ವೈದ್ಯರಿಗೆ ಹೇಳಿ ಥ್ಯಾಂಕ್ಯೂ...
ನವದೆಹಲಿ: ಶುಕ್ರವಾರ ರಾಷ್ಟ್ರೀಯ ವೈದ್ಯರ ದಿನ. ನಮ್ಮ ಆರೋಗ್ಯ ಕಾಪಾಡುವಲ್ಲಿ ನೆರವಾಗುವ ವೈದ್ಯರಿಗೊಂದು ಕೃತಜ್ಞತೆ ಹೇಳುವ ದಿನ. ಇಂದಿನ ಆಧುನಿಕ ಜೀವನಶೈಲಿಯಲ್ಲಿ ವೈದ್ಯರು ಎಷ್ಟು ಮುಖ್ಯವಾಗಿದ್ದಾರೆ ಎಂಬುದನ್ನು ಈ ಸಂದರ್ಭದಲ್ಲಿ ನಾವು ನೆನೆಯಬೇಕಾಗುತ್ತದೆ.
ಆಚರಣೆ ಹೇಗೆ ಜಾರಿಗೆ ಬಂತು?: ಭಾರತೀಯ ವೈದ್ಯಲೋಕದ ದಂತಕಥೆ ಹಾಗೂ ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಡಾ.ಬಿದಾನ್ ಚಂದ್ರ ರಾಯ್ ಅವರ ಗೌರವಾರ್ಥ ರಾಷ್ಟ್ರೀಯ ವೈದ್ಯ ದಿನ ಆಚರಿಸಲಾಗುತ್ತದೆ.
ರಾಯ್ ಅವರು ಜನಿಸಿದ್ದು ಜುಲೈ 1, 1882ರಲ್ಲಿ ಮತ್ತು ಅಸುನೀಗಿದ್ದು ಕೂಡ ಅದೇ ತಾರೀಖಿನಂದು 1962ರಲ್ಲಿ 80 ವರ್ಷದವರಾಗಿದ್ದಾಗ. ಅವರಿಗೆ 1961, ಫೆಬ್ರವರಿ 4ರಂದು ದೇಶದ ಅತ್ಯುನ್ನತ ಗೌರವವಾದ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಮೊದಲ ಬಾರಿಗೆ ಅಂತಾರಾಷ್ಟ್ರೀಯ ವೈದ್ಯರ ದಿನ ಜಾರಿಗೆ ಬಂದದ್ದು ಮೇ 9 1933ರಲ್ಲಿ ಜಾರ್ಜಿಯಾದ ವಿಂಡರ್ ನಲ್ಲಿ. ಭಾರತದಲ್ಲಿ ಮೊದಲ ಸಲ 1991ರಲ್ಲಿ ವೈದ್ಯ ದಿನವನ್ನು ಆಚರಿಸಲಾಯಿತು.
ವೈಯಕ್ತಿಕ ಮತ್ತು ಸಮುದಾಯ ಮಟ್ಟದಲ್ಲಿ ವೈದ್ಯರ ಸೇವೆಯನ್ನು ಗುರುತಿಸಲು ರಾಷ್ಟ್ರೀಯ ವೈದ್ಯರ ದಿನವನ್ನು ಆರೋಗ್ಯ ಸಂಸ್ಥೆಗಳಲ್ಲಿ ಆಚರಿಸಲಾಗುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ