ವಯಸ್ಸಾದ ರೋಗಿಗಳಿಗೆ ಮಹಿಳಾ ವೈದ್ಯರು ಚಿಕಿತ್ಸೆ ನೀಡಿದರೆ ಬದುಕುವ ಅವಕಾಶ ಹೆಚ್ಚು: ಅಧ್ಯಯನ

ವಯಸ್ಸಾದ ರೋಗಿಗಳಿಗೆ ಮಹಿಳಾ ವೈದ್ಯರು ಚಿಕಿತ್ಸೆ ನೀಡಿದರೆ ಬದುಕುವ ಅವಕಾಶ ಹೆಚ್ಚು ಎಂಬ ಅಚ್ಚರಿಯ ಸಂಗತಿಯೊಂದನ್ನು ಓರ್ವ ಭಾರತೀಯ ಮೂಲದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ವಯಸ್ಸಾದ ರೋಗಿಗಳಿಗೆ ಮಹಿಳಾ ವೈದ್ಯರು ಚಿಕಿತ್ಸೆ ನೀಡಿದರೆ ಬದುಕುವ ಅವಕಾಶ ಹೆಚ್ಚು ಎಂಬ ಅಚ್ಚರಿಯ ಸಂಗತಿಯೊಂದನ್ನು ಓರ್ವ ಭಾರತೀಯ ಮೂಲದ ಸಂಶೋಧಕ ಸೇರಿದಂತೆ ಹಾರ್ವಡ್ ವಿಶ್ವವಿದ್ಯಾಲಯದ ಸಂಶೋಧಕರು ಪತ್ತೆಹಚ್ಚಿದ್ದಾರೆ.
ವಯಸ್ಸಾದ ರೋಗಿಗಳಿಗೆ ಮಹಿಳಾ ತಜ್ಞ ವೈದ್ಯರು ಚಿಕಿತ್ಸೆ ನೀಡಿದರೆ ಆ ರೋಗಿ ಸುಮಾರು 30ದಿನದೊಳಗೆ ಸಾಯಿಯುವ ಸಾಧ್ಯತೆ ಕಡಿಮೆ ಮತ್ತು 30 ದಿನದೊಳಗೆ ಮತ್ತೆ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಕಡಿಮೆ ಎಂದು ಈ ಸಂಶೋಧಕರು ಹೇಳಿದ್ದಾರೆ.
ಪುರುಷ ಮತ್ತು ಮಹಿಳಾ ವೈದ್ಯರ ನಡುವಿನ ಚಿಕಿತ್ಸೆಯ ಮಾದರಿಗಳಲ್ಲಿ ಸಂಭಾವ್ಯ ವ್ಯತ್ಯಾಸಗಳು ಪ್ರಮುಖ ವೈದ್ಯಕೀಯ ಪರಿಣಾಮವನ್ನು ಉಂಟುಮಾಡಬಹುದಾಗಿದೆ ಎಂದು ಜಾಮಾ ಇಂಟರ್ನಲ್ ಮೆಡಿಸಿನ್ ಆನ್ ಲೈನ್ ನಲ್ಲಿ ಪ್ರಕಟವಾದ ಅಧ್ಯಯನ ವರದಿ ತಿಳಿಸಿದೆ.
ತಜ್ಞರ ತಂಡ 65 ವರ್ಷದ ಮೇಲ್ಪಟ್ಟ ಸುಮಾರು ಒಂದು ಮಿಲಿಯನ್ ರೋಗಿಗಳನ್ನು ಈ ಸಂಶೋಧನೆಗಾಗಿ ಸಂದರ್ಶಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com