ಅಧಿಕ ಸಂಸ್ಕರಿತ ಮಾಂಸ ಸೇವೆನೆಯಿಂದ ಅಸ್ತಮಾ ಕಾಯಿಲೆ ಉಲ್ಬಣ: ಅಧ್ಯಯನ

ಸಂಸ್ಕರಿತ ಮಾಂಸಾಹಾರ ಪದಾರ್ಥಗಳ ಸೇವೆನೆಯಿಂದ ಅಸ್ತಮಾ ಕಾಯಿಲೆ ಹೆಚ್ಚುತ್ತದೆ ಎಂದು ಹೊಸ ಅಧ್ಯಯನವೊಂದು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಂಡನ್: ಸಂಸ್ಕರಿತ ಮಾಂಸಾಹಾರ ಪದಾರ್ಥಗಳ ಸೇವೆನೆಯಿಂದ ಅಸ್ತಮಾ ಕಾಯಿಲೆ ಹೆಚ್ಚುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಸಂಸ್ಕರಿತ ಮಾಂಸದಲ್ಲಿ ನೈಟ್ರೇಟ್ ಪ್ರಮಾಣ ಹೆಚ್ಚಿರುವುದರಿಂದ, ಅದನ್ನು ಸೇವಿಸುವುದರಿಂದ ಶ್ವಾಸನಾಳಗಳಲ್ಲಿ ಊರಿಯೂ ಸಮಸ್ಯೆ ಕಾಣಿಸಿಕೊಳ್ಳುತ್ತದೆ.ಇದು ಅಸ್ತಮಾ ರೋಗದ ಒಂದು ಲಕ್ಷಣವಾಗಿದೆ ಎಂದು ಅಧ್ಯಯನ ತಿಳಿಸಿದೆ.

ವಾರಪೂರ್ತಿ ಅಥವಾ ವಾರದಲ್ಲಿ ನಾಲ್ಕು ದಿನಕ್ಕಿಂತ ಹೆಚ್ಚಾಗಿ ಸಂಸ್ಕರಿತ ಮಾಂಸ ಸೇವಿಸುವುದರಿಂದ ಶೇ.76 ರಷ್ಟು ಅಸ್ತಮಾವನ್ನು ಹೆಚ್ಚಿಸುತ್ತವೆ, ಇದರಿಂದ ಉಸಿರಾಟ ಕಷ್ಟಗೊಂಡು, ಎದೆ ಬಿಗಿದ ಅನುಭವವಾಗಿ ಉಸಿರಾಟಕ್ಕೆ ತೊಂದರೆಯಾಗುತ್ತದೆ.

ಸಂಸ್ಕರಿತ ಮಾಂಸ ಸೇವನೆ ಶ್ವಾಸಕೋಶದ ಸಾಮರ್ಥ್ಯವನ್ನು ಕಡಿಮೆ ಗೊಳಿಸುತ್ತದೆ ಹಾಗೂ ಆರೋಗ್ಯಕ್ಕೂ ಹಾನಿಯುಂಟು ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

971 ಮಂದಿ ವಯಸ್ಕರ ಮೇಲೆ ಸಂಶೋಧಕರ ತಂಡ ಅಧ್ಯಯನ ನಡೆಸಿತು. ಅದರಲ್ಲಿ 46 ಆಹಾರ ಗುಂಪುಗಳನ್ನಾಗಿ ಮಾಡಿ 118 ಪದಾರ್ಥಗಳ ಸೇವನೆ ಬಗ್ಗೆ ಪ್ರಶ್ನಾವಳಿ ಕೇಳಲಾಯಿತು. ಇದರಲ್ಲಿ ವಾರಕ್ಕಿಂತ 4 ಬಾರಿಗೂ ಹೆಚ್ಚು ಸಂಸ್ಕರಿತ ಮಾಂಸಹಾರ ಸೇವಿಸಿದವರಲ್ಲಿ  ಬೊಜ್ಜು, ಅಧಿಕ ತೂಕ ಹಾಗೂ ಅಸ್ತಮಾ ಸಮಸ್ಯೆಗಳು ಹೆಚ್ಚಿರುವುದು ಅಧ್ಯಯನದಿಂದ ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com