ಆರೋಗ್ಯಕರ ಲೈಂಗಿಕ ಜೀವನಕ್ಕೆ ಕಡಿಮೆ ತಿನ್ನಿ!

ತೂಕ ಕಳೆದುಕೊಳ್ಳಲು ನೀವು ತಿನ್ನುವ ಆಹಾರದ ಕ್ಯಾಲೊರಿಗಳ ಬಗ್ಗೆ ಈಗಾಗಲೇ ಎಚ್ಚರಿಕೆಯಿಂದಿದ್ದರೆ ಮತ್ತೊಂದು ಸಂತಸದ ಸುದ್ದಿ - ಅದು ಆರೋಗ್ಯಕರ ಲೈಂಗಿಕ ಜೀವನಕ್ಕೂ ಸಹಕಾರಿ ಎನ್ನುತ್ತದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ತೂಕ ಕಳೆದುಕೊಳ್ಳಲು ನೀವು ತಿನ್ನುವ ಆಹಾರದ ಕ್ಯಾಲೊರಿಗಳ ಬಗ್ಗೆ ಈಗಾಗಲೇ ಎಚ್ಚರಿಕೆಯಿಂದಿದ್ದರೆ ಮತ್ತೊಂದು ಸಂತಸದ ಸುದ್ದಿ - ಅದು ಆರೋಗ್ಯಕರ ಲೈಂಗಿಕ ಜೀವನಕ್ಕೂ ಸಹಕಾರಿ ಎನ್ನುತ್ತದೆ ಅಧ್ಯಯನವೊಂದು.

ಈ ಅಧ್ಯಯನದ ಪ್ರಕಾರ ಕಡಿಮೆ ತಿನ್ನುವುದರಿಂದ ತೂಕ ಕಳೆದುಕೊಳ್ಳುವುದಷ್ಟೇ ಅಲ್ಲದೆ ಕ್ಯಾಲೊರಿಗಳ ನಿಯಂತ್ರಣ ವ್ಯಕ್ತಿಯ ಮೂಡ್ ಅನ್ನು ಉಲ್ಲಸಿತಗೊಳಿಸಿ, ಉದ್ವೇಗವನ್ನು ತಗ್ಗಿಸಿ ಸೂಪರ್ ಸಂಭೋಗದ ಜೀವನಕ್ಕೂ ಎಡೆಮಾಡಿಕೊಡುತ್ತದೆ.

ಈ ಸಮೀಕ್ಷೆಯಲ್ಲಿ ಲೌಸಿಯಾನಾದ ಪೆನ್ನಿಂಗ್ಟನ್ ಬಯೋಮೆಡಿಕಲ್ ಸಂಶೋಧನಾ ಕೇಂದ್ರದವರು ೨೧೮ ಜನ ಆರೋಗ್ಯಕರ ವ್ಯಕ್ತಿಗಳನ್ನು ಎರಡು ವರ್ಷದವರೆಗೆ ಅಧ್ಯಯನ ಮಾಡಿದ್ದಾರೆ.

ಅಧ್ಯಯನ ಮಾಡಲಾದ ವ್ಯಕ್ತಿಗಳನ್ನು ಎರಡು ಪಂಗಡಗಳಾಗಿ ವಿಂಗಡಿಸಿ, ಒಂದು ಪಂಗಡಕ್ಕೆ ೨೫% ಕ್ಯಾಲೊರಿ ಯನ್ನು ಕಡಿತಗೊಳಿಸುವಂತೆ ಹೇಳಲಾಗಿದೆ ಮತ್ತೊಂದು ಪಂಗಡಕ್ಕೆ ಎಂದಿನ ಆಹಾರ ಉಪಚಾರ ಮುಂದುವರೆಸಿದೆ.

ಕ್ಯಾಲೊರಿ ಕಡಿತಗೊಂಡ ಪಂಗಡದ ಜನರಲ್ಲಿ ಹೆಚ್ಚಿನ ಸಂಭೋಗ ಆಸಕ್ತಿ ಮತ್ತು ಮೂಡ್ ನಲ್ಲಿ ಉಲ್ಲಾಸ ಕಂಡು ಬಂದಿದೆ ಎಂದು ಸಂಶೋಧಕರೊಬ್ಬರು ತಿಳಿಸಿದ್ದಾರೆ. ಈ ಗುಂಪಿನ ಸದಸ್ಯರು ತೂಕವನ್ನು ಕಳೆದುಕೊಂಡದ್ದಲ್ಲದೆ ಒಳ್ಳೆಯ ನಿದ್ದೆಯನ್ನು ಕೂಡ ಸವಿದಿದ್ದಾರೆ.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com