ಜಿಕಾ ವೈರಸ್ ಏಶ್ಯದಾದ್ಯಂತ ಹರಡುವ ಸಾಧ್ಯತೆಯಿದೆ: ವಿಶ್ವ ಆರೋಗ್ಯ ಸಂಸ್ಥೆ

ಏಶ್ಯದಾದ್ಯಂತ ಜಿಕಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಮಂಗಳವಾರ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಎಚ್ ಒ) ಘೋಷಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಮನಿಲಾ: ಏಶ್ಯದಾದ್ಯಂತ ಜಿಕಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಮಂಗಳವಾರ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಎಚ್ ಒ) ಘೋಷಿಸಿದೆ.
ಈ ವೈರಸ್ ಅನ್ನು ನಿಯಂತ್ರಿಸುವ ಪರಿಣಾಮಕಾರಿ ಮಾರ್ಗಗಳ ಬಗೆಗೆ ತಜ್ಞರು ಇನ್ನು ತೊಡಗಿಸಿಕೊಂಡಿದ್ದಾರೆ ಎಂದು ಡಬ್ಲ್ಯೂ ಎಚ್ ಒ  ನಿರ್ದೇಶಕ ಮಾರ್ಗರೇಟ್ ಚಾನ್ ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ. 
"ದುರದೃಷ್ಟವಶಾತ್, ಹಲವು ಸಂದಿಗ್ಧ ಪ್ರಶ್ನೆಗಳಿಗೆ ವಿಜ್ಞಾನಿಗಳ ಬಳಿ ಉತ್ತರವಿಲ್ಲ" ಎಂದು ಕೂಡ ಫಿಲಿಪೈನ್ಸ್ ರಾಜಧಾನಿ ಮನಿಲಾದಲ್ಲಿ ನಡೆಯುತ್ತಿರುವ ಪ್ರಾದೇಶಿಕ ಡಬ್ಲ್ಯೂ ಎಚ್ ಒ ವಾರ್ಷಿಕ ಸಭೆಯಲ್ಲಿ ಅವರು ಹೇಳಿದ್ದಾರೆ. 
ಸಿಂಗಾಪುರದಲ್ಲಿ ಜಿಕಾ ವೈರಸ್ ಸೋಂಕು ತಗಲಿರುವ ನೂರಾರು ಪ್ರಕರಣಗಳು ದಾಖಲಾಗಿವೆ ಮತ್ತು ಥೈಲ್ಯಾಂಡ್ ನಲ್ಲಿ ಕೂಡ ಈ ವೈರಸ್ ಸಂಬಂಧಿತ ರೋಗದ ಎರಡು ಪ್ರಕರಣಗಳು ಕಾಣಿಸಿಕೊಂಡಿವೆ. 
ಜಿಕಾ ಸಾಮಾನ್ಯರಲ್ಲಿ ಸಾಧಾರಣ ದುಷ್ಪರಿಣಾಮ ಬೀರಿದರು, ಗರ್ಭಿಣಿ ಹೆಂಗಸರ ಮೇಲೆ ಅತಿ ಹೆಚ್ಚು ಕೆಟ್ಟ ಪರಿಣಾಮ ಬೀರುತ್ತದೆ. ಸೊಳ್ಳೆಯಿಂದ ಹರಡುವ ಈ ರೋಗ 70 ದೇಶಗಳಲ್ಲಿ ಕಾಣಿಸಿಕೊಂಡಿದೆ ಎನ್ನುತ್ತದೆ ಡಬ್ಲ್ಯೂ ಎಚ್ ಒ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com