ಜಿರಳೆ ಹಾಲು ಪ್ರೊಟೀನ್ ಗೆ ಸೂಪರ್ ಫುಡ್ : ಸಂಶೋಧನೆ

ಭಾರತೀಯ ವಿಜ್ಞಾನಿಗಳು ಜಿರಳೆಯ ಕರುಳಿನಲ್ಲಿ ಉತ್ಪಾದನೆಯಾಗುವ ಒಂದು ಸಂಯುಕ್ತ ಪದಾರ್ಥವನ್ನು ಕಂಡುಹಿಡಿದಿದ್ದಾರೆ.ಇದು ಹಸುವಿನ ಹಾಲಿಗಿಂತಲೂ ತುಂಬಾ...
ಜಿರಳೆ
ಜಿರಳೆ

ನವದೆಹಲಿ: ಜಿರಳೆ ಅಂದ್ರೆ ಸಾಕು ಕೆಲವರು ಅಸಹ್ಯ ಪಡುತ್ತಾರೆ, ಕೆಲವರು ಭಯ ಪಡ್ತಾರೆ, ಇನ್ನೂ ಕೆಲವರಿಗೆ ಜಿರಳೆ ವಾಕರಿಕೆ ಮತ್ತು ಅಲರ್ಜಿ ತರುತ್ತದೆ. ಆದರೇ ಇಂಥ ಜಿರಳೆ ಮನುಷ್ಯನಿಗೆ ಅಗತ್ಯವಿರುವ ಪ್ರೊಟೀನ್ ನೀಡುತ್ತದೆ ಎಂದರೇ ನಂಬಲಿಕ್ಕಾಗುತ್ತಾ?ಹೌದು ನಂಬಲೇಬೇಕು.

ಭಾರತೀಯ ವಿಜ್ಞಾನಿಗಳು ಜಿರಳೆಯ ಕರುಳಿನಲ್ಲಿ ಉತ್ಪಾದನೆಯಾಗುವ ಒಂದು ಸಂಯುಕ್ತ ಪದಾರ್ಥವನ್ನು ಕಂಡುಹಿಡಿದಿದ್ದಾರೆ.ಇದು ಹಸುವಿನ ಹಾಲಿಗಿಂತಲೂ ತುಂಬಾ ನ್ಯೂಟ್ರಿಶಿಯಸ್ ಆಗಿದ್ದು .ಪ್ರಪಂಚದಲ್ಲಿ ಭವಿಷ್ಯದಲ್ಲಿ ಏರುತ್ತಿರೋ ಜನಸಂಖ್ಯೆಯನ್ನು ಕಾಪಾಡುವಲ್ಲಿ ಉತ್ತಮ ಪಾತ್ರವಹಿಸುವುದು ಎಂದು ಹೇಳಲಾಗುತ್ತಿದೆ.

ಜಿರಳೆಗಳು ಸಾಮಾನ್ಯವಾಗಿ ಹಾಲನ್ನು ಉತ್ಪಾದಿಸುವುದಿಲ್ಲವಾದರೂ ಕೆಲವೊಂದು ಡಿಪ್ಲೋಪ್ಟೇರಾ ವಿಧದ ಜಿರಳೆಗಳು ತನ್ನ ಯುವಾವಸ್ಥೆಯನ್ನು ಉಳಿಸುವುದಕ್ಕೋಸ್ಕರ, ಜನ್ಮ ತಾಳುವ ಮರಿಗಳಿಗಾಗಿ ಹಾಲನ್ನು ಉತ್ಪಾದಿಸುತ್ತದೆ ಅದೇ ಹಾಲಿನಲ್ಲಿ ವಿಶೇಷ ಪ್ರಮಾಣದ ಪ್ರೊಟೀನ್ ಗಳಿದ್ದು,ಈ ಪ್ರೊಟೀನ್ ಕ್ರಿಸ್ಟಲ್ ಗಳು ಸಾಮಾನ್ಯವಾದ ಹಸುವಿನ ಹಾಲಿಗೆ ಹೋಲಿಸಿದಲ್ಲಿ ಅದಕ್ಕಿಂತಲೂ ಮೂರು ಪಟ್ಟು ಅಧಿಕ ಶಕ್ತಿ ಉಳ್ಳದ್ದಾಗಿದೆ ಎಂದು ಹೇಳಲಾಗಿದೆ.

ಜಿರಳೆಯಿಂದ ಹಾಲನ್ನು ಪಡೆಯುವುದು ತುಂಬಾ ಪ್ರಯಾಸದ ವಿಷಯವಾದ ಕಾರಣ, ಬೆಂಗಳೂರಿನ ಇನ್ಸ್ ಟಿಟ್ಯೂಟ್ ಆಫ್ ಸ್ಟೆಮ್ ಸೆಲ್ ಬಯಾಲಜಿ ಹಾಗೂ ರೀಜನರೇಟಿವ್ ಮೆಡಿಸಿನ್ ಇನ್ ಇಂಡಿಯಾ ದ ನೇತೃತ್ವದಲ್ಲಿ ಇಂಟರ್ ನ್ಯಾಷನಲ್ ಸೈಂಟಿಸ್ಟ್ ಗಳ ತಂಡವು ಪ್ರಯೋಗಾಲಯದಲ್ಲಿ ಈ ಪ್ರೋಟಿನ್ ಕ್ರಿಸ್ಟಲ್ ಗಳನ್ನು ಉತ್ಪಾದಿಸುವ ವಿಶೇಷ ಜೀನ್ ಗಳ ರೂಪಾಂತರದ ಬಗ್ಗೆ ಸಂಶೋಧನೆ ನಡೆಸುತ್ತಿದೆ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com