ವಾಯುಮಾಲಿನ್ಯ ಮಕ್ಕಳಲ್ಲಿ ಮಾನಸಿಕ ತೊಂದರೆಗಳನ್ನು ತಂದೊಡ್ಡಬಹುದು: ಅಧ್ಯಯನ

ನೂತನ ಅಧ್ಯಯನವೊಂದರ ಪ್ರಕಾರ ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವ ಮಕ್ಕಳು ಮತ್ತು ಅಪ್ರಾಪ್ತರ ಮೆದುಳಿಗೆ ತೊಂದರೆಗಳಾಗಿ ಮಾನಸಿಕ ಅಭಿವೃದ್ಧಿಯಲ್ಲಿ ಏರುಪೇರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಂಡನ್: ನೂತನ ಅಧ್ಯಯನವೊಂದರ ಪ್ರಕಾರ ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವ ಮಕ್ಕಳು ಮತ್ತು ಅಪ್ರಾಪ್ತರ ಮೆದುಳಿಗೆ ತೊಂದರೆಗಳಾಗಿ ಮಾನಸಿಕ ಅಭಿವೃದ್ಧಿಯಲ್ಲಿ ಏರುಪೇರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಅಧ್ಯಯನಗಳ ವರದಿಯ ಪ್ರಕಾರ ಹೆಚ್ಚಿದ ವಾಯುಮಾಲಿನ್ಯದಿಂದ ಮಕ್ಕಳಲ್ಲಿ ಮತ್ತು ಅಪ್ರಾಪ್ತರಲ್ಲಿ ಒಂದಾದರೂ ಮಾನಸಿಕ ತೊಂದರೆ ಹೆಚ್ಚುತ್ತದೆ ಎಂದಿದೆ.

ನೈಟ್ರೋಜ ಆಕ್ಸೈಡ್ (ಎನ್ ಒ೨) ಮತ್ತು ಪಾರ್ಟಿಕ್ಯುಲೇಟ್ ಮ್ಯಾಟರ್ (ಪಿ ಎಂ ೧೦ ಮತ್ತು ಪಿ ಎಂ ೨.೫) ಇವುಗಳು ವಾಸಿಸುವ ಬಡಾವಣೆಗಳಲ್ಲಿ ಸೇವಿಸುವ ಗಾಳಿಯಲ್ಲಿ ಹೆಚ್ಚೆಚ್ಚು ಕಂಡುಬರುತ್ತಿರುವುದು ತಿಳಿಯಲಾಗಿದೆ.

ಇಂತಹ ಅತಿ ವಾಯುಮಾಲಿನ್ಯ ಪ್ರದೇಶಗಳಲ್ಲಿ ಬದುಕುವ ಮಕ್ಕಳಿಗೆ ಮಾನಸಿಕ ತೊಂದರೆಗಳಿಗಾಗಿ ಔಷಧಿಗಳು, ನಿದ್ರಾ ಮಾತ್ರೆಗಳನ್ನು ನೀಡುತ್ತಿರುವುದು ಕೂಡ ಈ ಅಧ್ಯಯನದ ಮೂಲಕ ತಿಳಿದುಬಂದಿದೆ.

"ಈ ಅಧ್ಯಯನದ ಪ್ರಕಾರ ವಾಯುಮಾಲಿನ್ಯ ಹೆಚ್ಚಿದಂತೆ ಅದರಲ್ಲೂ ವಾಹನ ದಟ್ಟಣೆಯಿಂದ ಹೆಚ್ಚುವ ವಾಯುಮಾಲಿನ್ಯದಿಂದ ಮಕ್ಕಳಲ್ಲಿ ಮತ್ತು ಅಪ್ರಾಪ್ತರಲ್ಲಿ ಮಾನಸಿಕ ಅಸ್ವಸ್ಥತೆ ಹೆಚ್ಚಾಗುವುದು ತಿಳಿದಿದೆ" ಎಂದು ಸ್ವೀಡನ್ ನ ಉಮೇನ ವಿಶ್ವವಿದ್ಯಾಲಯದ ಮುಖ್ಯ ಸಂಶೋಧಕ ಅನ್ನ ಔದಿನ್ ಹೇಳಿದ್ದರೆ.

ಜರ್ನಲ್ ಬಿಜೆಎಂ ಓಪನ್ ನಲ್ಲಿ ಪ್ರಕಟವಾಗಿರುವ ಈ ಅಧ್ಯಯನದಲ್ಲಿ ಸ್ವೀಡಿಶ್ ಕೌಂಟಿಗಳಾದ  ಸ್ಟಾಕ್ ಹಾಂ, ವಾಸ್ತ್ರಾ ಗೋಟಾಲ್ಯಾಂಡ್, ಸ್ಕೇನ್ ಮತ್ತು ವ್ಯಾಸ್ಟರ್ ಬಾಟನ್ ಗಳ ೧೮ ವರ್ಷದ ಕೆಳಗಿನ ಎಲ್ಲ ಮಕ್ಕಳನ್ನೂ ಅಧ್ಯಯಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com