ಹೆಚ್ಚೆಚ್ಚು ನೀಲಿಚಿತ್ರ ನೋಡುವ ಜನ ಹೆಚ್ಚು ಧಾರ್ಮಿಕರಾಗುತ್ತಾರೆ: ಸಂಶೋಧನೆ

ವಾರದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ನೀಲಿಚಿತ್ರ ನೋಡುವುದರಿಂದ ನೀವು ಹೆಚ್ಚು ಧಾರ್ಮಿಕರಾಗುತ್ತೀರಿ ಎಂದು ಓಕ್ಲಹಾಮ ವಿಶ್ವ ವಿದ್ಯಾನಿಲಯದ ಹೊಸ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ವಾರದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ನೀಲಿಚಿತ್ರ ನೋಡುವುದರಿಂದ ನೀವು ಹೆಚ್ಚು ಧಾರ್ಮಿಕರಾಗುತ್ತೀರಿ ಎಂದು ಓಕ್ಲಹಾಮ ವಿಶ್ವ ವಿದ್ಯಾನಿಲಯದ ಹೊಸ ಸಂಶೋಧನೆ ತಿಳಿಸಿದೆ.

ನೀಲಿ ಚಿತ್ರಗಳ ವೀಕ್ಷಣೆ ಆಂತರಿಕ ವಿಚಾರವಾದ ಮತ್ತು ವ್ಯಕ್ತಿಯ ಧಾರ್ವಿಕತೆಗೆ ಧಕ್ಕೆ ಉಂಟು ಮಾಡುವುದರಿಂದ ಅವರಿಗೆ ತಮ್ಮೊಳಗೆ ತಪ್ಪು ಭಾವನೆ ಕಾಡುತ್ತದೆ. ಹೀಗಾಗಿ ಆ ತಪ್ಪನ್ನು ಕ್ಷಮಿಸಿಕೊಳ್ಳಲು ಧರ್ಮದ ಬಗ್ಗೆ ವಿಚಾರ ಮಾಡಲು ಮುಂದಾಗುತ್ತಾರೆ ಎಂದು ಪ್ರಸಿದ್ಧ ಸಂಶೋಧಕ ಸಾಮುಯೆಲ್ ಪೆರ್ರಿ ಹೇಳಿದ್ದಾರೆ.

ಒಮ್ಮೆ ನಿಮಗೆ ಧರ್ಮದ ಬಗ್ಗೆ ಒಲವು ಉಂಟಾದಾಗ ನೀಲಿ ಚಿತ್ರ ವೀಕ್ಷಣೆ ಕಡೆಗೆ ನೀವು ವಾಲುವುದನ್ನು ನಿಲ್ಲಿಸುತ್ತದೆ. ನಂತರ ನಿಮ್ಮ ಬದುಕಿನ ಆಯಾಮಗಳು ಬದಲಾವಣೆಗೊಂಡು ಧರ್ಮ ಜಾಗೃತಿ ಮೂಡುತ್ತದೆ ಎಂದು ಪೆರ್ರಿ ತಿಳಿಸಿದ್ದಾರೆ. 6 ವರ್ಷಗಳ ಕಾಲ ವಿವಿಧ ರಾಷ್ಟ್ರಗಳ ಹಲವು ಜನಾಂಗದ ಸುಮಾರು 1,314 ಜನರನ್ನು ಸಂಶೋಧನೆಗೆ ಒಳಪಡಿಸಿ ವರದಿ ಸಿದ್ದಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com