ಋತುಮಾನದ ಹಣ್ಣು, ತರಕಾರಿ ಸೇವನೆಯಿಂದ ಕ್ಯಾನ್ಸರ್, ಕರುಳಿನ ತೊಂದರೆ ತಡೆಗಟ್ಟುವಿಕೆ: ಅಧ್ಯಯನ

ವರ್ಷವಿಡೀ ದೊರಕುವ ಸಂಗ್ರಹಿಸಿದ ಮತ್ತು ಸಂಸ್ಕರಿಸಿದ ಆಹಾರಗಳನ್ನು ತಿನ್ನುವುದಕ್ಕಿಂತ ಆಯಾ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ವಾಷಿಂಗ್ಟನ್: ವರ್ಷವಿಡೀ ದೊರಕುವ ಸಂಗ್ರಹಿಸಿದ ಮತ್ತು ಸಂಸ್ಕರಿಸಿದ ಆಹಾರಗಳನ್ನು ತಿನ್ನುವುದಕ್ಕಿಂತ ಆಯಾ ಋತುಗಳಲ್ಲಿ ಸಿಗುವ ಹಣ್ಣು-ತರಕಾರಿಗಳನ್ನು ತಿನ್ನುವುದು ಉತ್ತಮ. ಇದರಿಂದ ನಿಮ್ಮ ಆರೋಗ್ಯ ಹೆಚ್ಚುವುದಲ್ಲದೆ ಕರುಳಿನ ಕಾಯಿಲೆ ಮತ್ತು ದೊಡ್ಡ ಕರುಳಿನ ಕ್ಯಾನ್ಸರ್ ನ್ನು ತಡೆಗಟ್ಟಬಹುದು ಎಂದು ಅಧ್ಯಯನವೊಂದು ಹೇಳುತ್ತದೆ.
ಸಂಶೋಧನೆ ಪ್ರಕಾರ, ಆಫ್ರಿಕಾ ದೇಶದ ಸ್ಥಳೀಯ ಜನರಲ್ಲಿ ಕರುಳಿನ ಬ್ಯಾಕ್ಟೀರಿಯಾ ಇತರ ದೇಶಗಳ ಜನರಿಗಿಂತ ಶೇಕಡಾ 30ರಷ್ಟು ಹೆಚ್ಚಾಗಿದೆ.ಕರುಳಿನ ಬ್ಯಾಕ್ಟೀರಿಯಾದ ವೈವಿಧ್ಯತೆಯು ಪ್ರತಿರಕ್ಷಣಾ ವ್ಯವಸ್ಥೆಯ ಪರಿಣಾಮವನ್ನು ಹೆಚ್ಚಿಸುತ್ತದೆ. 
ಕ್ಯಾಲಿಫೋರ್ನಿಯಾದ ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದ ವೈದ್ಯಕೀಯ ಶಾಲೆಯ ಅಧ್ಯಯನಕಾರರ ತಂಡವೊಂದು ಸವನ್ನಾದಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರನ್ನು ಅಧ್ಯಯನ ಮಾಡಿದೆ. ಇವರನ್ನು ಹಡ್ಜಾ ಎಂದು ಕರೆಯಲಾಗುತ್ತಿದ್ದು 188 ಮಂದಿಯ ಮಲ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಇವರೆಲ್ಲಾ 8ರಿಂದ 70 ವರ್ಷದೊಳಗಿನವರಾಗಿದ್ದಾರೆ.
ಇವರ ಮಲವನ್ನು ಇಟೆಲಿಯನ್ನರ ಮಲದೊಂದಿಗೆ ತುಲನೆ ಮಾಡಿ ನೋಡಿದಾಗ ಅದು ಸಹಜವಾಗಿತ್ತು. ಹಡ್ಜಾ ಜನರ ಆಹಾರ ತಿನ್ನುವ ಕ್ರಮ ವ್ಯತ್ಯಾಸವಾಗಿತ್ತು. ಇವರ ಡಯಟ್ ನಲ್ಲಿ ಮಾಂಸ, ಬೆರ್ರಿ, ಹಣ್ಣು,  ಗಡ್ಡೆ ಮತ್ತು ಜೇನುಗಳಿದ್ದವು. ಈ ಅಧ್ಯಯನ ಸೈನ್ಸ್ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com