ಸಾಧ್ಯವಾದಷ್ಟೂ ಜೆನೆರಿಕ್ ಅಥವಾ ಎನ್ಎಲ್ಇಎಂ ನ ಪಟ್ಟಿಯಲ್ಲಿರುವ ಔಷಧಗಳನ್ನು ನೀಡುವಂತೆ ಮೆಡಿಕಲ್ ಅಸೋಸಿಯೇಷನ್ ವೈದ್ಯರಿಗೆ ಸೂಚನೆ ನೀಡಿದೆ ಎಂದು ಐಎಂಎ ಅಧ್ಯಕ್ಷ ಡಾ.ಕೆ.ಕೆ ಅಗರ್ವಾಲ್ ಹೇಳಿದ್ದಾರೆ. " ದುಬಾರಿ ಬೆಲೆಯ ಔಷಧಗಳನ್ನು ಶಿಫಾರಸ್ಸು ಮಾಡುವುದಕ್ಕೆ ನಮ್ಮನ್ನು ದೂಷಿಸಲಾಗುತ್ತದೆ. ಆದ್ದರಿಂದ ಒನ್ ಡ್ರಗ್, ಒನ್ ಕಂಪನಿ, ಒನ್ ಪ್ರೈಸ್ ಪಾಲಿಸಿಗಾಗಿ ಸುಗ್ರೀವಾಜ್ಞೆ ಹೊರಡಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಅಗರ್ವಾಲ್ ಹೇಳಿದ್ದಾರೆ.