ಗರ್ಭಕೋಶದ ಸಮಸ್ಯೆಗಳಿಗೆ ಮಿರೇನ

ಮಹಿಳೆಯರಲ್ಲಿ ಗರ್ಭಕೋಶ ಸಮಸ್ಯೆ ಸಾಮಾನ್ಯವಾಗಿದೆ. ಗರ್ಭಕೋಶ ಸಮಸ್ಯೆಯ ಆಧಾರದ ಮೇಲೆ ವಿವಿಧ ಸಮಸ್ಯೆಗೆ ವಿವಿಧ ರೀತಿಯ ಚಿಕಿತ್ಸೆಗಳು ಇವೆ.
ಗರ್ಭಕೋಶದ ಸಮಸ್ಯೆಗಳಿಗೆ ಮಿರೇನ
Updated on

ಮಹಿಳೆಯರಲ್ಲಿ ಗರ್ಭಕೋಶ ಸಮಸ್ಯೆ ಸಾಮಾನ್ಯವಾಗಿದೆ. ಗರ್ಭಕೋಶ ಸಮಸ್ಯೆಯ ಆಧಾರದ ಮೇಲೆ ವಿವಿಧ ಸಮಸ್ಯೆಗೆ ವಿವಿಧ ರೀತಿಯ ಚಿಕಿತ್ಸೆಗಳು ಇವೆ. ಮಿರೇನ ಗರ್ಭಕೋಶ ಸಮಸ್ಯೆಗೆ ಪರಿಹಾರ ಒದಗಿಸುವ ನವೀನ ಚಿಕಿತ್ಸೆಯಾಗಿದೆ.

ಏನಿದು ಮಿರೇನ ಎಂಬ ಪ್ರಶ್ನೆ ಮೂಡುತ್ತಿದೆ. ಇದು "T" ಆಕಾರದ ಒಂದು ಪ್ಲಾಸ್ಟಿಕ್‌ ಉಪಕರಣವನ್ನು ಗರ್ಭಕೋಶದ ಒಳಗೆ ಸೇರಿಸಲಾಗುತ್ತದೆ. ಈ ಉಪಕರಣ ಲೆವೆನೂರ್‌ಜೆಸ್ಟೆಲ್‌ ಹಾರ್ಮೋನ್‌ ಹೊಂದಿರುತ್ತದೆ.

ಈ ಉಪಕರಣ ಪ್ರತಿದಿನ ಅಗತ್ಯವಾದ ಹಾರ್ಮೋನ್‌ನ್ನು ಗರ್ಭಕೋಶಕ್ಕೆ ಬಿಡುತ್ತಾರೆ. ಈ ಉಪಕರಣದ ಕೆಳಭಾಗದಲ್ಲಿ ಪ್ಲಾಸ್ಟಿಕ್‌ ಅಥವಾ ನೈಲಾನ್‌ನ ದಾರವನ್ನು ಹೊಂದಿರುತ್ತದೆ. ಇದು ಉಪಕರಣ ಜಾರಿದೆಯೇ? ಇಲ್ಲವೇ ಎಂಬುದನ್ನು ಪರೀಕ್ಷಿಸಲು ನೆರವಾಗುತ್ತದೆ.

ಸರಿಯಾದ ಸ್ಥಳದಲ್ಲಿದೆಯೋ, ಜಾರಿಯಿದೆಯೋ? ಎಂಬುದರ ಪತ್ತೆ ಜೊತೆಗೆ ನೇತಾಡುವ ದಾರದಿಂದ ಉಪಕರಣವನ್ನು ಸುಲಭವಾಗಿ ತೆಗೆಯಬಹುದು. ಒಮ್ಮೆ ಈ ಮಿರೇನಾ ಉಪಕರಣ ಅಳವಡಿಸಿದೆ. ಅದು ಭರ್ತಿ ಐದು ವರ್ಷ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ.

ಈ ಮಿರೇನ ಉಪಕರಣವನ್ನು ಹಲವು ಸಂದರ್ಭಗಳಲ್ಲಿ ಬಳಸಬಹುದು. ದೀರ್ಘಕಾಲದ ಅಂತರದ ನಂತರ ಮತ್ತೆ ಮಗು ಪಡೆಯುವ ಸಂದರ್ಭದಲ್ಲೂ ಇದನ್ನು ಬಳಸಬಹುದು. ಜೊತೆಗೆ ಎಂಡೋಮೆಟ್ಟಿಯಿಸ್‌ ಮತ್ತೆ ಪೆಲ್ಟಿಕ್‌ ನೋವು ಜಾಸ್ತಿಯಾದ ಸಂದರ್ಭದಲ್ಲೂ ಮಿರೇನ ಬಳಸಬಹುದು.

ಅನಿಮಿಯಾ ತಡೆಯಲು, ಮುಟ್ಟಿನ ಸಂದರ್ಭದಲ್ಲಿ ಅಧಿಕ ಸ್ರಾವ ನಿಯಂತ್ರಿಸಲು, ಕೆಲ ಪ್ರಕರಣಗಳಲ್ಲಿ ಅಧಿಕ ಸ್ರಾವ ನಿಯಂತ್ರಿಸಲು, ಕೆಲ ಪ್ರಕರಣಗಳಲ್ಲಿ ಹಿಸ್ಟೇರಿರೆಕ್ಟಮಿ ತಡೆಯಲು ಮಿರೇನ ಬಳಸಬಹುದಾಗಿದೆ.

ಈ ಮಿರೇನ ಕಾಪರ್‌-ಟೀ ಮಾದರಿಯಲ್ಲಿ ಅಳವಡಿಸಲಾಗುತ್ತದೆ.

ಆದರೆ ತಜ್ಞ ವೈದ್ಯರಿಂದ ಇದನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು. ಈ ಮಿರೇನವನ್ನು ಮುಟ್ಟಿನ 5 ರಿಂದ 7 ದಿನದ ಅವಧಿಯಲ್ಲಿ ಅಳವಡಿಸುವುದು ಸೂಕ್ತ.

ಈ ಉಪಕರಣ ಹಾರ್ಮೋನ್‌ನ್ನು ಸಣ್ಣ ಪ್ರಮಾಣದಲ್ಲಿ ಪ್ರತಿದಿನವೂ ಬಿಡುಗಡೆ ಮಾಡುತ್ತದೆ. ಈ ಹಾರ್ಮೋನ್‌ ಗರ್ಭಧರಿಸುವುದುನ್ನು ತಡೆಯುವ ಜೊತೆಗೆ, ಅಧಿಕ ಸ್ರಾವವನ್ನು ತಡೆಯುತ್ತದೆ. ಈ ಹಾರ್ಮೋನ್‌ ಗರ್ಭಕೋಶದ ಗೋಡೆಯನ್ನು ತೆಳುವಾಗಿಸುವ ಮೂಲಕ ರಕ್ತ ನಷ್ಟವನ್ನು ತಡೆಯುತ್ತದೆ.

ಯಾರಿಗೆ ಬೇಡ!
ಗರ್ಭಿಣಿಯರಿಗೆ, ಅನಿಯಮಿತ ಸ್ರಾವ ಸಮಸ್ಯೆ ಹೊಂದಿರುವವರಿಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲದ ಸರ್ವಿಕಲ್ ಅಥವಾ ಗರ್ಭಕೋಶದ ಕ್ಯಾನ್ಸರ್‌, ಸ್ತನ ಕ್ಯಾನ್ಸರ್‌ ಹೊಂದಿರುವವರಿಗೆ ಈ ಮಿರೇನ ಅಳವಡಿಕೆ ನಿಷಿದ್ಧ. ಇದರ ಜೊತೆಗೆ ಲಿವರ್‌ ಕಾಯಿಲೆ ಅಥವಾ ಗಡ್ಡೆ ಸಮಸ್ಯೆ ಇರುವವರಿಗೂ ಇದನ್ನು ಅಳವಡಿಸಬಾರದು.

ಈ ಮಿರೇನ ಬಳಕೆ ಬಹಳ ಅನುಕೂಲವಾಗಿದ್ದು, ಬೇಕಾದಾಗ ಮಗು ಪಡೆಯಲು ಇದು ಪರಿಣಾಮಕಾರಿಯಾಗಿದೆ. ಈ ಉಪಕರಣ ಬಳಕೆಯಿಂದ  ಮುಟ್ಟಾಗುವ ಕ್ರಿಯೆ ಸಲೀಸು ಎನ್ನಿಸುತ್ತದೆ.

ಈ ಉಪಕರಣ ಅಳವಡಿಸಿಕೊಂಡ ನಂತರದ 3 ರಿಂದ 6 ತಿಂಗಳು ಅನಿಯಂತ್ರಿತ ಸ್ರಾವ ಸಾಮಾನ್ಯ. ಕೆಲವೊಂದು ಸಂದರ್ಭದಲ್ಲಿ ಈ ಉಪಕರಣ ಜಾರುತ್ತದೆ.

ಹಾಗಾಗಿ ತಪಾಸಣೆ ಅಗತ್ಯ. ಈ ಉಪಕರಣ ಅಳವಡಿಕೆ ತಕ್ಷಣ ಕೆಲವ ಮಹಿಳೆಯರಿಗೆ ನೋವು ಆಗಬಹುದು. ಏನೋ ಒಂದು ರೀತಿಯ ಅನಾನುಕೂಲದ ಭಾವನೆ ಮೂಡಬಹುದು. ಆದರೆ ಕಾಲ ನಂತರ ಇದು ಪರಿಣಾಮಕಾರಿ 5 ವರ್ಷ ಇದು ಕೆಲಸ ಮಾಡುತ್ತದೆ.

- ಡಾ|| ರಮೇಶ್‌, ಅಸ್ಟಿಯಸ್‌ ಆಸ್ಪತ್ರೆ, ರಾಜಾಜಿನಗರ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com