ಶಿಕ್ಷಣ ಸಂಸ್ಥೆಗಳಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು

ಇತ್ತೀಚಿನ ದಿನಗಳಲ್ಲಿ ಲೈಂಗಿಕ ಕಿರುಕುಳದ ಆರೋಪ ವಿದ್ಯಾ ಸಂಸ್ಥೆಗಳಲ್ಲೂ ವ್ಯಾಪಕವಾಗಿ ಕೇಳಿಬರುತ್ತಿದ್ದು, ಜಾದವ್ ಪುರ ವಿವಿ ಹಾಗೂ ಜವಹರ್ ಲಾಲ್ ನೆಹರೂ ವಿಶ್ವವಿದ್ಯಾನಿಯಲ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.
ಲೈಂಗಿಕ ಕಿರುಕುಳ (ಸಾಂಕೇತಿಕ ಚಿತ್ರ)
ಲೈಂಗಿಕ ಕಿರುಕುಳ (ಸಾಂಕೇತಿಕ ಚಿತ್ರ)

ಇತ್ತೀಚಿನ ದಿನಗಳಲ್ಲಿ ಲೈಂಗಿಕ ಕಿರುಕುಳದ ಆರೋಪ ವಿದ್ಯಾ ಸಂಸ್ಥೆಗಳಲ್ಲೂ ವ್ಯಾಪಕವಾಗಿ ಕೇಳಿಬರುತ್ತಿದ್ದು, ಜಾದವ್ ಪುರ ವಿವಿ ಹಾಗೂ ಜವಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.

ಪ್ರಸ್ತುತ ಇರುವ ಕಾನೂನುಗಳ ಹೊರತಾಗಿಯೂ ಇಂತಹ ಹೀನ ಕೃತ್ಯಗಳು ಹೆಚ್ಚುತ್ತಿದೆ. ಕ್ರಿಟ್ಯಾಕ್ಸ್ ಕಾರ್ಪ್(ಕ್ರಿಟಸ್ಕಾರ್ಪ್) ಕಾನೂನು ಸಂಸ್ಥೆಯ ಸಂಸ್ಥಾಪಕ ಕನಿಷ್ಕ್ ಅಗರ್ವಾಲ್ ಶಾಲಾ-ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ತಡೆಯಗಟ್ಟಲು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಶಾಲಾ-ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳು ನಡೆಯುವುದಕ್ಕೂ ಮುನ್ನವೇ ಅದನ್ನು ತಡೆಗಟ್ಟಬೇಕಿದ್ದು, ಇದಕ್ಕಾಗಿ ವಿದ್ಯಾರ್ಥಿನಿಯರು ಹಾಗೂ ಶಾಲಾ-ಕಾಲೇಜುಗಳ ಮಹಿಳಾ ಸಿಬ್ಬಂದಿಗಳಿಂದ ಶಾಲಾ-ಕಾಲೇಜುಗಳ ವಾತಾವರಣದ ಬಗ್ಗೆ ಪ್ರತಿಕ್ರಿಯೆ ಪಡೆಯುವಂತಹ ವ್ಯವಸ್ಥೆಯನ್ನು ರೂಪಿಸಬೇಕೆಂದು, ಜೊತೆಜೊತೆಗೆ ವಿದ್ಯಾರ್ಥಿಯರೊಂದಿಗೆ ಪೋಷಕರು ಮುಕ್ತ ಸಂವಹನ ನಡೆಸಬೇಕು ಎಂದು ಕನಿಷ್ಕ್ ಅಗರ್ವಾಲ್ ಸಲಹೆ ನೀಡಿದ್ದಾರೆ.

ಲೈಂಗಿಕ ಕಿರುಕುಳ, ಮಾನಹಾನಿಯ ಪ್ರಕರಣಗಳನ್ನು ಪರಿಶೀಲಿಸಲು ಪ್ರತಿ ವಿದ್ಯಾಸಂಸ್ಥೆಗಳಲ್ಲೂ ಆಂತರಿಕ ದೂರು ಸಮಿತಿಯನ್ನು ರಚಿಸಬೇಕು, ಅದರೊಂದಿಗೆ ಆಂತರಿಕ ನಿಗಾ ಸಮಿತಿ ರಚಿಸಬೇಕು ಹಾಗೂ ಸಮಿತಿ ಸದಸ್ಯರ ಅಧಿಕಾರ ದುರುಪಯೋಗವಾಗುವುದನ್ನು ತಡೆಗಟ್ಟಲು ಸಮಿತಿಯ ಸದಸ್ಯರ ಹೆಸರುಗಳನ್ನು ಗೌಪ್ಯವಾಗಿಡಬೇಕು ಹಾಗೂ ಸಮಿತಿ ನೀಡುವ ಶಿಫಾರಸುಗಳನ್ನು ವಿದ್ಯಾಸಂಸ್ಥೆಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಕನಿಷ್ಕ್ ಅಗರ್ವಾಲ್ ತಿಳಿಸಿದ್ದಾರೆ.

ಎರಡನೇಯದ್ದಾಗಿ ಶಿಕ್ಷಕರು ಅಥವಾ ಮೇಲ್ವಿಚಾರಕರು ಅಥವಾ ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳು ಪದೇ ಪದೇ ಕೇಳಿಬರುವ ಲೈಂಗಿಕ ವ್ಯಂಗ್ಯೋಕ್ತಿಗಳು, ಅಶ್ಲೀಲ ಜೋಕ್ ಗಳ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು, ಇದರಲ್ಲಿ ಯಾವುದೇ ವಿಳಂಬ ಉಂಟಾಗಬಾರದು ಎಂದು ಕನಿಷ್ಕ್ ಸಲಹೆ ನೀಡಿದ್ದಾರೆ.

ಇವೆಲ್ಲದರೊಂದಿಗೆ ವಿದ್ಯಾಸಂಸ್ಥೆಗಳ ಬೋಧಕ ವರ್ಗ, ಮಹಿಳಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ತರಗತಿಗಳಲ್ಲಿ ಲೈಂಗಿಕ ಕಿರುಕುಳ ಎದುರಿಸುತ್ತಿದ್ದಾರೆಯೇ ಎಂಬುದನ್ನು ತಿಳಿಯಲು ಅನೌಪಚಾರಿಕ ಮಾತುಕತೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕನಿಷ್ಕ್ ಅಗರ್ವಾಲ್ ಹೇಳಿದ್ದಾರೆ. ನಂತರದ ಕ್ರಮಗಳಲ್ಲಿ ವಿದ್ಯಾಸಂಸ್ಥೆಗಳಲ್ಲಿ ಕೌನ್ಸಲಿಂಗ್ ಸೆಷನ್ ಗಳನ್ನು ನಡೆಸುವುದು, ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವುದು, ಕಿರುಕುಳಕ್ಕೊಳಗಾದ, ನೊಂದ  ವಿದ್ಯಾರ್ಥಿನಿಯರ ಮನಸ್ಥಿತಿಯನ್ನು ಮಾರ್ಪಾಡು ಮಾಡುವುದರಲ್ಲಿ ಪೋಷಕರ ಪಾಲ್ಗೊಳ್ಳುವಿಕೆ ಇರುವಂತೆ ಗಮನ ಹರಿಸಬೇಕೆಂದು ಕನಿಷ್ಕ್ ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com