ಆನ್‌ಲೈನ್ ಸ್ನೇಹಿತರಿಂದ ನಾಲ್ವರು ಮಕ್ಕಳ ಪೈಕಿ ಒಬ್ಬರಿಗೆ ಲೈಂಗಿಕ ಕಿರುಕುಳ

ಇದು ಆನ್‌ಲೈನ್‌ನಲ್ಲಿ ಕೇವಲ ಅಪರಿಚಿತರನು ಗುರಿಯಾಗಿಸಿಕೊಂಡು ನಡೆಸಿದ ಲೈಂಗಿಕ ದೌರ್ಜನ್ಯ ಅಲ್ಲ. ಅನ್‌ಲೈನ್ ಮೂಲಕ ತುಂಬಾ ಆಪ್ತರಾದವರ ಮೇಲೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ಇದು ಆನ್‌ಲೈನ್‌ನಲ್ಲಿ ಕೇವಲ ಅಪರಿಚಿತರನು ಗುರಿಯಾಗಿಸಿಕೊಂಡು ನಡೆಸಿದ ಲೈಂಗಿಕ ದೌರ್ಜನ್ಯ ಅಲ್ಲ. ಅನ್‌ಲೈನ್ ಮೂಲಕ ತುಂಬಾ ಆಪ್ತರಾದವರ ಮೇಲೆ ನಡೆದ ಲೈಂಗಿಕ ದೌರ್ಜನ್ಯ. ಹೀಗೆ ಆಪ್ತರಾದ ನಾಲ್ವರ ಮಕ್ಕಳ ಪೈಕಿ ಒಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೊಸ ಸಂಶೋಧನೆ ಹೇಳಿದೆ.
ಮಿಚಿಗನ್ ಸ್ಟೇಟ್ ವಿವಿಯ ನೇತೃತ್ವದಲ್ಲಿ ಸೈಬರ್‌ಕ್ರೈಂ ತಜ್ಞರು ನಡೆಸಿದ ಸಮೀಕ್ಷೆಯಲ್ಲಿ ಅಂಶ ಬಯಲಾಗಿದ್ದು, ಸ್ವನಿಯಂತ್ರಣವಿಲ್ಲದ ಬಾಲಕಿಯರು ಹಾಗೂ ಮಕ್ಕಳ ಮೇಲೆಯೇ ಹೆಚ್ಚಾಗಿ ಲೈಂಗಿಕ ದೌರ್ಜನ್ಯ ನಡೆದಿದೆ.
ಅಚ್ಚರಿಯ ಸಂಗತಿ ಎಂದರೆ, ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಶೇ.24ರಷ್ಟು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ.
'ಆನ್‌ಲೈನ್‌ಲ್ಲಿ ಸಕ್ರಿಯವಾಗಿರುವ ಶಿಶುಕಾಮಿಗಳ ಬಗ್ಗೆ ಹಾಗೂ ನಮ್ಮ ಹತ್ತಿರದ ಜನರು ಮಕ್ಕಳನು ಲೈಂಗಿಕವಾಗಿ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಎಚ್ಚರಿಕೆ ವಹಿಸಬೇಕು. ಮಕ್ಕಳು ಆನ್‌ಲೈನ್‌ನಲ್ಲಿ ಹೆಚ್ಚು ಸಮಯ ಕಳೆಯದಂತೆ ನೋಡಿಕೊಳ್ಳಬೇಕು' ಎಂದು ಮಿಚಗನ್ ಸ್ಟೇಟ್ ವಿವಿ ಪ್ರಾಧ್ಯಾಪಕ ಥಾಮಸ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com