ಊಟದ ನಂತರ ಸಣ್ಣ ನಡಿಗೆ ಡಯಾಬೆಟಿಸ್ ನಿಯಂತ್ರಣಕ್ಕೆ ಸಹಕಾರಿ: ಅಧ್ಯಯನ

ಊಟದ ನಂತರ ಅದರಲ್ಲೂ ಕಾರ್ಬೋಹೈಡ್ರೇಟ್ ಅಂಶ ಹೆಚ್ಚಿರುವ ಆಹಾರ ಸೇವಿಸಿದಾಗ ಸಣ್ಣ ನಡಿಗೆ ಟೈಪ್ 2 ಡಯಾಬೆಟಿಸ್ ಇರುವ ವ್ಯಕ್ತಿಗಳಲ್ಲಿನ ರಕ್ತದಲ್ಲಿ ಸಕ್ಕರೆ ಅಂಶವನ್ನು ತಗ್ಗಿಸಲು ಸಹಕರಿಸುತ್ತದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವೆಲ್ಲಿಂಗ್ಟನ್: ಊಟದ ನಂತರ ಅದರಲ್ಲೂ ಕಾರ್ಬೋಹೈಡ್ರೇಟ್ ಅಂಶ ಹೆಚ್ಚಿರುವ ಆಹಾರ ಸೇವಿಸಿದಾಗ ಸಣ್ಣ ನಡಿಗೆ ಟೈಪ್ 2 ಡಯಾಬೆಟಿಸ್ ಇರುವ ವ್ಯಕ್ತಿಗಳಲ್ಲಿನ ರಕ್ತದಲ್ಲಿ ಸಕ್ಕರೆ ಅಂಶವನ್ನು ತಗ್ಗಿಸಲು ಸಹಕರಿಸುತ್ತದೆ ಎಂದು ತಿಳಿಸಿದೆ ಅಧ್ಯಯನವೊಂದು. 
ದಿನದ ಬೇರೆ ಸಮಯದಲ್ಲಿ ನಡೆಯುವುದಕ್ಕೆ ಹೋಲಿಸಿದರೆ ಊಟದ ನಂತರ ನಡಿಗೆಯಲ್ಲಿ ತೊಡಗಿಸಿಕೊಂಡವರ ರಕ್ತದಲ್ಲಿ ಸಕ್ಕರೆ ಅಂಶ 12% ಕಡಿತವಾಗಿರುವುದನ್ನು ಈ ಅಧ್ಯಯನ ಪತ್ತೆಹಚ್ಚಿದೆ. 
"ಅದರಲ್ಲೂ ಕಾರ್ಬೋಹೈಡ್ರೇಟ್ ಹೆಚ್ಚಿರುವ ರಾತ್ರಿ ಊಟವಾದ ಮೇಲೆ ಹೆಚ್ಚು ಕೂತು ಸಮಯ ಕಳೆಯುವುದರ ಬದಲು ನಡಿಗೆಯಲ್ಲಿ ತೊಡಗಿಸಿಕೊಂಡರೆ ರಕ್ತದಲ್ಲಿನ ಸಕ್ಕರೆ ಅಂಶ 22% ವರೆಗೂ ಕಡಿತಗೊಳ್ಳುವುದನ್ನು ಗಮನಿಸಲಾಗಿದೆ" ಎಂದು ನ್ಯೂಜಿಲ್ಯಾಂಡ್ ನ ಒಟಾಗೊ ವಿಶ್ವವಿದ್ಯಾಲಯದ ಆಂಡ್ರ್ಯು ರೆನಾಲ್ಡ್ಸ್ ತಿಳಿಸಿದ್ದಾರೆ. 
ಈ ಅಧ್ಯಯನಕ್ಕಾಗಿ 41 ಟೈಪ್ 2 ಡಯಾಬೆಟಿಸ್ ರೋಗಿಗಳನ್ನು ತೊಡಗಿಸಿಕೊಂಡಿದ್ದಾರೆ. ಈ ಅಧ್ಯಯನದ ಫಲಿತಾಂಶವನ್ನು ಜರ್ನಲ್ ಡಯಾಬೆಟಾಲಾಜಿಯಾದಲ್ಲಿ ಪ್ರಕಟಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com