ಈ ಆಹಾರಗಳು ಮಗುವಿನ ರೋಗನಿರೋಧಕತೆಯನ್ನು ಹೆಚ್ಚಿಸುತ್ತವೆ

ನಿಮ್ಮ ಮಗುವಿಗೆ ಈ ಸಮತೋಲಿತ ಆಹಾರದ ಮೇಲೆ ಗಮನ ಹರಿಸುವುದು ಪ್ರಮುಖವಾಗುವುದರ ಜತೆಗೆ ಪಾಲಕರಾಗಿ ನೀವು ಕೆಲವೇ ಸೂಪರ್ ಫುಡ್‍ಗಳನ್ನು...
ಈ ಆಹಾರಗಳು ಮಗುವಿನ ರೋಗನಿರೋಧಕತೆಯನ್ನು ಹೆಚ್ಚಿಸುತ್ತವೆ

ಸಮತೋಲಿತ ಆಹಾರಕ್ಕೆ ಯಾವುದೂ ಪರ್ಯಾಯವಲ್ಲ. ಇದು ಮಗುವಿಗೂ ಕೂಡ ಇದೇ ನೀತಿ ಅನುಸರಿಸುತ್ತದೆ. ನಿಮ್ಮ ಮಗುವಿಗೆ ಈ ಸಮತೋಲಿತ ಆಹಾರದ ಮೇಲೆ ಗಮನ ಹರಿಸುವುದು ಪ್ರಮುಖವಾಗುವುದರ ಜತೆಗೆ ಪಾಲಕರಾಗಿ ನೀವು ಕೆಲವೇ ಸೂಪರ್ ಫುಡ್‍ಗಳನ್ನು ಅವರ ಆಹಾರ ಯೋಜನೆಯಲ್ಲಿ ಸೇರಿಸುವುದರಿಂದ ರೋಗನಿರೋಧಕತೆಯನ್ನು ಸಾಧಿಸುವುದರಲ್ಲಿ ಅಚ್ಚರಿಯನ್ನೇ ಉಂಟು ಮಾಡಬಹುದು.

ಯಶವಂತಪುರದ ಕೊಲಂಬಿಯಾ ಏಷ್ಯಾ ರೆಫರಲ್ ಆಸ್ಪತ್ರೆಯ ಕನ್ಸಲ್ಟಂಟ್ ನ್ಯೂಟಿಷನಿಸ್ಟ್ ಶ್ರೀಮತಿ ಪವಿತ್ರಾ ಎನ್.ರಾಜ್ ಮಕ್ಕಳಲ್ಲಿ ರೋಗನಿರೋಧಕತೆಯನ್ನು ಹೆಚ್ಚಿಸಲು ಐದು ಪ್ರಮುಖ ಸೂಪರ್‍ಫುಡ್‍ಗಳನ್ನು ಪಟ್ಟಿ ಮಾಡಿದ್ದಾರೆ.

ಮೊಟ್ಟೆಗಳು: ಮೊಟ್ಟೆಗಳು ಪ್ರೊಟೀನಿನ ಪ್ರಮುಖ ಸಂಪನ್ಮೂಲವಾಗಿದೆ. ಹೀಗಾಗಿ ಇದನ್ನು ಸೂಪರ್‍ಫುಡ್ ಎಂದು ಪರಿಗಣಿಸಲಾಗಿದೆ. ಹಳದಿ ಭಾಗವು ಪ್ರಮುಖ ವಿಟಾಮಿನ್‍ಗಳು ಮತ್ತು ಖನಿಜಗಳು ಹಾಗೂ ನಿಮ್ಮ ಮಗುವಿನ ಆಹಾರದಲ್ಲಿ ಇರಬೇಕಾದ ಅಂಶಗಳ ಸಂಗ್ರಹವಾಗಿದೆ. ಖುಷಿಯ ಸಂಗತಿಯೆಂದರೆ, ಮೊಟ್ಟೆಗಳನ್ನು ವಿವಿಧ ರೀತಿಯಲ್ಲಿ ಸೇವಿಸಬಹುದು. ಬೇಯಿಸಿ, ನುರಿದು ಅಥವಾ ಇತರ ರೀತಿಯಲ್ಲಿ ಸೇವಿಸಬಹುದಾಗಿದ್ದು, ಬಹುತೇಕ ಮಕ್ಕಳು ಮೊಟ್ಟೆ ಸೇವಿಸಲು ಇಷ್ಟಪಡುತ್ತಾರೆ.

ಮೆಣಸು: ಮೆಣಸು ರಾಸಾಯನಿಕ ಕ್ಯಾಪ್ಸಾಸಿನ್ ಅನ್ನು ಹೊಂದಿರುತ್ತದೆ. ಇದು ಶೀತ ಮತ್ತು ಫ್ಲೂನಿಂದ ಹೋರಾಡುವ ರೋಗ ನಿರೋಧಕ ವ್ಯವಸ್ಥೆ ವಿಟಾಮಿನ್ ಸಿ ಒಳಗೊಂಡಿರುತ್ತದೆ. ನೀವು ತಯಾರಿಸುವ ಅಡುಗೆಗೆ ಇದು ಸುಂದರ ಬಣ್ಣವನ್ನೂ ನೀಡುತ್ತದೆ. ಸ್ಯಾಂಡ್‍ವಿಚ್, ಪಾಸ್ತಾ, ಸಲಾಡ್ ಅಥವಾ ಸಾಂಬಾರಿಗೆ ಮೆಣಸು ಕೇವಲ ಸ್ವಾದವನ್ನು ಸೇರಿಸುವುದಲ್ಲದೇ, ನಿಮ್ಮ ಮಕ್ಕಳಿಗೆ ಆಕರ್ಷಕವೂ ಆಗಿರುತ್ತದೆ.

ಧಾನ್ಯಗಳು, ಮೊಳಕೆ ಕಾಳುಗಳು: ಆ್ಯಂಟಿಆಕ್ಸಿಡಂಟ್‍ಗಳಾದ ಫ್ಲಾವೊನಾಯ್ಡ್ಸ್, ಕ್ಯಾರೊಟೆನಾಯ್ಡ್ಸ್, ಫೆನಾಲಿಕ್ ಆಸಿಡ್ ಮತ್ತು ಪಾಲಿಫೆನಾಲ್ಸ್‍ನಂಥವುಗಳನ್ನು ಧಾನ್ಯಗಳು ಹೊಂದಿರುತ್ತದೆ. ಇಡಿ ಧಾನ್ಯಗಳೂ ಉತ್ತಮವಾಗಿದ್ದು, ಮೊಳಕೆ ಕಾಳುಗಳು ಇನ್ನಷ್ಟು ಪೋಷಕಾಂಶಗಳನ್ನು ಲಭ್ಯವಾಗಿಸುತ್ತವೆ. ಇದರಿಂದ ದೇಹ ಸುಲಭವಾಗಿ ಪೋಷಕಾಂಶಗಳನ್ನು ಪಡೆಯಬಹುದಾಗಿದೆ. ಉಪ್ಪು ಮತ್ತು ನಿಂಬೆ ಹಾಕಿ ಹಸಿಯಾಗಿ ಅಥವಾ ಬೇಯಿಸಿ ಸೇವಿಸಿ. ಧಾನ್ಯಗಳು ಮತ್ತು ಮೊಳಕೆಕಾಳುಗಳು ಯಾವುದೇ ಸಮಯದಲ್ಲಾದರೂ ಮಕ್ಕಳಿಗೆ ಉತ್ತಮ ಆಹಾರವಾಗಬಹುದು.

ನಟ್ಸ್ ಮತ್ತು ಬೀಜಗಳು: ಬಾದಾಮಿ ಮತ್ತು ವಾಲ್‍ನಟ್, ಪಿಸ್ತಾ, ಒಣದ್ರಾಕ್ಷಿಗಳು, ಖರ್ಜೂರ ಮತ್ತು ಒಣ ಫಿಗ್‍ಗಳಂತಹ ನಟ್‍ಗಳು ಹಾಗೂ ಕುಂಬಳಕಾಯಿ ಬೀಜ, ಅಗಸೆ ಬೀಜಗಳು, ಸೂರ್ಯಕಾಂತಿ ಬೀಜಗಳು ವಿಟಾಮಿನ್ ಸಿ ಹೊಂದಿರುತ್ತವೆ. ಇವು ಅತ್ಯಂತ ಪ್ರಮುಖ ಆ್ಯಂಟಿಆಕ್ಸಿಡಂಟ್ ಮತ್ತು ರೋಗನಿರೋಧಕ ಶಕ್ತಿ ಪ್ರೋತ್ಸಾಹಕವಾಗಿದೆ. ದಿನದಲ್ಲಿ ಸಾಕಷ್ಟು ಪ್ರಮಾಣದ ನಟ್ಸ್ ಮತ್ತು ಒಣದ್ರಾಕ್ಷಿ ನಿಮ್ಮ ಮಗುವಿಗೆ ಉತ್ತಮವಾಗಿರುತ್ತವೆ ಮತ್ತು ಅಕಾಲದಲ್ಲಿ ಹಸಿವು ನೀಗಿಸಲು ಸೂಕ್ತವಾಗಿದೆ.

ಮೊಸರು: ಮೊಸರಿನಲ್ಲಿ ಪ್ರೋಬಯಾಟಿಕ್ಸ್ ಹೆಚ್ಚಿನ ಪ್ರಮಾಣದಲ್ಲಿದ್ದು, ಇತ್ತೀಚಿನ ದಿನಗಳಲ್ಲಿ ಉತ್ತಮ ಆರೋಗ್ಯಕರ ಆಹಾರವಾಗಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹಲವು ಮೈಕ್ರೋಆರ್ಗಾನಿಸಮ್‍ಗಳ ವಿರುದ್ಧ ಹೋರಾಡಿ ಇದು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಶಕ್ತಿಯುತಗೊಳಿಸುತ್ತದೆ. ಸಾಮಾನ್ಯ ಮೊಸರು ಅಷ್ಟೇನೂ ಇಷ್ಟವಾಗದಿದ್ದರೆ, ಮಜ್ಜಿಗೆ ಮಾಡಿ ಸೇವಿಸಿ ನಿಮ್ಮ ಮಗುವಿಗೆ ಇಷ್ಟವಾಗಿರುವ ಹಣ್ಣನ್ನು (ಮಾವು, ಸ್ಟ್ರಾಬೆರ್ರಿ ಇತ್ಯಾದಿ) ಮಿಕ್ಸರ್‍ನಲ್ಲಿ ಹಾಕಿ ಮತ್ತು 15 ರಿಂದ 20 ನಿಮಿಷಗಳವರೆಗೆ ರೆಫ್ರಿಜರೇಟರ್‍ನಲ್ಲಿ ಇಟ್ಟು ಸೇವಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com