ದೇಹದಲ್ಲಿನ ನಂಜಿನಾಂಶಗಳನ್ನು ಹೊರ ಹಾಕುವ ಆಹಾರಗಳು

ನಾವು ನಮಗೆ ಗೊತ್ತಿಲ್ಲದೇ ಎರಡು ರೀತಿಯ ಆಹಾರವನ್ನು ತಿನ್ನುತ್ತಿರುತ್ತೇವೆ. ಇವು ದೇಹದಲ್ಲಿ ಟಾಕ್ಸಿನ್ ಬೆಳೆಯಲು ಮತ್ತು ಹೊರ ಹಾಕಲು ಸಹಾಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನಾವು ನಮಗೆ ಗೊತ್ತಿಲ್ಲದೇ ಎರಡು ರೀತಿಯ ಆಹಾರವನ್ನು ತಿನ್ನುತ್ತಿರುತ್ತೇವೆ. ಇವು ದೇಹದಲ್ಲಿ ಟಾಕ್ಸಿನ್ ಬೆಳೆಯಲು ಮತ್ತು ಹೊರ ಹಾಕಲು ಸಹಾಯ ಮಾಡುತ್ತವೆ. ಆದರೆ, ಯಾವ್ಯಾವ ಆಹಾರ ನಂಜಿನಾಂಶವನ್ನು ಹೊರ ಹಾಕುತ್ತದೆ ಎನ್ನುವುದು ಹೆಚ್ಚು ತಿಳಿದಿರುವುದಿಲ್ಲ. ಹಾಗಾಗಿ, ದೇಹದಲ್ಲಿನ ನಂಜಿನಾಂಶ ಹೊರ ಹಾಕುವ ಆಹಾರ ಇಲ್ಲಿವೆ...
ನಿಂಬೆ: ನಿಂಬೆ ಹಣ್ಣಿನಲ್ಲಿ ಹೇರಳವಾದ ವಿಟಮಿನ್ ಸಿ ಹಾಗೂ ಸುಮಾರು ಶೇ.6ರಷ್ಟು ಸಿಟ್ರಿಕ್ ಆಮ್ಲವಿದೆ. ವಾರಕ್ಕೆ ಎರಡರಿಂದ ಮೂರು ನಿಂಬೆಹಣ್ಣಿನ ರಸ ಸೇವನೆ ದೇಹಕ್ಕೆ ಅನೂಕೂಲಕರ. 
ಬೆರ್ರಿ ಹಣ್ಣುಗಳು: ಈ ಹಣ್ಣಿನಲ್ಲಿ ಕಬ್ಬಿಣ ವೀಟಾ ಕ್ಯಾರೋಟಿನ್ ಗಳು ಹೇರಳವಾಗಿರುವುದರಿಂದ ದೇಹದ ಕಲ್ಮಶಗಳನ್ನು ಹೊರಹಾಕಲು ಸಹಕರಿಸುತ್ತದೆ. ಜೊತೆಗೆ ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ. 
ದಾಳಿಂಬೆ ಹಣ್ಣು: ದಾಳಿಂಬೆ ಹಣ್ಣಿನಲ್ಲಿ, ಫ್ಲೇವಾನಾಯ್ಡ್ ಎಂಬ ಆ್ಯಂಟಿ ಆಕ್ಸಿಡೆಂಟ್ ಗಳು ಹೇರಳವಾಗಿರುವುದರಿಂದ ರಕ್ತದಲ್ಲಿ ಆಮ್ಲಜನಕದ ಸರಬರಾಜು ಉತ್ತಮಗೊಂಡು, ದೇಹದಲ್ಲಿನ ನಂಜಿನ ಅಂಶವನ್ನಾ ಯಶಸ್ವಿಯಾಗಿ ಹೊರಹಾಕಲು ಸಹಾಯ ಮಾಡುತ್ತದೆ. 
ವಿವಿಧ ಸೊಪ್ಪುಗಳು: ನಮ್ಮ ಊಟದಲ್ಲಿ ಸಾಧ್ಯವಾದಷ್ಟು ಸೊಪ್ಪು ಅಳವಡಿಸಿಕೊಳ್ಳಬೇಕು. ಇದರ ಸೇವನೆಯಿಂದ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕರಗದ ನಾರು ಲಭ್ಯವಾಗುತ್ತೆ. ಇದರಿಂದ ಜೀರ್ಣ ಕ್ರಿಯೆ, ಮಲ ವಿಸರ್ಜನೆ ಸುಲಭವಾಗುತ್ತದೆ. ಈ ಮೂಲಕ ದೇಹದಲ್ಲಿನ ವಿಷಕಾರಕ ಅಂಶಗಳನ್ನು ಹೊರ ಹಾಕುತ್ತದೆ. 
ಬೆಳ್ಳುಳ್ಳಿ: ಬೆಳ್ಳುಳ್ಳಿಗೆ ವಿಶಿಷ್ಟವಾದ ವಾಸನೆ ಮತ್ತು ರುಚಿ ಬರಲು ಅದರಲ್ಲಿರುವ ಆ್ಯಲಿಸಿನ್ ಎಂಬ ಪೋಷಕಾಂಶ ಕಾರಣ. ಬಿಳಿ ರಕ್ತ ಕಣ ಹೆಚ್ಚಾಗುವುದಲ್ಲದೇ, ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನಾ ಸೇವಿಸಿದರೆ ಸಣ್ಣ ಕರುಳಿನೊಳಗೆ ಹುಣ್ಣುಗಳಾಗುವ ಸಾಧ್ಯತೆ ಇದೆ. ಹಾಗಾಗಿ, ಊಟದ ಬಳಿಕ ಮೂರನಾಲ್ಕು ಬೆಳ್ಳುಳ್ಳಿಯ ಹಸಿ ಎಸಳುಗಳನ್ನಾ ಸೇವಿಸುವುದು ಒಳಿತು. 
ಅಗಸೆ ಬೀಜ: ಅಗಸೆ ಬೀಜದಲ್ಲಿರುವ ಹೆಚ್ಚಿನ ಪ್ರಮಾಣದಲ್ಲಿ ಮ್ಯಾಂಗನೀಸ್, ಕರಗದ ನಾರು ದೇಹದಲ್ಲಿ ನೈಸರ್ಗಿಕ ನಂಜಿನಾ ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ವಾರಕ್ಕೊಮ್ಮೆ ಸೇವಿಸುವುದು ಒಳಿತು. 
ಕಂದು ಅಕ್ಕಿ ಅಥವಾ ಕುಚ್ಚಲಕ್ಕಿ: ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಬಿ, ಪ್ರೋಟೀನ್ ಹಾಗೂ ಮ್ಯಾಂಗನೀಸ್ ಇದೆ. ವಾರದಲ್ಲಿ ಒಂದು ಅಥವಾ ಎರಡು ಬಾರಿ ಈ ಅಕ್ಕಿಯ ಊಟ ಮಾಡುವುದರಿಂದ ಶರೀರದ ನಂಜುಗಳನ್ನಾ ಹೊರ ಹಾಕಲು ನೆರವಾಗುತ್ತೆ. 
ಅಕ್ರೋಟು: ವಿಟಮಿನ್ ಇ ಹೇರಳವಾಗಿದ್ದು, ನಂಜನ್ನು ನಿವಾರಿಸಲು ನೆರವಾಗುತ್ತೆ. 
ಅರಿಶಿನ: ಕರುಳಿನಲ್ಲಿ ಶೇಖರವಾಗಿರುವ ನಂಜನ್ನು ಅರಿಶಿನ ಹೊರಹಾಕುತ್ತದೆ. ಊರಿಯೂತ ತಡೆಯುವದಲ್ಲದೇ, ದೇಹದಲ್ಲಿರುವ ವೈರಸ್ ಗಳಿಂದ ರಕ್ಷಣೆ ಒದಗಿಸುತ್ತದೆ.
ದೊಡ್ಡ ಜೀರಿಗೆ: ಊಟದ ನಂತರ ಇದನ್ನು ಸೇವಿಸುವುದರಿಂದ ವಿಷಕಾರಿ ಅಂಶವನ್ನು ಹೊರಹಾಕುತ್ತದೆ. 
ಸೇಬು ಹಣ್ಣು: ಸಿಪ್ಪೆ ಸಮೇತ ಸೇಬು ಹಣ್ಣನ್ನು ತಿನ್ನುವುದರಿಂದ ಯಕೃತ್ ಮತ್ತು ಮೂತ್ರಪಿಂಡ ಕಾರ್ಯವಿಧಾನದಲ್ಲಿ ಹೆಚ್ಚಳಗೊಂಡು ದೇಹದ ವಿಷಕಾರಿ ಅಂಶ ಹೊರಹಾಕುತ್ತದೆ
ಚಕ್ಕೋತ ಹಣ್ಣು: ವಿಟಮಿನ್ ಸಿ ಇದೆ. ಲೈಕೋಪಿನ್ ಎಂಬ ಪೋಷಕಾಂಶ ದೇಹದಲ್ಲಿ ಗಡ್ಡೆಗಳಾಗದಂತೆ ತಡೆಯುತ್ತದೆ.
ಈರಳ್ಳಿ: ಹಸಿ ಈರುಳ್ಳಿಯಲ್ಲಿ ಗಂಧಕಯುಕ್ತ ಮೈನೋ ಆಮ್ಲಗಳು ಜೀರ್ಣ ಕ್ರಿಯೆಯನ್ನಾ ಪ್ರಚೋದಿಸುತ್ತವೆ. ವಿಷಕಾರಿ ವಸ್ತುವನ್ನು ದೇಹದಿಂದ ಹೊರಹಾಕಲು ಸಹಕರಿಸುತ್ತದೆ. 
ಬೀಟ್ ರೋಟ್: ಅತಿ ಹೆಚ್ಚಿನ ಸಕ್ಕರೆ ಅಂಶ ಹೊಂದಿರುವ ಬೀಟ್ ರೋಟ್ ನಲ್ಲಿ ವಿವಿಧ ವಿಟಮಿನ್ ಗಳು, ಖನಿಜಗಳಿವೆ. ಇದರ ಸೇವನೆಯಿಂದ ರಕ್ತದಲ್ಲಿನ ಬ್ಯಾಕ್ಟರಿಯಾಗಳನ್ನು ಹೊರ ಹಾಕಿ ನಂಜು ನಿವಾರಣೆ ಸಹಕರಿಸುತ್ತದೆ. 
ಕುಂಬಳ ಬೀಜಗಳು: ಇದನ್ನು ಒಣಗಿಸಿ ಸಿಪ್ಪೆ ಸುಲಿದು ತಿನ್ನಬೇಕು. ರಕ್ತದಲ್ಲಿರುವ ಕೆಟ್ಟ ಕೊಬ್ಬಿನಾಶಂವನ್ನು ತೊಲಗಿಸಿ, ಉತ್ತಮ ಕೊಬ್ಬಿನಾಂಶವನ್ನು ಹೆಚ್ಚಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com