ಕಾಳುಗಳಿಂದ ಹೃದಯ ರೋಗದ ಅಪಾಯ ಕಡಿಮೆ: ಅಧ್ಯಯನ

ಅತಿಯಾದ ತೂಕ ಮತ್ತು ಬೊಜ್ಜಿನ ಕಾರಣದಿಂದಾಗಿ 50 ವರ್ಷಕ್ಕಿಂತ ಕೆಳಗಿನ ವಯಸ್ಕರಲ್ಲಿ ಹೃದಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ಅತಿಯಾದ ತೂಕ ಮತ್ತು ಬೊಜ್ಜಿನ ಕಾರಣದಿಂದಾಗಿ 50 ವರ್ಷಕ್ಕಿಂತ ಕೆಳಗಿನ ವಯಸ್ಕರಲ್ಲಿ ಹೃದಯ ಕಾಯಿಲೆ ಬರುವುದನ್ನು ಇಡಿ ಧಾನ್ಯಗಳ ಸೇವನೆಯಿಂದ ಕಡಿಮೆ ಮಾಡಬಹುದು ಎಂದು ಅಧ್ಯಯನವೊಂದು ತಿಳಿಸಿದೆ.
ನ್ಯೂಟ್ರಿಷನ್ ಎಂಬ ವೃತ್ತ ಪತ್ರಿಕೆಯಲ್ಲಿ ಈ ಅಧ್ಯಯನದ ವರದಿ ಪ್ರಕಟಗೊಂಡಿದ್ದು ಇಡಿ ಧಾನ್ಯಗಳ ಸೇವನೆ ರಕ್ತದೊತ್ತಡ ಕಡಿಮೆ ಮಾಡಿ ನಮ್ಮ ದೇಹಕ್ಕೆ ಪರಿಣಾಮಕಾರಿ ಪೌಷ್ಟಿಕಾಂಶ ಸಮತೋಲನ ನೀಡುವುದಲ್ಲದೆ ಹೃದಯ ಕಾಯಿಲೆಗೆ ಸಂಬಂಧಪಟ್ಟ ಕಾಯಿಲೆ ಮತ್ತು ಸಾವನ್ನು ನಿಯಂತ್ರಿಸುತ್ತದೆ. 
ಹೃದ್ರೋಗ ಮತ್ತು ಪಾರ್ಶ್ವವಾಯು ಸಾವಿಗೆ ಪ್ರಮುಖ ಕಾರಣವಾಗಿದೆ. ಇಡಿ ಧಾನ್ಯಗಳನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಹೃದಯ ಕಾಯಿಲೆಯನ್ನು ಕಡಿಮೆ ಮಾಡುತ್ತದೆ ಎನ್ನುತ್ತಾರೆ ಚಯಾಪಚಯ ಟ್ರಾನ್ಸ್ಲೇಷನ್ ರಿಸರ್ಚ್ ಸೆಂಟರ್ ನ ನಿರ್ದೇಶಕ ಜಾನ್ ಕಿರ್ ವಾನ್.
ಅಧ್ಯಯನದಲ್ಲಿ ಅತಿ ತೂಕ ಮತ್ತು ಬೊಜ್ಜು ಹೊಂದಿದ್ದ 33 ವಯಸ್ಕ ಜನರಿಗೆ ತಲಾ 8 ವಾರಗಳ ಕಾಲ ಕಾಳಿನ ಆಹಾರ ಮತ್ತು ಸಂಸ್ಕರಿಸಿದ ಧಾನ್ಯ ಆಹಾರ ತಿನ್ನುವಂತೆ ಸೂಚಿಸಲಾಗಿತ್ತು.
33 ಜನರನ್ನು ಎರಡು ಗುಂಪುಗಳನ್ನಾಗಿ ಮಾಡಲಾಗಿತ್ತು. ಎರಡೂ ಗುಂಪುಗಳಿಗೂ ಆಹಾರದ ಪ್ರಮಾಣ, ಡಯಟ್ ಮಾದರಿ ಒಂದೇ ರೀತಿ ಇತ್ತು. ಪ್ರತಿ ಡಯಟ್ ನ ಸಮಯ ಮುಗಿದ ನಂತರ ಭಾಗವಹಿಸಿದವರಿಗೆ ಒಂದು ಚಿಕಿತ್ಸಕ ಸಂಶೋಧನಾ ವ್ಯವಸ್ಥೆಯಲ್ಲಿ ಚಯಾಪಚಯ ಪರೀಕ್ಷೆಗೊಳಪಡುವಂತೆ ಹೇಳಲಾಗಿತ್ತು. ಅಧಿಕ ರಕ್ತದೊತ್ತಡ ಔಷಧಿ ತೆಗೆದುಕೊಳ್ಳುವವರಿಗೆ ಅಧ್ಯಯನಪೂರ್ತಿ ಔಷಧಿ ಬಳಕೆ ನಿರ್ವಹಿಸಲು ನಿರ್ದೇಶಿಸಲಾಗಿತ್ತು.
ಇಡಿ ಕಾಳು ಸೇವಿಸಿದವರಲ್ಲಿ, ಸಂಸ್ಕರಿಸಿದ ಧಾನ್ಯ ಸೇವಿಸಿದವರಿಗಿಂತ ರಕ್ತದೊತ್ತಡ ಪ್ರಮಾಣ ಮೂರು ಪಟ್ಟು ಕಡಿಮೆಯಾಗಿತ್ತು. ಆರೋಗ್ಯದಲ್ಲಿನ ಈ ಪ್ರಗತಿ ಹೃದ್ರೋಗ ಸಮಸ್ಯೆಯಿರುವವರ ಮೂವರಲ್ಲಿ ಒಬ್ಬರಿಗೆ ಇಳಿದಿದ್ದು ಪಾರ್ಶ್ವವಾಯು ಪೀಡಿತರಲ್ಲಿ 5ರಿಂದ ಇಬ್ಬರಿಗೆ ಇಳಿಮುಖವಾಗಿರುವುದು ಕಂಡುಬಂತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com