ಚಳಿಗಾಲದಲ್ಲಿ ವ್ಯಾಯಾಮ ನಿಲ್ಲಿಸಿದರೇ ದೇಹದಲ್ಲಿ ಹೆಚ್ಚು ಕೊಬ್ಬು ಸಂಗ್ರಹ: ವೈದ್ಯರು

ಚಳಿಗಾಲದಲ್ಲಿ ದೈಹಿಕ ವ್ಯಾಯಾಮ ನಿಲ್ಲಿಸಿದರೇ ದೇಹದಲ್ಲಿ ಕೊಬ್ಬಿನ ಸಂಗ್ರಹ ಹೆಚ್ಚುತ್ತದೆ ಎಂದು ತಜ್ಞ ವೈದ್ಯರು ಅಭಿಪ್ರಾಯ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಚಳಿಗಾಲದಲ್ಲಿ ದೈಹಿಕ ವ್ಯಾಯಾಮ ನಿಲ್ಲಿಸಿದರೇ ದೇಹದಲ್ಲಿ ಕೊಬ್ಬಿನ ಸಂಗ್ರಹ ಹೆಚ್ಚುತ್ತದೆ ಎಂದು ತಜ್ಞ ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.

ಸೂರ್ಯನ ಕಿರಣಗಳಿಂದ ನಮ್ಮ ದೇಹಕ್ಕೆ ಸಿಗುವ ವಿಟಮಿನ್ ಡಿ ಪ್ರಮಾಣ ಚಳಿಗಾಲದಲ್ಲಿ ಕಡಿಮೆಯಾಗುವುದರಿಂದ  ಕೊಲೆಸ್ಟ್ರಾಲ್ ಸಂಗ್ರಹವಾಗಲು ಮತ್ತೊಂದು ಕಾರಣ ಎಂದು ಹೇಳಿದ್ದಾರೆ.

ಚಳಿಗಾಲದಲ್ಲಿ ಸೂರ್ಯನ ಪ್ರಕಾಶ ಕಡಿಮೆಯಿರುವುದರಿಂದ ದೇಹದಲ್ಲಿ ಹೆಚ್ಚು ಕೊಲೆಸ್ಟ್ರಾಲ್ ಶೇಖರವಾಗಲು ಇದು ಸಹಾಯವಾಗುತ್ತದೆ. ಋತುಮಾನಗಳ ವ್ಯತ್ಯಾಸದಿಂದಾಗಿ ಕೊಬ್ಬು ಹೆಚ್ಚು ಫ್ಯಾಟ್ಟಿ ಲಿವರ್  ಕಾರಣವಾಗುತ್ತದೆ.

ಚಳಿಗಾಲದಲ್ಲಿ ವ್ಯಾಯಾಮ  ನಿಲ್ಲಿಸುವುದರಿಂದ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತದೆ, ಇದರಿಂದ ಕೊಲೆಸ್ಟ್ರಾಲ್  ಹೆಚ್ಚಲು ಕಾರಣವಾಗುತ್ತದೆ ಎಂದು ಸರೋಜ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯ ರವೀಂದರ್ ಪಾಲ್ ಸಿಂಗ್ ತಿಳಿಸಿದ್ದಾರೆ.

ಮಧುಮೇಹ ಹಾಗೂ ಬೊಜ್ಜನ್ನು ದೂರ ಇಡಲು ಇರುವ ಮಾರ್ಗ ವ್ಯಾಯಾಮವೊಂದೇ, ವ್ಯಾಯಾಮ ಮಾಡುವುದರಿಂದ ಲಿವರ್ ಗೆ ಹಾನಿಯಾಗುವುದನ್ನು ತಪ್ಪಿಸಬಹುದು ಎಂದು ಅವರು ವಿವರಿಸಿದ್ದಾರೆ.

ಚಳಿಗಾಲದಲ್ಲಿ ಅತಿ ಹೆಚ್ಚು ಕೊಲೆಸ್ಟ್ರಾಲ್ ಸಂಗ್ರಹವಾಗುತ್ತದೆ ಹಾಗೆಯ್ ಬೇಸಿಗೆಯಲ್ಲಿ ಕೊಬ್ಬಿನ ಪ್ರಮಾಣ ಕಡಿಮೆಯಾಗುತ್ತದೆ. ಶೇ. 80 ರಷ್ಟು ಪ್ರಮಾಣದ ಜನರಿಗೆ ಚಳಿಗಾಲದಲ್ಲೇ ಬೊಜ್ಜು ಹಾಗೂ ಮಧುಮೇಹ ಗಳು ಹೆಚ್ಚುತ್ತವೆ. ಇದರಿಂದ ಲಿವರ್ ಸಂಬಂಧಿತ ರೋಗಗಳು ಉಂಟಾಗುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ.

ಚಳಿಗಾಲದಲ್ಲಿ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರ ಹಾಕಲು ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಸೇವನೆ ಮಾಡಬೇಕು, ಇದರಿಂದ ಲಿವರ್ ಸ್ವಚ್ಚ ವಾಗುತ್ತದೆ ಎಂದು ಬಿಎಲ್ ಕೆ ಸೂಪರ್ ಸ್ಪೆಷ್ಟಾಲಿಟಿ ಆಸ್ಪತ್ರೆ ತಜ್ಞ ವೈದ್ಯ ಸಂಜಯ್ ಸಿಂಗ್ ನೇಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com