ಡಯಾಬೆಟಿಸ್ ಮುನ್ನೆಚ್ಚರಿಕೆ ನೀಡುವ ಸೆನ್ಸಾರ್ ಅಭಿವೃದ್ಧಿಪಡಿಸುತ್ತಿರುವ ಆಪಲ್

ಖ್ಯಾತ ತಂತ್ರಜ್ಞಾನ ಸಂಸ್ಥೆ ಆಪಲ್, ರಕ್ತದಲ್ಲಿನ ಸಕ್ಕರೆ ಅಂಶಗಳನ್ನು ಯಾವುದೇ ಸೂಜಿ ಚುಚ್ಚದೆ ಕಂಡುಕೊಳ್ಳುವ ಸೆನ್ಸಾರ್ ಅಭಿವೃದ್ಧಿಪಡಿಸುವತ್ತ ಮುಂದುವರೆದಿದ್ದು, ಒಂದು ಗೌಪ್ಯ ಬಯೋಮೆಡಿಕಲ್
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ಖ್ಯಾತ ತಂತ್ರಜ್ಞಾನ ಸಂಸ್ಥೆ ಆಪಲ್, ರಕ್ತದಲ್ಲಿನ ಸಕ್ಕರೆ ಅಂಶಗಳನ್ನು ಯಾವುದೇ ಸೂಜಿ ಚುಚ್ಚದೆ ಕಂಡುಕೊಳ್ಳುವ ಸೆನ್ಸಾರ್ ಅಭಿವೃದ್ಧಿಪಡಿಸುವತ್ತ ಮುಂದುವರೆದಿದ್ದು, ಒಂದು ಗೌಪ್ಯ ಬಯೋಮೆಡಿಕಲ್ ಎಂಜಿನಿಯರ್ ಗಳ ತಂಡ ಸಂಶೋಧನೆ ನಡೆಸಿದೆ. 
ಬುಧವಾರ ಸಿ ಎನ್ ಬಿ ಸಿ ವರದಿ ಮಾಡಿರುವಂತೆ, ಆಪಲ್ ನ ಮುಖ್ಯ ಕಚೇರಿಯಿಂದ ಸಾಕಷ್ಟು ದೂರದಲ್ಲಿರುವ ಕಚೇರಿಯಲ್ಲಿ ಈ ಸಂಶೋಧನೆ ಜಾರಿಯಲ್ಲಿದೆ. ಆಪಲ್ ಸಂಸ್ಥೆಯ ಸಹ ಸಂಸ್ಥಾಪಕ ದಿವಂಗತ ಸ್ಟೀವ್ ಜಾಬ್ ಅವರ ಕಲ್ಪನೆಯ ಯೋಜನೆ ಇದಾಗಿತ್ತು ಎಂದು ಕೂಡ ತಿಳಿಯಲಾಗಿದೆ. 
ಇಂತಹ ಸೆನ್ಸಾರ್ ಗಳು ಯಶಸ್ವಿಯಾಗಿ ಅಭಿವೃದ್ಧಿಯಾದರೆ ಇದು ಅತಿ ದೊಡ್ಡ ಸಂಶೋಧನೆಯಾಗಿ ಹೊರಹೊಮ್ಮಲಿದೆ ಏಕೆಂದರೆ ಸದ್ಯಕ್ಕೆ ಸೂಜಿ ಚುಚ್ಚಿಕೊಳ್ಳದೆ ಗ್ಲೂಕೋಸ್ ಅಂಶವನ್ನು ಪತ್ತೆ ಹಚ್ಚುವುದು ಸಾಧ್ಯವಿಲ್ಲ. 
ಚರ್ಮದ ಒಳಗೆ ಆಪ್ಟಿಕಲ್ ಸೆನ್ಸಾರ್ ಗಳ ಮೂಲಕ ಬೆಳಕನ್ನು ಕಳುಹಿಸಿ ಗ್ಲುಕೋಸ್ ಅಂಶವನ್ನು ಪತ್ತೆ ಹೆಚ್ಚುವ ತಂತ್ರಜ್ಞಾನ ಆಪಲ್ ಅಭಿವೃದ್ಧಿಪಡಿಸಿದರೆ ಇದು ವೈದ್ಯಲೋಕದಲ್ಲಿ ಕ್ರಾಂತಿಕಾರಿ ಬೆಳವಣಿಗೆಯಾಗಲಿದೆ ಎನ್ನಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com