ಬಾಲ್ಯಾವಸ್ಥೆಯ ಕಿರುಕುಳ: ಪ್ರೌಢಾವಸ್ಥೆಯಲ್ಲಿ ಮಾದಕ ವ್ಯಸನಕ್ಕೆ ಬಲಿಯಾಗುವ ಅಪಾಯ

ಬಾಲ್ಯದಲ್ಲಿ ತೀವ್ರ ಸಮಸ್ಯೆ ಎದುರಿಸುವವರು ಮಾದಕ ವಸ್ತು ಮತ್ತು ಆಲ್ಕೋಹಾಲ್ ಸೇವನೆ ವ್ಯಸನಿಗಳಾಗುವ ಅಪಾಯ ಹೆಚ್ಚು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಟೊರೊಂಟೊ: ಬಾಲ್ಯದಲ್ಲಿ ತೀವ್ರ ಸಮಸ್ಯೆ ಎದುರಿಸುವವರು ಮಾದಕ ವಸ್ತು ಮತ್ತು ಆಲ್ಕೋಹಾಲ್  ಸೇವನೆ ವ್ಯಸನಿಗಳಾಗುವ ಅಪಾಯ ಹೆಚ್ಚು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

 ಮನೆಯಲ್ಲಿ ಪೋಷಕರು ಹೊಂದಾಣಿಕೆಯಲ್ಲಿಲ್ಲದಿದ್ದರೆ, ಗೃಹ ಹಿಂಸೆ ಅನುಭವಿಸಿದ ಮಕ್ಕಳು ಮತ್ತು ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಕ್ಕಳು ಮದ್ಯ ವ್ಯಸನಿಗಳಾಗುವ ಸಾಧ್ಯತೆ ಶೇಕಡಾ 50ರಷ್ಟು ಹೆಚ್ಚು ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಬಾಲ್ಯದಲ್ಲಿ ಮಕ್ಕಳು ನೇರವಾಗಿ ಮತ್ತು ಪರೋಕ್ಷವಾಗಿ ಯಾವುದೇ ಹಿಂಸಾಚಾರ ಅನುಭವಿಸಿದರೆ, ನೋಡುತ್ತಾ ಬೆಳೆದರೆ ಅವರ ಬಾಲ್ಯಜೀವನ ಬಲಿಯಾಗುತ್ತದೆ. ಅವರು ಈ ಕೆಟ್ಟ ಗಳಿಗೆಯನ್ನು ಮರೆಯಲು ಕೆಟ್ಟ ಚಟಗಳಿಗೆ ಬಲಿಯಾಗುತ್ತಾರೆ ಎನ್ನುತ್ತಾರೆ ಟೊರೊಂಟೊ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಸ್ಮೆ ಫುಲ್ಲರ್ ಥಾಮ್ಸನ್.

ಅಧ್ಯಯನಕ್ಕೆ ಒಳಗಾದ ಪ್ರತಿ ಐವರು ವಯಸ್ಕರಲ್ಲಿ ಒಬ್ಬರು ಮಾದಕವಸ್ತು, ಆಲ್ಕೋಹಾಲ್ ಚಟಗಳಿಗೆ ಬಲಿಯಾಗುತ್ತಿದ್ದು, ಅವರು ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದವರಾಗಿದ್ದಾರೆ. ಇನ್ನು ಪ್ರತಿ ಏಳು ಮಂದಿ ವಯಸ್ಕರಲ್ಲಿ ಒಬ್ಬರು ದುಷ್ಚಟಗಳಿಗೆ ಬಲಿಯಾದವರು ಬಾಲ್ಯದಲ್ಲಿ ಪೋಷಕರು ಹಿಂಸೆಗೆ ಬಲಿಯಾದವರಾಗಿದ್ದಾರೆ.

ವ್ಯಕ್ತಿ 16 ವರ್ಷ ವಯಸ್ಸಾಗುವುದರೊಳಗೆ 11 ಅಥವಾ ಅದಕ್ಕಿಂತ ಹೆಚ್ಚು ಬಾರಿ ಪೋಷಕರ ಗೃಹ ಹಿಂಸಾಚಾರಕ್ಕೆ ಒಳಗಾದರೆ ಅದನ್ನು ದೀರ್ಘಕಾಲಿಕ ಎಂದು ಪರಿಗಣಿಸಲಾಗುತ್ತದೆ.
25 ಸಾಮಾನ್ಯ ಜನರಲ್ಲಿ ಒಬ್ಬರನ್ನು ಪರಿಗಣಿಸಲಾಗಿದೆ ಎಂದು ಫುಲ್ಲರ್ ಥಾಮ್ಸನ್ ಹೇಳುತ್ತಾರೆ.

Substance Use and Misuse ಎಂಬ ಆನ್ ಲೈನ್ ಪತ್ರಿಕೆಯಲ್ಲಿ ಈ ಅಧ್ಯಯನ ಪ್ರಕಟಗೊಂಡಿದ್ದು, ಕೆನಡಾದ ಸಮುದಾಯ ಆರೋಗ್ಯ ಸಮೀಕ್ಷೆ: ಮಾನಸಿಕ ಆರೋಗ್ಯ, 2012ರ ಭಾಗವಾಗಿದ್ದ 21 ಸಾವಿರದ 544 ವಯಸ್ಕ ಕೆನಡಿಯನ್ನರನ್ನು ಅಧ್ಯಯನಕ್ಕೊಳಪಡಿಸಲಾಗಿತ್ತು. ಇವರಲ್ಲಿ 628 ಮಂದಿ ಮಾದಕ ವಸ್ತುಗಳಿಗೆ ಬಲಿಯಾಗಿದ್ದರೆ 849 ಮಂದಿ ಮದ್ಯ ವ್ಯಸನಿಯಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com