ಚಿಯರ್ಸ್! ಆಲ್ಕೋಹಾಲ್ ದುಷ್ಪರಿಣಾಮಗಳನ್ನು ಕಡಿತಗೊಳಿಸುವ ಅಂಶ ಬಿಯರ್ ನಲ್ಲಿದೆ!

ಬಿಯರ್ ಅನ್ನು ಪ್ರೀತಿಸಿಸುವವರಿಗೆ ಸಂತಸದ ಸುದ್ದಿಯೊಂದಿಲ್ಲಿದೆ. ಬಿಯರ್ ನಲ್ಲಿರುವ ಹಾಪ್ಸ್ ಎಂಬ ಅಂಶ ಆಲ್ಕೋಹಾಲ್ ಲಿವರ್ ಮೇಲೆ ಬೀರುವ ದುಷ್ಪಾರಿಣಾಮಗಳನ್ನು ಕಡಿಮೆ ಮಾಡುತ್ತದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ಬಿಯರ್ ಅನ್ನು ಪ್ರೀತಿಸಿಸುವವರಿಗೆ ಸಂತಸದ ಸುದ್ದಿಯೊಂದಿಲ್ಲಿದೆ. ಬಿಯರ್ ನಲ್ಲಿರುವ ಹಾಪ್ಸ್ ಎಂಬ ಅಂಶ ಆಲ್ಕೋಹಾಲ್ ಲಿವರ್ ಮೇಲೆ ಬೀರುವ ದುಷ್ಪಾರಿಣಾಮಗಳನ್ನು ಕಡಿಮೆ ಮಾಡುತ್ತದೆ ಎಂದು ಪತ್ತೆ ಹಚ್ಚಿದ್ದಾರೆ ಸಂಶೋಧಕರು. 
ಹಾಪ್ಸ್ ಎಂಬ ಸಸ್ಯದ ಹೂಗಳಿಂದ ಉತ್ಪಾದಿಸುವ ಒಂದು ಅಂಶವನ್ನು ಬಿಯರ್ ಗೆ ಸ್ವಾದ ನೀಡಲು ಬಳಸಲಾಗುತ್ತದೆ. 
ಎಥನಾಲ್ ಗೆ ಹೋಲಿಸಿದರೆ ಬಿಯರ್ ಕುಡಿಯುವವರಿಗೆ ಲಿವರ್ ಮೇಲೆ ದುಷ್ಪರಿಣಾಮವನ್ನು ಹಾಪ್ಸ್ ಹೇಗೆ ತಗ್ಗಿಸುತ್ತದೆ ಎಂದು ಜರ್ಮನಿಯ ಫ್ರೀಡ್ ರಿಚ್ ವಿಶ್ವವಿದ್ಯಾಲಯದ ಸಂಶೋಧಕರು ಪತ್ತೆಹಚ್ಚಿದ್ದಾರೆ. 
"ಬಿಯರ್ ನಲ್ಲಿರುವ ಈ ಅಂಶ ಲಿವರ್ ಮೇಲೆ ಬೀರುವ ದುಷ್ಪರಿಣಾಮಗಳನ್ನು ಕಡಿತಗೊಳಿಸುವುದಕ್ಕೆ ಕನಿಷ್ಠ ಮಟ್ಟದಲ್ಲಿ ಸಹಕರಿಸುತ್ತದೆ" ಎಂದು ಸಂಶೋಧಕರು ತಿಳಿಸಿರುವುದಾಗಿ ಲಿವ್ ಸೈನ್ಸ್ ವರದಿ ಮಾಡಿದೆ. 
ಬೇರೆ ರೀತಿಯ ಮದ್ಯ ಬಿಯರ್ ಗಿಂತಲೂ ಹೆಚ್ಚು ಕೆಟ್ಟ ಪರಿಣಾಮ ಬೀರುತ್ತವೆ ಎನ್ನಲಾಗುತ್ತಿದ್ದಕ್ಕೆ ಈ ಸಂಶೋಧನೆ ವಿವರಣೆ ನೀಡಲು ಸಹಕರಿಸಿದೆ.  ಈ ಸಂಶೋಧನೆಯನ್ನು ಇಲಿಗಳ ಮೇಲೆ ಮಾಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com