ಚುಂಬನದಿಂದ ಝೀಕಾ ವೈರಸ್ ಹರಡುವುದಿಲ್ಲ!

ಚುಂಬಿಸುವುದರಿಂದ ಅಥವಾ ಆತ್ಮೀಯರು ಬಳಿಸಿದ ಚಮಚದಿಂದ ತಿಂದರೆ ಝೀಕಾ ವೈರಸ್ ಹರಡುವುದಿಲ್ಲ ಎಂಬ ವಿಷಯವನ್ನು ಸಂಶೋಧಕರು ಪತ್ತೆ ಹಚ್ಚಿಸಿದ್ದಾರೆ...
ಝೀಕಾ ವೈರಸ್ ಗೆ ತುತ್ತಾಗಿರುವ ಮಗು
ಝೀಕಾ ವೈರಸ್ ಗೆ ತುತ್ತಾಗಿರುವ ಮಗು
ವಾಷಿಂಗ್ಟನ್: ಚುಂಬಿಸುವುದರಿಂದ ಅಥವಾ ಆತ್ಮೀಯರು ಬಳಿಸಿದ ಚಮಚದಿಂದ ತಿಂದರೆ ಝೀಕಾ ವೈರಸ್ ಹರಡುವುದಿಲ್ಲ ಎಂಬ ವಿಷಯವನ್ನು ಸಂಶೋಧಕರು ಪತ್ತೆ ಹಚ್ಚಿಸಿದ್ದಾರೆ. 
ಝೀಕಾ ವೈರಸ್ ರೋಗದಿಂದ ಬಳಲುತ್ತಿರುವ ರೋಗಿಯ ದೇಹವನ್ನು ಕಚ್ಚಿದ ಸೊಳ್ಳೆಗಳು ಕಚ್ಚುವುದರಿಂದ ಮಾತ್ರ ಝೀಕಾ ವೈರಸ್ ರೋಗ ಹರಡುತ್ತದೆ. ಅದೇ ರೀತಿ ಡೆಂಗ್ಯೂ ಮತ್ತು ಚಿಕನ್ ಗುನ್ಯ ವೈರಸ್ ಹರಡಲು ಸೊಳ್ಳೆಗಳೇ ಕಾರಣ ಎಂದು ಸಂಶೋಧಕರು ಹೇಳಿದ್ದಾರೆ. 
ಸೋಂಕಿನ ನಂತರ, ಝೀಕಾ ವೈರಸ್ ಸುಮಾರು ಎರಡು ವಾರಗಳವರೆಗೆ ರಕ್ತ ಮತ್ತು ಎಂಜಲಿನಲ್ಲಿ ಕಂಡುಬರುತ್ತದೆ, ಆದರೆ ಇದು ವಾರಗಳ ಕಾಲ ಸ್ತನದ ಹಾಲಿನಲ್ಲಿ ಮತ್ತು ತಿಂಗಳುಗಳ ಕಾಲ ವೀರ್ಯಗಳಲ್ಲಿ ಉಳಿದಿರುತ್ತದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಲೈಂಗಿಕ ಸಂಭೋಗ ನಡೆಸಿದರು ಝೀಕಾ ವೈರಸ್ ಹರಡುವ ಸಾಧ್ಯತೆಗಳು ಹೆಚ್ಚಿವೆ. 
ಅಮೆರಿಕ ಮ್ಯಾಡಿಸನ್ ನ ವಿಸ್ಕಾನ್ಸಿನ್ ಯುನಿವರ್ಸಿಟಿಯ ಸಂಶೋಧಕರು ಝೀಕಾ ವೈರಸ್ ಹರಡುವಿಕೆಯ ಬಗ್ಗೆ ದೀರ್ಘಾ ಸಂಶೋಧನೆ ನಡೆಸಿದ್ದು ಈ ಸಂಶೋಧನೆಯಲ್ಲಿ ಮಹತ್ತರ ವಿಚಾರಗಳು ಬೆಳಕಿಗೆ ಬಂದಿವೆ. 
ಇದಕ್ಕಾಗಿ ಸಂಶೋಧಕರು ಝೀಕಾ ವೈರಸ್ ರೋಗಕ್ಕೆ ತುತ್ತಾಗಿರುವ ಕೋತಿಗಳ ಎಂಜಲನ್ನು ಶೇಖರಿಸಿ, ಐದು ಕೋತಿಗಳ ಮೇಲೆ ಪ್ರಯೋಗ ಮಾಡಲಾಯಿತು. ಈ ಸಂಶೋಧನೆ ನಡೆಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com