ಅಸ್ತಮಾ ವಿರುದ್ಧ ಗೆಲ್ಲಬಹುದೇ?

ಅಸ್ತಮಾ ಎಂದೊಡನೆ ನಮ್ಮ ಕಣ್ಮುಂದೆ ಬರುವುದು, ಕೆಮ್ಮು ಅಥವಾ ಉಬ್ಬಸದಿಂದ ನರಳುತ್ತಿರುವ, ಸದಾ ಕಾಯಿಲೆಯಿಂದ ಬಳಲುವ ವ್ಯಕ್ತಿಯ ಚಿತ್ರ. ಆದರೆ ಇದು ಸದಾ ಹೀಗೆಯೇ ಇರುತ್ತದೆಯೇ?...
ವಿಶ್ವ ಅಸ್ತಮಾ ದಿನ
ವಿಶ್ವ ಅಸ್ತಮಾ ದಿನ

ಅಸ್ತಮಾ ಎಂದೊಡನೆ ನಮ್ಮ ಕಣ್ಮುಂದೆ ಬರುವುದು, ಕೆಮ್ಮು ಅಥವಾ ಉಬ್ಬಸದಿಂದ ನರಳುತ್ತಿರುವ, ಸದಾ ಕಾಯಿಲೆಯಿಂದ ಬಳಲುವ ವ್ಯಕ್ತಿಯ ಚಿತ್ರ. ಆದರೆ ಇದು ಸದಾ ಹೀಗೆಯೇ ಇರುತ್ತದೆಯೇ? ಅನೇಕ ವೇಳೆಗಳಲ್ಲಿ ನಾವು ರೋಗದ ವಾಸ್ತವಾಂಶಗಳಿಂದ ದೂರ ಓಡುತ್ತೇವೆ, ನಿರ್ಲಕ್ಷಿಸುತ್ತೇವೆ. ಇದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತದೆ. ಅಸ್ತಮಾ ಇದೆ ಎಂದು ಪತ್ತೆಯಾದರೆ ಜಗತ್ತೇನೂ ಮುಳುಗಿಹೋಗುವುದಿಲ್ಲ. ಅದನ್ನು ನಿರ್ವಹಿಸಬಹುದು ಮತ್ತು ಸುಲಭವಾಗಿ ನಿಯಂತ್ರಿಸಬಹುದು. ಸರಿಯಾದ ಚಿಕಿತ್ಸೆ ತೆಗೆದುಕೊಳ್ಳಬೇಕು ಅಷ್ಟೇ. ನಿಜಕ್ಕೂ ಅಸ್ತಮಾವನ್ನು ಗೆಲ್ಲಬಹುದು.

ಈ ಬಾರಿಯ ವಿಶ್ವ ಅಸ್ತಮಾ ದಿನದಂದು ನಾವು ಅಂತಹ ಅಸ್ತಮಾ ವೀರರ ಸ್ಫೂರ್ತಿಯನ್ನು ಸಂಭ್ರಮಿಸೋಣ. ರೋಗದ ಬಗ್ಗೆ ಅರಿವು, ಅದನ್ನು ಒಪ್ಪಿಕೊಳ್ಳುವುದು ಮತ್ತು ಸರಿಯಾದ ಚಿಕಿತ್ಸೆ ತೆಗೆದುಕೊಳ್ಳುವುದು ಇವುಗಳು ಅಸ್ತಮಾ ವಿರುದ್ಧ ಗೆಲ್ಲಲು ಅಗತ್ಯ. ಇಂದು ನಾವು ಈ ವಿಜಯಿಗಳಿಂದ ಇನ್‍ಹಲೇಷನ್ ಚಿಕಿತ್ಸೆಯ ಮೂಲಕ ಅವರು ಹೇಗೆ ಅಸ್ತಮಾ ವಿರುದ್ಧ ಗೆದ್ದರು ಎಂಬುದನ್ನು ತಿಳಿಯೋಣ.

ಲಕ್ಷಣಗಳು ಕಾಣದಿದ್ದರೆ ಅಸ್ತಮಾ ಇಲ್ಲ ಎಂದಲ್ಲ: ಅಸ್ತಮಾ ನಿರ್ವಹಣೆಯಲ್ಲಿ ಎದುರಾಗುವ ಅತಿ ದೊಡ್ಡ ಸವಾಲು ಇದೇ. ರೋಗ ಲಕ್ಷಣಗಳು ತಗ್ಗಿದರೆ ಚಿಕಿತ್ಸೆಯನ್ನು ನಿಲ್ಲಿಸಿಬಿಡುತ್ತಾರೆ. ಬಹುಶಃ ಬಹುಪಾಲು ಜನ ಹಣ ಉಳಿಸಲು ಹೀಗೆ ಮಾಡುತ್ತಾರೆ. ಇದರಿಂದಾಗಿ ರೋಗ ಉಲ್ಬಣಗೊಂಡು ಯಾವುದೇ ಸಮಯದಲ್ಲಿ ಕೆರಳಬಹುದು, ದುಪ್ಪಟ್ಟು ಪ್ರಭಾವಗಳೊಂದಿಗೆ. ಆದ್ದರಿಂದ ಚೆನ್ನಾಗಿ ಮನದಟ್ಟು ಮಾಡಿಕೊಳ್ಳಿ, ಲಕ್ಷಣಗಳು ಕಾಣದಿದ್ದರೆ ಅಸ್ತಮಾ ಇಲ್ಲ ಎಂದಲ್ಲ.

ಭಾರತದಲ್ಲಿನ ಪ್ರಸ್ತುತ ಅಸ್ತಮಾ ಸನ್ನಿವೇಶದ ಬಗ್ಗೆ ಮಾತನಾಡುತ್ತ ಡಾ.ಎಚ್. ಪರಮೇಶ್. ಪೀಡಿಯಾಟ್ರಿಕ್ ಪುಲ್ಮನೋಲೊಜಿಸ್ಟ್ & ಪರಿಸರವಾದಿ, ಸಿರೋಣ ಸೆಂಟರ್ ಫಾರ್ ಹೆಲ್ತ್ ಪ್ರಮೋಶನ್ಸ್. ಹೀಗೆ ಹೇಳುತ್ತಾರೆ: “ಅಸ್ತಮಾ ಒಂದು ದೀರ್ಘಕಾಲಿಕ ಚಿಕಿತ್ಸೆ ಅಗತ್ಯವಿರುವ ಕಾಯಿಲೆ. ಅನೇಕ ರೋಗಿಗಳು ಕೆಲವು ವಾರಗಳ ಚಿಕಿತ್ಸೆ ಬಳಿಕ ಸ್ವಲ್ಪ ಪರವಾಗಿಲ್ಲ ಎನಿಸಿದೊಡನೆ ಇನ್‍ಹೇಲರ್‍ಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿಬಿಡುತ್ತಾರೆ. ಇದು ಬಹಳ ಅಪಾಯಕಾರಿ ಮತ್ತು ಅವರನ್ನು ಫಿಟ್ ಮತ್ತು ಆರೋಗ್ಯವಂತರನ್ನಾಗಿ ಇರಿಸಿರುವುದು ಈ ಚಿಕಿತ್ಸೆಗಳೇ ಎಂಬುದನ್ನು ಮರೆಯಬಾರದು. ಸುಮ್ಮನೆ ತಾವೇ ಇಂತಹ ಅಪಾಯಕಾರಿ ನಿರ್ಣಯ ಕೈಗೊಳ್ಳುವುದಕ್ಕೆ ಮುನ್ನ ವೈದ್ಯರ ಬಳಿ ಎಲ್ಲವನ್ನೂ ಕೂಲಂಕಷವಾಗಿ ತಿಳಿಸಬೇಕು. ಅವರಿಗೆ ಇನ್‍ಹೇಲರ್ ಏಕೆ ಬೇಡ ಎಂಬುದಕ್ಕೆ ಕಾರಣಗಳನ್ನು ವಿವರಿಸಬೇಕು ಮತ್ತು ಅವರ ಸಲಹೆಯ ಪ್ರಕಾರ ನಡೆದುಕೊಳ್ಳಬೇಕು.”

ಇಂದಿನ ಸನ್ನಿವೇಶದ ಬಗ್ಗೆ ಮಾತನಾಡುತ್ತ ಡಾ.ಎಚ್ ಬಿ ಚಂದ್ರಶೇಕರ್. ಪುಲ್ಮನೋಲೊಜಿಸ್ಟ್ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆ.  “ಪ್ರತಿದಿನ ನಾನು 10-15 ರೋಗಿಗಳನ್ನು ನೋಡುತ್ತೇನೆ. ರೋಗದ ಬಗ್ಗೆ ಸಲಹೆ ಕೇಳುವವರ ಜೊತೆಗೆ ಚಿಕಿತ್ಸೆ ಮುಂದುವರಿಸುವ ಬಗ್ಗೆ ಕೇಳುವವರೂ ಇರುತ್ತಾರೆ. ಅಸ್ತಮಾ ಚಿಕಿತ್ಸೆಯ ಪ್ರಕಾರ ನಡೇದುಕೊಳ್ಳುವವರ ಸಂಖ್ಯೆ ಬಹಳ ಕಡಿಮೆ ಇದೆ. ಮಕ್ಕಳಿರಲಿ, ದೊಡ್ಡವರಿರಲಿ ಕೆಲವಾರು ತಿಂಗಳ ನಂತರ ನಿಲ್ಲಿಸಿಬಿಡುತ್ತಾರೆ. ಇಂತಹವ ಸಂಖ್ಯೆ ಸುಮಾರು ಶೇ. 70.”

ಡಾ.ಎಚ್. ಪರಮೇಶ್. “ರೋಗಿಗಳು ಔಷಧ ನಿಲ್ಲಿಸುವುದಕ್ಕೆ ಅನೇಕ ಕಾರಣಗಳಿವೆ. ಅಡ್ಡಪರಿಣಾಮಗಳ ಬಗ್ಗೆ ಅನಗತ್ಯ ಚಿಂತೆ, ಇನ್‍ಹೇಲರ್ ಬಗ್ಗೆ ಊಹಾಪೋಹಗಳು, ಸಾಮಾಜಿಕ ಕಳಂಕ, ಮತ್ತು ಕೆಲವೊಮ್ಮೆ ಔಷಧಗಳ ಖರ್ಚು-ವೆಚ್ಚ. ಮಾನಸಿಕ ಅಡ್ಡಿಗಳು ಕೂಡ ಕಾರಣವಾಗಬಹುದು. ಉದಾಹರಣೆಗೆ: ಆರೋಗ್ಯ ರಕ್ಷಣೆಯವರ ಬಗ್ಗೆ ಅಸಮಾಧಾನ, ಏನೇನೋ ನಿರೀಕ್ಷೆಗಳು, ತಮ್ಮ ಸ್ಥಿತಿಯ ಬಗ್ಗೆ ಸಿಟ್ಟು, ರೋಗದ ತೀವ್ರತೆಯ ಬಗ್ಗೆ ಉಪೇಕ್ಷೆ, ಆರೋಗ್ಯದ ಬಗ್ಗೆ ತಾತ್ಸಾರ ಇತ್ಯಾದಿ.”

ತುರ್ತಾಗಿ ಅಡ್ದಿಗಳನ್ನು/ನಿಷೇಧಗಳನ್ನು ಮೀರಿ ಇನ್‍ಹಲೇಷನ್ ಚಿಕಿತ್ಸೆಯ ಮಹತ್ತ್ವವನ್ನು ಅರ್ಥಮಾಡಿಕೊಳ್ಳಬೇಕಿದೆ. ಅಸ್ತಮಾ ವಿರುದ್ಧ ಗೆಲ್ಲಬೇಕಿದ್ದರೆ ಇನ್‍ಹಲೇಷನ್ ಚಿಕಿತ್ಸೆ ಅತ್ಯಗತ್ಯ. ಭಾರತದಲ್ಲಿ ಈ ಚಿಕಿತ್ಸೆಗೆ ಕಡಿಮೆ, ದಿನಕ್ಕೆ 4-6 ರೂಗಳು ವ್ಯಯವಾಗುತ್ತದೆ. ಇಡೀ ವರ್ಷದ ಚಿಕಿತ್ಸೆ ವೆಚ್ಚ ಒಂದು ದಿನ ಆಸ್ಪತ್ರೆಯಲ್ಲಿದ್ದರೆ ಆಗುವುದಕ್ಕಿಂತ ಕಡಿಮೆ!
“ಒಳಗೆ ಎಳೆದುಕೊಂಡ ಕಾರ್ಟಿಸ್ಟೀರಾಯ್ಡ್ ತೆರಪಿ (ICT) ಅಸ್ತಮಾ ನಿರ್ವಹಣೆಗೆ ಅತ್ಯಂತ ಮುಖ್ಯವಾದುದು. ಯಾವುದೇ ಚಿಕಿತ್ಸೆ ಪರಿಣಾಮಕಾರಿ ಮತ್ತು ಸುರಕ್ಷವಾಗಿರಬೇಕಾದರೆ ಅತ್ಯಂತ ಸೂಕ್ತ ಪ್ರಮಾಣದ ಔಷಧ ತೆಗೆದುಕೊಳ್ಳುವುದು ಬಹು ಮುಖ್ಯ. ಐಸಿಟಿ ವಿಷಯದಲ್ಲಿ ಔಷಧವನ್ನು ಸ್ವಲ್ಪ ಪ್ರಮಾಣದಲ್ಲಿ ಎಳೆದುಕೊಂಡರೂ ಅದು ನೇರವಾಗಿ ಸೇರಬೇಕಾದ ಸ್ಥಳವನ್ನೇ ಸೇರುತ್ತದೆ. ಇದರಿಂದ ಸಂಭಾವ್ಯ ಅಡ್ಡ ಪರಿಣಾಮಗಳೂ ಕಡಿಮೆ. ಮೌಖಿಕ ಔಷಧಿಗಳ ಪ್ರಮಾಣಕ್ಕಿಂತ ಇದು ಎಷ್ಟೋ ಪಾಲು ಕಡಿಮೆ ಇರುತ್ತದೆ. ಅನಗತ್ಯ ಪ್ರಮಾಣ ಒಳ ಸೇರಿ ಅಡ್ಡ ಪರಿಣಾಮಗಳನ್ನು ಉಂಟುಮಾಡುವ ಸಂಭವ ಕಡಿಮೆ,” ಎನ್ನುತ್ತಾರೆ ಡಾ. ಎಚ್ ಬಿ ಚಂದ್ರಶೇಕರ್.

ಈ ಚಿಕಿತ್ಸೆಯ ಬಗ್ಗೆ ಇರುವ ಊಹಾ-ಪೋಹಗಳನ್ನು ತೊಲಗಿಸಬೇಕು. ಉಸಿರಿನ ಮೂಲಕ ಎಳೆದುಕೊಂಡ ಕಾರ್ಟಿಸ್ಟೀರಾಯ್ಡ್ ತೆರಪಿ (ICT) ಅಸ್ತಮಾ ನಿರ್ವಹಣೆಗೆ ಅತಿ ಮುಖ್ಯ ಎಂದು ವ್ಯಾಪಕವಾಗಿ ಒಪ್ಪಿಕೊಳ್ಳಲಾಗಿದೆ. ಆದರೂ ಜನರಲ್ಲಿ ಅರಿವಿನ ಕೊರತೆ ಇದೆ. ಹಾಗಾಗಿ ಅನೇಕರು ‘ಸ್ಟೀರಾಯ್ಡ್’ ಎಂಬ ಪದ ಕೇಳಿದ ತಕ್ಷಣ ಅನಬಾಲಿಕ್ ಸ್ಟೀರಾಯ್ಡ್ (ದೇಹ ಬೆಳೆಸಲು ಬಳಸುವ) ಎಂದುಕೊಳ್ಳುತ್ತಾರೆ.

‘ಸ್ಟೀರಾಯ್ಡ್’ ಬಗೆಗಿನ ಭಯವನ್ನು ಸ್ಪಷ್ಟಪಡಿಸಲು ಡಾ. ಎಚ್. ಪರಮೇಶ್. ಹೇಳುತ್ತಾರೆ: “ಕಾರ್ಟಿಸ್ಟೀರಾಯ್ಡ್‍ಗಳು ಬೇರೆ, ಅನಬಾಲಿಕ್ ಸ್ಟೀರಾಯ್ಡ್‍ಗಳು ಬೇರೆ. ಕೆಲವು ಕ್ರೀಡಾಪಟುಗಳು ದೇಹ ಬೆಳೆಸಲು ಅಕ್ರಮವಾಗಿ ಅನಬಾಲಿಕ್ ಸ್ಟೀರಾಯ್ಡ್‍ಗಳನ್ನು ತೆಗೆದುಕೊಳ್ಳುತ್ತಾರೆ. ಕಾರ್ಟಿಸ್ಟೀರಾಯ್ಡ್‍ಗಳನ್ನು ಅಸ್ತಮಾ ಚಿಕಿತ್ಸೆಗೆ ಬಳಸಲಾಗುತ್ತದೆ. ಇವು ಹಾರ್ಮೋನುಗಳು. ಇವುಗಳನ್ನು ನಮ್ಮ ಶರೀರವೇ ಸಹಜವಾಗಿ ಉತ್ಪಾದಿಸುತ್ತದೆ. ಅಸ್ತಮಾ ನಿರ್ವಹಣೆಗೆಂದು ವೈದ್ಯರು ಸ್ವಲ್ಪ ಪ್ರಮಾಣದಲ್ಲಿ ಇವುಗಳನ್ನು ಸೂಚಿಸುತ್ತಾರೆ.”

ಅಸ್ತಮಾ ಮತ್ತು  COPD ಇಂದ ಬಳಲುತ್ತಿರುವ ಜನರಿಗೆ ಕಾರ್ಟಿಸ್ಟೀರಾಯ್ಡ್‍ಗಳು ಜೀವದಾಯಕ. ಗಾಳಿಮಾರ್ಗಗಳಲ್ಲಿ ಆಗುವ ಉರಿಯೂತವನ್ನು ತಡೆಯಲು/ಹಿಮ್ಮೆಟ್ಟಲು ನೆರವಾಗುತ್ತವೆ ಮತ್ತು ಉಲ್ಬಣಗೊಳಿಸುವ ವಸ್ತುಗಳಿಗೆ ಸಂವೇದನೆಯನ್ನು ಕಡಿಮೆ ಮಾಡುತ್ತದೆ.

ಡೋಸ್ ಕೌಂಟರ್‍ಗಳು: ಅಸ್ತಮಾ ರೋಗಿಗಳು ಚಿಕಿತ್ಸೆಯನ್ನು ಪಾಲಿಸುವುದಿಲ್ಲ. ಇದೇ ದೊಡ್ಡ ಆರೋಗ್ಯ ಮತ್ತು ಆರ್ಥಿಕ ಸವಾಲಾಗಿಬಿಟ್ಟಿದೆ. ಹಲವಾರು ಅಧ್ಯಯನಗಳ ಪ್ರಕಾರ ಚಿಕಿತ್ಸಾ ಕ್ರಮವನ್ನು ಪಾಲಿಸದಿರುವವರ ಸಂಖ್ಯೆ 30-70%. ರೋಗಿಗಳು ಡೋಸ್ ಕೌಂಟರ್‍ಗಳನ್ನು ಮೆಚ್ಚುತ್ತಾರೆ. ಕಾರಣ ಅವು ಆರಾಮ ಮತ್ತು ಹೆಚ್ಚು ಸುರಕ್ಷ. ಇನ್‍ಹೇಲರ್‍ನಲ್ಲಿ ಇನ್ನೂ ಎಷ್ಟು ಔಷಧ ಉಳಿದಿದೆ ಎಂದು ಲೆಕ್ಕ ಸಿಗುತ್ತದೆ.


ನ್ಯಾಷನಲ್ ಅಸ್ತಮಾ ಎಜುಕೇಷನ್ ಮತ್ತು ಪ್ರಿವೆನ್ಷನ್ ಪ್ರೋಗ್ರಾಂ (NAEPP) ತನ್ನ ನವೀಕರಿಸಿದ ಮಾರ್ಗದರ್ಶಿಕೆಗಳಲ್ಲಿ ಮಕ್ಕಳೂ ಸೇರಿದಂತೆ ಎಲ್ಲ ವಯೋಮಾನದ ಜನರಿಗೆ ಸೌಮ್ಯ ಮತ್ತು ಸತತವಾದ ಅಸ್ತಮಾ ವಿರುದ್ಧ ಕಾರ್ಟಿಸ್ಟೀರಾಯ್ಡ್ ಇನ್‍ಹಲೇಷನ್ ಚಿಕಿತ್ಸೆಯನ್ನು (ICS) ಶಿಫಾರಸು ಮಾಡಿದೆ1. ಕಾರ್ಟಿಸ್ಟೀರಾಯ್ಡ್ ಇನ್‍ಹಲೇಷನ್ ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸಿರುವುದು ಕಂಡು ಬಂದಿದೆ. ಅಸ್ತಮಾ ದಾಳಿಗಳು ಕಡಿಮೆಯಾಗಲು, ಅಸ್ತಮಾ ನಿಯಂತ್ರಿಸಲು, ಮೌಖಿಕ ಸ್ಟೀರಾಯ್ಡ್‍ಗಳ ಅಗತ್ಯವನ್ನು ತಗ್ಗಿಸಲು ಮತ್ತು ಪದೇ ಪದೇ ಇಖ /ಆಸ್ಪತ್ರೆಗಳ ಭೇಟಿಗಳ ಅಗತ್ಯವನ್ನು ಕಡಿಮೆ ಮಾಡಲು ಇದು ನೆರವಾಗುತ್ತದೆ.

ಅಸ್ತಮಾ ಬಗ್ಗೆ:
ಅಸ್ತಮಾ ಒಂದು ದೀರ್ಘಕಾಲಿಕ ಕಾಯಿಲೆ. ವಿಶ್ವಾದ್ಯಂತ ಬಹಳಷ್ಟು ಜನಸಂಖ್ಯೆಯನ್ನು ಇದು ಬಾಧಿಸುತ್ತಿದೆ ಮತ್ತು ವರ್ಷ ವರ್ಷ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಸತ್ಯಾಂಶಗಳ ಪತ್ರದ ಪ್ರಕಾರ ಜಗತ್ತಿನಲ್ಲಿ 10-15 ಕೋಟಿ ಜನರು – ಸರಿಸುಮಾರು ರಷ್ಯನ್ ಒಕ್ಕೂಟದ ಜನಸಂಖ್ಯೆ – ಅಸ್ತಮಾದಿಂದ ಬಳಲುತ್ತಿದ್ದಾರೆ.  ಭಾರತದಲ್ಲಿ ಅಸ್ತಮಾ ರೋಗಿಗಳ ಸಂಖ್ಯೆ 1.5-2.0 ಕೋಟಿ ತಲುಪಿದೆ. ಅಸ್ತಮಾವನ್ನು ಸಮರ್ಪಕವಾಗಿ ನಿರ್ವಹಿಸುವ ಚಿಕಿತ್ಸೆಯನ್ನು ಗುರುತಿಸುವುದರ ಮಹತ್ತ್ವವನ್ನು ಅರಿಯದ ಹೊರತು ಈ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ2.

ಕಾಲ ಬದಲಾಗುತ್ತಿದ್ದಂತೆ ರೋಗದ ಆರ್ಭಟವೂ ಬಹುಪಾಲು ಹೆಚ್ಚಿದೆ. ಆದ್ದರಿಂದ ಪರಿಣಾಮಕಾರಿ ಚಿಕಿತ್ಸೆಯನ್ನು ತೆಗೆದುಕೊಂಡು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹು ಮುಖ್ಯವಾಗುತ್ತದೆ. ಸರಿಯಾಗಿ ನಿರ್ವಹಿಸಿದರೆ ನೀವು ಅಸ್ತಮಾ ವಿರುದ್ಧ ಗೆಲ್ಲಬಹುದು.

ಅಸ್ತಮಾ ಎಂದರೆ ಶ್ವಾಸಕೋಶಗಳ ದೀರ್ಘಕಾಲಿಕ ಕಾಯಿಲೆ. ಶ್ವಾಸಕೋಶಗಳ ಗಾಳಿಮಾರ್ಗಗಳಲ್ಲಿ ಉರಿಯೂತ ಉಂಟಾಗುತ್ತದೆ. ಈ ಉರಿಯೂತದಿಂದ ಗಾಳಿ ಸಂಚರಿಸಲು ಕಷ್ಟವಾಗಿ ಶ್ವಾಸಕೋಶಗಳು ಹಲವು ಬಗೆಯ ಅಲರ್ಜಿಗಳಿಗೆ ತುತ್ತಾಗುತ್ತದೆ. ಇದೇ ಅಸ್ತಮಾ ದಾಳಿಗೆ ಕಾರಣವಾಗುವುದು. ಉದಾ: ಧೂಳು, ಥಂಡಿ, ಪರಾಗ, ತುಪ್ಪಳ, ವೈರಸ್ ಮತ್ತು ಗಾಳಿಯಲ್ಲಿರುವ ಮಲಿನಕಾರಕಗಳು; ಅನೇಕ ವೇಳೆ ಭಾವನಾತ್ಮಕ ಸಮಸ್ಯೆಗಳೂ ಕಾರಣವಾಗಬಹುದು. ಸರಣಿಕ್ರಿಯೆ ಆರಂಭವಾದ ತಕ್ಷಣ ಊದಿಕೊಂಡ ಶ್ವಾಸಮಾರ್ಗಗಳು ಕೆರಳುತ್ತವೆ ಮತ್ತು ಸ್ನಾಯುಗಳು ಬಿಗಿಗೊಂಡು ಅತಿಯಾದ ಲೋಳೆ ಒಸರಿ ಮಾರ್ಗಗಳು ಮತ್ತಷ್ಟು ಕಿರಿದಾಗಿ ಸಹಜವಾಗಿ ಉಸಿರಾಡಲು ಸಾಧ್ಯವಿಲ್ಲದಾಗುತ್ತದೆ. ಇದು ಮಾರಕವೂ ಆಗಬಹುದು.

ಸಾಮಾನ್ಯವಾಗಿ ಕಂಡುಬರುವ ಅಸ್ತಮಾ ಲಕ್ಷಣಗಳು: ಎದೆ ಬಿಗಿತ, ಉಸಿರಾಟಕ್ಕೆ ತೊಂದರೆ, ಕೆಮ್ಮು. ಮಕ್ಕಳಲ್ಲಿ ಹಲವು ಬಾರಿ ಒಂದೇ ಲಕ್ಷಣ ಕಾಣಿಸಿಕೊಳ್ಳಬಹುದು, ಕೆಮ್ಮು. ರಾತ್ರಿ ಅಥವಾ ಮುಂಜಾನೆ ಅದು ಬಹಳವೇ ಹೆಚ್ಚಿರಬಹುದು. ಹಲವು ಬಗೆಯ ಕೆಮ್ಮಿನ ಸಿರಪ್ ಅಥವಾ ಔಷಧಿಗಳನ್ನು ತೆಗೆದುಕೊಂಡರೂ ಕಡಿಮೆಯಾಗುವುದಿಲ್ಲ. ಅಸ್ತಮಾ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ವೈದ್ಯರಿಂದ ಸರಿಯಾಗಿ ರೋಗನಿದಾನ ಮಾಡಿಸುವುದು ಉತ್ತಮ.

ಅಸ್ತಮಾ ಗುಣವಾಗದಿದ್ದರೂ ಅದನ್ನು ಸಂಪೂರ್ಣ ನಿಯಂತ್ರದಲ್ಲಿಟ್ಟುಕೊಳ್ಳಬಹುದು ಮತ್ತು ಸಹಜ ಜೀವನ ನಡೆಸಬಹುದು. ಮಾರುಕಟ್ಟೆಯಲ್ಲಿ ಅಸ್ತಮಾಗೆ ಅನೇಕ ಬಗೆಯ ಚಿಕಿತ್ಸೆಗಳು/ಔಷಧಿಗಳು ಸಿಗುತ್ತವೆ. ಆದರೆ ಅತ್ಯುತ್ತಮ ಮತ್ತು ಸುರಕ್ಷಿತವಾದದ್ದೆಂದರೆ ಇನ್‍ಹೇಲರ್ ಎಂದು ವಿಶ್ವಾದ್ಯಂತ ಒಪ್ಪಲಾಗಿದೆ. ಇದರಲ್ಲಿ ಔಷಧ ನೇರವಾಗಿ ಶ್ವಾಸಕೋಶಗಳಿಗೆ ತಲುಪಿ ತಕ್ಷಣ ಕಾರ್ಯೋನ್ಮುಖವಾಗುತ್ತದೆ. ಅದೇ ಗುಳಿಗೆ ಅಥವಾ ಸಿರಪ್ ಮೊದಲು ಹೊಟ್ಟೆಗೆ ಹೋಗಿ ನಂತರ ರಕ್ತವನ್ನು ಸೇರಿ ಕೊನೆಗೆ ಶ್ವಾಸಕೋಶವನ್ನು ತಲುಪುತ್ತದೆ. ಇದರಿಂದ ಹಲವಾರು ಅಡ್ಡಪರಿಣಾಮಗಳೂ ಆಗಬಹುದು. ಜೊತೆಗೆ ಗುಳಿಗೆ/ಸಿರಪ್‍ಗಿಂತ 20 ಪಟ್ಟು ಕಡಿಮೆ ಪ್ರಮಾಣದ ಔಷಧಿ ಸಾಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com