ಅನ್ಯರ ನೋವು-ನಲಿವುಗಳ ಬಗ್ಗೆ ನಮ್ಮ ಅಂದಾಜಿನ ನಿಖರತೆ ಕಡಿಮೆ!: ಸಂಶೋಧನಾ ವರದಿ

ಮತ್ತೊಬ್ಬರ ನೋವು- ನಲಿವುಗಳ ಬಗ್ಗೆ ನಮ್ಮ ಅಂದಾಜು ಅಥವಾ ಊಹೆಗಳು ಕಡಿಮೆ ನಿಖರತೆ ಹೊಂದಿರುತ್ತವೆಯಂತೆ. ಹೀಗೆಂದು ಹೇಳುತ್ತಿರುವುದು ಹಾರ್ವರ್ಡ್ ವಿಶ್ವವಿದ್ಯಾಲಯದ ಹೊಸ ಸಂಶೋಧನೆ.
ಅನ್ಯರ ನೋವು-ನಲಿವುಗಳ ಬಗ್ಗೆ ನಮ್ಮ ಅಂದಾಜಿನ ನಿಖರತೆ ಕಡಿಮೆ!
ಅನ್ಯರ ನೋವು-ನಲಿವುಗಳ ಬಗ್ಗೆ ನಮ್ಮ ಅಂದಾಜಿನ ನಿಖರತೆ ಕಡಿಮೆ!

ವಾಷಿಂಗ್ ಟನ್: ಮತ್ತೊಬ್ಬರ ನೋವು- ನಲಿವುಗಳ ಬಗ್ಗೆ ನಮ್ಮ ಅಂದಾಜು ಅಥವಾ ಊಹೆಗಳು  ಕಡಿಮೆ ನಿಖರತೆ ಹೊಂದಿರುತ್ತವೆಯಂತೆ. ಹೀಗೆಂದು ಹೇಳುತ್ತಿರುವುದು ಹಾರ್ವರ್ಡ್ ವಿಶ್ವವಿದ್ಯಾಲಯದ ಹೊಸ ಸಂಶೋಧನೆ.

ನೋವು-ನಲಿವುಗಳಷ್ಟೇ ಅಲ್ಲ, ಈ ನಮ್ಮ ಅಂದಾಜು, ಊಹೆಗಳು ಜನರು ಯಾವ ರಾಜಕೀಯ ಪಕ್ಷದ ಪರವಾಗಿ, ಯಾವ ಕ್ರೀಡಾ ತಂಡದ ಪರವಾಗಿದ್ದಾರೆ ಎಂಬ ವಿಷಯಗಳಲ್ಲಿಯೂ ಕಡಿಮೆ ನಿಖರತೆ ಹೊಂದಿರುತ್ತವೆ ಎಂಬುದನ್ನು  ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಕೊಂಡಿದ್ದಾರೆ.  
ನಮ್ಮ ಈ ರೀತಿಯ ಅಂದಾಜು ಅಥವಾ ಊಹೆಗಳು ನಾವು ಬೇರೆಯವರಿಗಾಗಿ ಕೈಗೊಳ್ಳುವ ನಿರ್ಧಾರಗಳಲ್ಲಿ ಪ್ರಮುಖ ಪರಿಣಾಮ ಬೀರಲಿದೆ. ಒಮ್ಮೊಮ್ಮೆ ವೈದ್ಯರು ರೋಗಿಗೆ ನೀಡಬೇಕಿರುವ ಅಥವಾ ಸೂಚಿಸುವ ಔಷಧದ ಪ್ರಮಾಣ, ಉದ್ಯೋಗ ನೀಡಿರುವವರು ತಮ್ಮ ನೌಕರರಿಗೆ ನೀಡುವ ಬೋನಸ್, ಮಾನವೀಯ ಬಿಕ್ಕಟ್ಟು ಎದುರಾದ ವೇಳೆ ಮಧ್ಯಪ್ರವೇಶ ಮಾಡಬೇಕಾದರೆ ರಾಜಕಾರಣಿಗಳು ಕೈಗೊಳ್ಳುವ ನಿರ್ಧಾರಗಳ ಹಿಂದೆಯೂ ಇದೇ ಊಹೆ, ಅಂದಾಜುಗಳು ಕೆಲಸ ಮಾಡುತ್ತವೆ. ಆದರೆ ಆ ಎಲ್ಲಾ ಊಹೆಗಳು, ಅಂದಾಜುಗಳು ಕಡಿಮೆ ನಿಖರತೆಯಿಂದ ಕೂಡಿರುತ್ತವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಈ ಸಂಶೋಧನೆಗಾಗಿ ಸಂಶೋಧಕರು 2014 ರ ಯುಎಸ್ ಸೆನೆಟ್ ನ ಮಧ್ಯಂತರ ಚುನಾವಣೆಯನ್ನು ಅಧ್ಯಯನ ವಿಷಯವಾಗಿ ಬಳಸಿಕೊಂಡಿದ್ದಾರೆ. ಸಂಶೋಧಕರು ಸುಮಾರು 859 ಜನರನ್ನು ಸಮೀಕ್ಷೆಗೆ ಒಳಪಡಿಸಿದ್ದು, ರಿಪಬ್ಲಿಕನ್ ಹಾಗೂ ಡೆಮಾಕ್ರೆಟಿಕ್ ಪಕ್ಷಗಳ ಪೈಕಿ ಯಾವ ಪಕ್ಷಕ್ಕೆ ಬೆಂಬಲಿಸುತ್ತಾರೆ ಎಂಬುದನ್ನು ಶೇಕಡಾವಾರು ತಿಳಿಸುವಂತೆ ಸೂಚಿಸಿದ್ದಾರೆ. ನಂತರ ತಾವು ಬೆಂಬಲಿಸುವ ಪಕ್ಷ ಗೆದ್ದರೆ ಅಥವಾ ಕಡಿಮೆ ಸ್ಥಾನಗಳಿಸಿದರೆ ಅದನ್ನು ರಿಪಬ್ಲಿಕನ್ ಪಕ್ಷದವರಾಗಿ ಅಥವಾ ಡೆಮಾಕ್ರೆಟಿಕ್ ಪಕ್ಷದವರಾಗಿ ಅಥವಾ ಓರ್ವ ಸಾಮಾನ್ಯ ವ್ಯಕ್ತಿಯಾಗಿ ಯಾವ ರೀತಿ ಪಕ್ಷದ ಅಭಿಪ್ರಾಯ ವ್ಯಕ್ತಪಡಿಸುತ್ತಿರಿ ಎಂದೂ ಕೇಳಲಾಗಿದೆ. ನಂತರ ಸೆನೆಟ್ ನಲ್ಲಿ ಸೋತವರು ಹಾಗೂ ಗೆದ್ದವರ( ಚುನಾವಣೆಯ ಅನುಭವ ಹೊಂದಿದವರು) ಅಭಿಪ್ರಾಯವನ್ನೂ ಸಂಗ್ರಹಿಸಲಾಗಿದೆ. ಸಂಶೋಧಕರು ಎರಡೂ ಅಭಿಪ್ರಾಯ, ಅಂದಾಜುಗಳನ್ನು ಸಂಗ್ರಹಿಸಿದ್ದು ಘಟನೆಯನ್ನು ಅನುಭವಿಸಿದ ವ್ಯಕ್ತಿಗಿಂತ ಅದೇ ವಿಷಯದ ಬಗ್ಗೆ ಬೇರೆ ವ್ಯಕ್ತಿಗಳ ಊಹೆ ಅಥವಾ ಅಂದಾಜು ನಿಖರತೆ ಕಡಿಮೆ ಹೊಂದಿರುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com