ನವದೆಹಲಿ: ಬಾಯಿಯ ದುರ್ವಾಸನೆ ಮತ್ತು ಹಳದಿ ಹಲ್ಲಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇಲ್ಲೊಂದು ಖುಷಿಯ ಸುದ್ದಿಯಿದೆ. ಉಸಿರಿನ ದುರ್ವಾಸನೆ ಹಳದಿ ಹಲ್ಲು, ಕರೆಗಟ್ಟಿದ ಹಲ್ಲಿನ ಸಮಸ್ಯೆಗೆ ಅರಿಶಿನ ಪುಡಿ ಉತ್ತಮ ಮದ್ದಾಗಿದೆ.
ಹಲ್ಲಿನ ಸೌಂದರ್ಯ ಹೆಚ್ಚಿಸಿಕೊಳ್ಳಲು, ಹಲ್ಲನ್ನು ಬಿಳಿಯಾಗಿಸಿಕೊಳ್ಳಲು ಕೆಲವು ಜನ ವೈದ್ಯರ ಮೊರೆ ಹೋಗುತ್ತಾರೆ, ಆದರೆ ಇದು ಉತ್ತಮ ವಿಧಾನವಲ್ಲ. ನಿಯಮಿತವಾಗಿ ಹಲ್ಲಿನ ಪರೀಕ್ಷೆ ಹಾಗೂ ಬಾಯಿಯನ್ನು ಸ್ವಚ್ಚವಾಗಿಟ್ಟುಕೊಳ್ಳುವುದರಿಂದ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಹಾಡಬಹುದು.
ಪ್ರಾಚೀನ ಕಾಲದಿಂದಲೂ, ಅರಿಶಿನವನ್ನು ಔಷಧಿಗಳಲ್ಲಿ ಬಳಸಲಾಗುತ್ತಿತ್ತು. ಇದರಲ್ಲಿರುವ ಔಷಧೀಯ ಗುಣ ಹಲ್ಲುಗಳಲ್ಲಿರುವ ಕ್ರಿಮಿಗಳನ್ನು ಸಾಯಿಸುವುದರ ಜೊತೆಗೆ, ಬಾಯಿಯ ದುರ್ವಾಸನೆಯನ್ನು ತಡೆಗಟ್ಟಿ ಆರೋಗ್ಯವಾಗಿಡುತ್ತದೆ.
ಅರಿಶಿನ ಪುಡಿ, ಅದಕ್ಕೆ ತೆಂಗಿನ ಎಣ್ಣೆ ಮತ್ತು ಪುದಿನಾ ಎಲೆ ಪುಡಿಯನ್ನು ಮಿಕ್ಸ್ ಮಾಡಿ ಪ್ರತಿನಿತ್ಯ ಹಲ್ಲು ಉಜ್ಜುವುದರಿಂದ ಹಲ್ಲುಗಳು ಮುತ್ತಿನಂತೆ ಹೊಳೆಯುವುದರ ಜೊತೆಗೆ ಬಾಯಿಯ ದುರ್ವಾಸನೆ ಕೂಡ ನಿವಾರಣೆ ಯಾಗುತ್ತದೆ.
Advertisement