ಋತುಸ್ರಾವಕ್ಕೆ ವಯಸ್ಸು ಇಲ್ಲ!

ಜೀವನಶೈಲಿಯ ಒತ್ತಡದಿಂದಾಗಿ ನಗರದ ಅನೇಕ ಮಹಿಳೆಯರು ತಮ್ಮ 30ನೇ ವರ್ಷದ ಕೊನೆ ಅಥವಾ 40ನೇ ವರ್ಷದ ಆರಂಭದಲ್ಲಿಯೇ ಋತುಸ್ರಾವದ ಏರುಪೇರು ಸಮಸ್ಯೆಗೆ ಒಳಗಾಗುತ್ತಾರೆ.
ಋತುಸ್ರಾವಕ್ಕೆ ವಯಸ್ಸು ಇಲ್ಲ!

ಜೀವನಶೈಲಿಯ ಒತ್ತಡದಿಂದಾಗಿ ನಗರದ ಅನೇಕ ಮಹಿಳೆಯರು ತಮ್ಮ 30ನೇ ವರ್ಷದ ಕೊನೆ ಅಥವಾ 40ನೇ ವರ್ಷದ ಆರಂಭದಲ್ಲಿಯೇ ಋತುಸ್ರಾವದ ಏರುಪೇರು ಸಮಸ್ಯೆಗೆ ಒಳಗಾಗುತ್ತಾರೆ. ಪ್ರಸೂತಿ ತಜ್ಞರ ಪ್ರಕಾರ, ನಗರ ಪ್ರದೇಶದಲ್ಲಿ ಋತುಸ್ರಾವ ಸಮಸ್ಯೆಗೆ ಒಳಗಾಗುವವರ ಸಂಖ್ಯೆ ಹೆಚ್ಚು. ಇದು, ನಗರ ಪ್ರದೇಶದ ಮಹಿಳೆಯರು ಎದುರಿಸುತ್ತಿರುವ ಒತ್ತಡದ ಬದುಕು ಕಾರಣವಾಗಿದೆ. ಅಂಕಿ-ಅಂಶಗಳ ಪ್ರಕಾರ, ಕನಿಷ್ಠ ಶೇ 8ರಷ್ಟು ನಗರ ಪ್ರದೇಶದ, 35 ರಇಂದ 39 ವರ್ಷ ವಯಸ್ಸಿನ ಭಾರತೀಯ ಮಹಿಳೆಯರು ಅವಧಿಪೂರ್ವ ಋತುಸ್ರಾವ ಸಮಸ್ಯೆಗೆ ಒಳಗಾಗುತ್ತಿದ್ದಾರೆ.

ಭಾರತದಲ್ಲಿ, ಸಾಮಾನ್ಯವಾಗಿ ಋತುಸ್ರಾವ ಸ್ಥಗಿತಗೊಳ್ಳುವ ವಯಸ್ಸು 51. ಅವಧಿಪೂರ್ವ ಋತುಸ್ರಾವ ಸ್ಥಗಿತಗೊಳ್ಳುವಿಕೆ ಮಹಿಳೆಯರಿಗೆ ಅನೇಕ ರೀತಿಯಲ್ಲಿ ಸಮಸ್ಯೆ ತಂದೊಡ್ಡಲಿದೆ. ಅದರಲ್ಲಿಯೂ 40 ರಿಂದ 50ನೇ ವರ್ಷದಲ್ಲಿ ಕಾಣುವ ಋತುಸ್ರಾವ ಸಮಸ್ಯೆಯು ಹೆಚ್ಚಲಿದೆ. ಬಿಸಿ ನವೆ, ಯೋನಿ ಒಣಗುವುದು ಕಂಡುಬರಲಿದ್ದು, ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ. ವೈದ್ಯಕೀಯ ಚಿಕಿತ್ಸೆ ನೆರವಿನಲ್ಲಿ ಋತುಸ್ರಾವವನ್ನು ಮುಂದೂಡಲು ಆಗುವುದಿಲ್ಲ. ಆದರೆ, ಸಮಸ್ಯೆಗೆ ತಕ್ಕ ಮಟ್ಟಿಗೆ ಪರಿಹಾರ ಕಂಡುಕೊಳ್ಳಬಹುದು’ ಎಂದು ಯಶವಂತಪುರದ ಕೊಲಂಬಿಯ ಏಷಿಯಾ ಆಸ್ಪತ್ರೆಯ ಗ್ಯಾನೆಕ್ ಲ್ಯಾಪರೋಸ್ಕೊಪಿಕ್ ಸರ್ಜನ್, ಕನ್ಸಲ್ಟಂಟ್ ಡಾ. ಶಫಾಲಿಕಾ ಎಸ್.ಬಿ ಹೇಳುತ್ತಾರೆ.

ದೇಹದಲ್ಲಿನ ಹಾರ್ಮೊನುಗಳ ಸಂಖ್ಯೆಯಲ್ಲಿ ಏರುಪೇರು ಆಗಲು ಒತ್ತಡ ಹೆಚ್ಚಿರುವುದು ಕಾರಣ.
ಇತರೆ ಅಂಶಗಳಲ್ಲಿ ಮಹಿಳೆಯ ಹಾರ್ಮೋನುಗಳ ಮಟ್ಟ ಏರುಪೇರು ಮಾಡುವ ಮಾನಸಿಕ ಒತ್ತಡವೂ ಕಾರಣ. ಅವಧಿಪೂರ್ವ ಋತುಸ್ರಾವ ಸ್ಥಗಿತ ಸಂದರ್ಭದಲ್ಲಿ ಮಹಿಳೆಯಲ್ಲಿ ಅಂಡಾಣು ಉತ್ಪಾದನೆ ಕಡಿಮೆ ಆಗಲಿದೆ. ಆಹಾರಪಥ್ಯದಲ್ಲಿನ ಏರುಪೇರು, ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸೇವನೆ, ಧೂಮಪಾನ ಇತ್ಯಾದಿ ಕಾರಣಗಳು ಕೂಡಾ ಸಮಸ್ಯೆಗೆ ಕಾರಣವಾಗಲಿದೆ ಎನ್ನುತ್ತಾರೆ ಡಾ.ಶಫಾಲಿಕಾ.

ಹಾರ್ಮೊನುಗಳ ಉತ್ಪಾದನೆಯಿಂದ ಹೃದಯ ಮತ್ತು ಮೂಳೆ ಇನ್ನಷ್ಟುದೃಢವಾಗಲು ಕಾರಣವಾಗಲಿದೆ. ಋತುಸ್ರಾವವು ಒಸ್ಟ್ರೆಜೊನ್ ಪ್ರಮಾಣವನ್ನು ಕುಗ್ಗಿಸಲಿದೆ, ದೇಹದ ಮೇಲೆ ಅಡ್ಡ ಪರಿಣಾಮ ಆಗದಂತೆ ತಡೆಯಲಿದೆ.  ಹಾರ್ಮೊನುಗಳ ಉತ್ಪಾದನೆ ಕಡಿಮೆಯಾದರೆ ಮೂಳೆ ಸವೆತ ಆಗಲಿದ್ದು, ಅವು ದುರ್ಬಲವಾಗಲಿವೆ.

ನಿಮ್ಮ ಕೈಯಲ್ಲಿಯೇ ಇದೆ ಪರಿಹಾರ:
ಇಂದಿನ ಯುವಜೋಡಿಗಳಿಗೆ ಅಂದರೆ ಕೌಟುಂಬಿಕ ಯೋಜನೆ ಚಿಂತಿಸುವ 30ರ  ಆಸುಪಾಸಿನಲ್ಲಿ ಇರುವ ಜೋಡಿಗಳಿಗೆ, ಇಂದು ಮಹಿಳೆ ತನ್ನ ಯುವವಯಸ್ಸಿನ ಅಂಡಾಣುಗಳನ್ನು ಪೋಷಿಸಿಡಬಹುದಾದ ತಂತ್ರಜ್ಞಾನಲಭ್ಯವಿದೆ. ಇದರಿಂದ ತದನಂತರ ಬರುವ ಸಮಸ್ಯೆಗಳನ್ನು ತಡೆಯಬಹುದು. ಈ ಅಂಡಾಣುಗಳನ್ನು ಐವಿಎಫ್ ಮೂಲಕ ಮಕ್ಕಳನ್ನು ಪಡೆಯಲು ಬಳಸಬಹುದು. ಈ ತಂತ್ರಜ್ಞಾನದ ಮೂಲಕ ಗುಣಮಟ್ಟದ ಅಂಡಾಣು ಸಿಗುವ ಕಾರಣ ಐವಿಎಫ್ ಯಶಸ್ಸಿಗೆ ಕಾರಣವಾಗಲಿದೆ.

‘ಅಂಡಾಣು ಕಾಯ್ದಿಡುವುದು, ಪಕ್ವಗೊಳ್ಳದ ಅಂಡಾಣುವನ್ನು ಕಾದಿಡುವುದು. ಸಾಧ್ಯ. ಕಾದಿಡಲಾದ ಅಂಡಾಣುವನ್ನು ಪ್ರಯೋಗಾಲಯದಲ್ಲಿ ವೀರ್ಯಾಣು ಜತೆಗೂಡಿಸಿ ಗರ್ಭದಲ್ಲಿ ಐವಿಎಫ್ ತಂತ್ರಜ್ಞಾನದ ಮೂಲಕ ಸೇರಿಸಬಹುದು” ಎನ್ನುತ್ತಾರೆ ಕೊಲಂಬಿಯ ಏಷಿಯಾ ಹಾಸ್ಪಿಟಲ್, ವೈಟ್‍ಫೀಲ್ಡ್‍ನ ಐವಿಎಫ್ ವಿಭಾಗದ ಮುಖ್ಯಸ್ಥೆ ಡಾ.ಸಪ್ನಾ ಅಹುಜಾ (ಬಾಲಾಜಿ) ಅವರು.

ಈ ಪ್ರಕ್ರಿಯೆ ಋತುಸ್ರಾವದ ಅವಧಿ ಆರಂಭವಾದ 10-14 ದಿನಗಳ ನಂತರ ಆಗಲಿದೆ. ಪ್ರತಿದಿನ ಹಾರ್ಮೊನ್ ಇಂಜೆಕ್ಷನ್ ನೀಡಲಾಗುತ್ತದೆ. ಅಂಡಾಣು ಸಂಗ್ರಹಿಸಲು ಆಗುವಂತೆ ಮಹಿಳೆ ಕೆಲವೊಂದು ಪ್ರಕ್ರಿಯೆಗೆ ಒಳಗಾಗಬೇಕು. ವಿಟ್ರಿಫಿಕೇಷನ್ ಹೆಸರಿನ ಹೊಸ ತಂತ್ರಜ್ಞಾನದಡಿ ಅಂಡಾಣುಗಳನ್ನು ತ್ವರಿತಗತಿಯಲ್ಲಿ ಶೀಥಲಿಕರಣ ಮಾಡಲು ಸಾಧ್ಯವಿದೆ’ ಎಂದು ಅವರು ಹೇಳುತ್ತಾರೆ.

ಅಧ್ಯಯನದ ಪ್ರಕಾರ, ಹೊಸ ತಂತ್ರಜ್ಞಾನದಡಿ ಕಾದಿಡಲಾದ ಅಂಡಾಣುವಿನಿಂದ ಗರ್ಭ ಧರಿಸುವ ಸಾಧ್ಯತೆಯು,  ಹೊಸ ಅಂಡಾಣುವಿನಿಂದ ಗರ್ಭಧರಿಸಿದಂತೆಯೇ ಇರುತ್ತದೆ.
ಅವಧಿಪೂರ್ವದಲ್ಲಿ ಋತುಸ್ರಾವ ಸಮಸ್ಯೆ ಕಾಡದಂತೆ ಗಮನಹರಿಸಲು ಸಲಹೆಗಳು:

- ಪಥ್ಯದಲ್ಲಿ ಸೋಯಾ ಸೇವೆಯನ್ನು ಹೆಚ್ಚು ಮಾಡಿ.
- ನಿಯಮಿತ ವ್ಯಾಯಾಮ ಇರಲಿ.
- ಕೆಲವು ನಿಮಿಷ ಯೋಗ, ಉಸಿರಾಟದ ಚಿಕಿತ್ಸೆಯನ್ನು ಮಾಡಿ, ಮನಸ್ಸನ್ನು ಒತ್ತಡದಿಂದ ದೂರವಿರಿಸಿ.
- ಮಾದಕವಸ್ತು, ಮದ್ಯಸೇವನೆ ಕಡಿಮೆ ಮಾಡಿ.
- ಆರೋಗ್ಯಕರ ತೂಕ ಇರುವಂತೆ ನೋಡಿಕೊಳ್ಳಿ.
- ಧೂಮಪಾನ ನಿಲ್ಲಿಸಿ.
- ಕಡಿಮೆ ಕೊಬ್ಬಿನ ಅಂಶದ, ಸಾವಯುವ ಡೈರಿ ಪದಾರ್ಥವನ್ನು ಸೇವಿಸಿ.
- ದೈನಿಕ ಆಹಾರಕ್ಕೆ ಮೀನು ಸೇವಿಸಿ. ಮೀನು ಸೇವನೆಯಿಂದ ಹಾರ್ಮೋನುಗಳ ಸಮತೋಲನ ಸಾಧ್ಯವಾಗಲಿದೆ.
- ಆ್ಯಂಟಿಆಕ್ಸಿಡೆಂಟ್ಸ್ ಅಂಶ ಹೆಚ್ಚಿರುವ ಅಂಶಗಳನ್ನು ಸೇವಿಸಿ.
- ಹೈಟೊಜೆನ್ಸ್ ಅಂಶ ಹೆಚ್ಚಿರುವ ಪದಾರ್ಥಗಳ ಸೇವನೆಗೆ ಹೆಚ್ಚಿನ ಒತ್ತು ನೀಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com