತೆ, ಲೈಂಗಿಕ ಕಿರುಕುಳ ಮತ್ತು ಸೆಕ್ಸ್ ಗಾಗಿ ಮಾಡಿದ ಬೆದರಿಕೆ ಇವುಗಳ ಬಗ್ಗೆ ತಾವೇ ಬರೆದ ವರದಿಗಳನ್ನಾಧರಿಸಿ ಈ ಅಧ್ಯಯನಗಳನ್ನು ನಡೆಸಲಾಗಿದೆ.
ಇದಕ್ಕೆ ಕಾರಣಗಳು ಬಹಳ ಸಂಕೀರ್ಣ ಎಂದಿರುವ ಅಧ್ಯಯನ, ಹೆಚ್ಚೆಚು ಪೋರ್ನ್ ಸಿನೆಮಾಗಳನ್ನು ನೋಡುವವರಲ್ಲಿ ಕೆಲವರು ಲೈಂಗಿಕವಾಗಿ ಆಕ್ರಮಣಶೀಲರಾಗಿಲ್ಲ ಎಂದು ಕೂಡ ತಿಳಿಸಿದೆ.
ಈ ಅಧ್ಯಯನ ಜರ್ನಲ್ ಆಫ್ ಕಮ್ಯುನಿಕೇಶನ್ ನಲ್ಲಿ ಪ್ರಕಟವಾಗಿದೆ.
Advertisement