ನೈಸರ್ಗಿಕ ಆಹಾರೋತ್ಪನ್ನಗಳನ್ನು ಬಳಸಿ ಚಳಿಗಾಲದಲ್ಲಿ ಆರೋಗ್ಯ ರಕ್ಷಿಸಿಕೊಳ್ಳಿ

ನೀವು ಸರಿಯಾದ ಪೌಷ್ಟಿಕ ಆಹಾರವನ್ನು ಸೇವಿಸದೆ ಹೋದಲ್ಲಿ ಚಳಿಗಾಲದ ಈ ದಿನಗಳಲ್ಲಿ ನಿಮ್ಮ ದೇಹಾರೋಗ್ಯ ಕೆಡಬಹುದು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ನೀವು ಸರಿಯಾದ ಪೌಷ್ಟಿಕ ಆಹಾರವನ್ನು ಸೇವಿಸದೆ ಹೋದಲ್ಲಿ ಚಳಿಗಾಲದ ಈ ದಿನಗಳಲ್ಲಿ ನಿಮ್ಮ ದೇಹಾರೋಗ್ಯ ಕೆಡಬಹುದು. ನಿಮ್ಮ ದೇಹಕ್ಕೆ ಚಳಿಯ ವಾತಾವರಣವನ್ನು ತಡೆದುಕೊಳ್ಳಲು ಸಾಕಷ್ಟು ಶಕ್ತಿ ಅಗತ್ಯವಾಗಿದ್ದು ನೀವು ಸಮತೋಲಿತ, ಪೌಷ್ಟಿಕ ಆಹಾರ ತೆಗೆದುಕೊಳ್ಳುತ್ತಿದ್ದೀರೆನ್ನುವುದನ್ನು ಖಚಿತ ಪಡಿಸಿಕೊಳ್ಳಿ.
ನೈಸರ್ಗಿಕ ಚಿಕಿತ್ಸಾ ತಜ್ಞ ನೂರುಲ್ ಅಮೀನ್, ಆಯುರ್ವೇದ ವೈದ್ಯ ರಘುಬನಂಶ್ ಸಿಂಗ್ ಅವರು ಆರೋಗ್ಯವಾಗಿ ಉಳಿಯಲು ಮತ್ತು ಚಳಿಗಾಲವನ್ನು ಆನಂದಿಸಲು ಇಲ್ಲಿ ನಿಮಗಾಗಿ ಕೆಲವು ಟಿಪ್ಸ್ ಗಳನ್ನು ನಿಡಿದ್ದಾರೆ-
  • ನೈಸರ್ಗಿಕ ಜೇನು ಕೇವಲ ನಿಮ್ಮ ಬಾಯಿಯ ರುಚಿಯನ್ನಷ್ಟೇ ತೃಪ್ತಿಪಡಿಸುವುದಿಲ್ಲ. ಬದಲಾಗಿ ಚಳಿಗಾಲದಲ್ಲಿ ಬರಬಹುದಾದ ಹಲವು ಬಗೆಯ ಅಲರ್ಜಿಗಳನ್ನು ನಿವಾರಿಸುತ್ತದೆ. ಅದರಲ್ಲಿನ ಖನಿಜಾಂಶ, ಪ್ರೊಟೀನ್ ಗಳಿಂದ ಚಳಿಗಾಲಕ್ಕೆ ದೇಹಕ್ಕಿರಬೇಕಾಅದ ಶಕ್ತಿಯನ್ನು ಒದಗಿಸಲು ನೆರವಾಗುತ್ತದೆ.
  • ಆಪಲ್ ಸೈಡರ್ ವಿನೆಗರ್ ಸೌಂದರ್ಯ ಮತ್ತು ದೇಹಾರೋಗ್ಯ ಕಾಪಾಡುವಲ್ಲಿ ಮಹತ್ವದ ಕೆಲಸ ಮಾಡುತ್ತದೆ. ಚಳಿಗಾಲದಲ್ಲಿ ನಿಮ್ಮ ಸೈನಸ್ ಸಮಸ್ಯೆಗಳನ್ನು ಸರಾಗಗೊಳಿಸುವ ಗುಣಲಕ್ಷಣಗಳನ್ನು ಇದು ಹೊಂದಿದೆ, ಚಳಿಗಾಲದ ದಿನದಲ್ಲಿ ಉಂತಾಗುವ ಒತ್ತಡದಲ್ಲಿ ನಿಮ್ಮಒನ ಕೂದಲಿಗೆ ಈ ದ್ರವ ಹೊಳಪು ಕೊಡುತ್ತದೆ ಮತ್ತು ಬೆಳಿಗ್ಗೆ ನೀವು ಇದನ್ನು ನೀರಿನೊಡನೆ ತೆಗೆದುಕೊಂಡರೆ ಚರ್ಮದ ಹೊಳಪನ್ನು ಹೆಚ್ಚಿಸಬಹುದು.
  • ಚಳಿಯ ದಿನಗಳಲ್ಲಿ ತುಳಸಿ ಟೀ (ಚಹಾ)ಸೇವನೆ ಅತ್ಯಂತ ಉತ್ತಮವಾಗಿದ್ದು ಅಸ್ತಮಾ ಹಾಗು ಇನ್ನಿತರೆ ಉಸಿರಾಟದ ತೊಂದರೆ ಜತೆಗೆ ಜ್ವರವನ್ನು ಕಡಿಮೆಗೊಳಿಸುತ್ತದೆ. ನೈಸರ್ಗಿಕವಾಗ ಗ್ರೀನ್ ಟೀ ಸೇವನೆ ಚಳಿಗಾಲದ ದೇಹಾರೋಗ್ಯ ಕಾಪಾಡಲು ಅತ್ಯಂತ ಉತ್ತಮ ಮಾರ್ಗವಾಗಿದೆ.
  • ಚಳಿಗಾಲದ ತಿಂಗಳುಗಳಲ್ಲಿ ತಂಪಾದ ಗಾಳಿ ಮತ್ತು ನಿರ್ಜಲೀಕರಣದಿಂದ ಚರ್ಮ ಒಣಗುತ್ತದೆ ಇದು ಬಹುತೇಕರು ಎದುರಿಸುತ್ತಿರುವ ಮತ್ತೊಂದು ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆ ನೈಸರ್ಗಿಕ ತೆಂಗಿನ ಎಣ್ಣೆ ಅತ್ಯುತ್ತಮ ಔಷಧಿಯಾಗಿದೆ. ತೆಂಗಿನ ಎಣ್ಣೆಯನ್ನು ಮೈ ಕೈ ಗಳಿಗೆ ಹಚ್ಚಿಕೊಂದಾಗ  ಚರ್ಮದ ತ್ವಚೆಯನ್ನು ತೇವಗೊಳಿಸುತ್ತದೆ, ಚರ್ಮ ಶುಷ್ಕ ಆಗುವುದನ್ನು ತಡೆಯುತ್ತದೆ ಮತ್ತು ಚರ್ಮದ ಸಂಯೋಜಕ ಅಂಗಾಂಶವನ್ನು ಬಲಗೊಳಿಸುತ್ತದೆ.
  • ನಿಮ್ಮ ಆಹಾರದಲ್ಲಿ ಸಾವಯವ ತುಪ್ಪವನ್ನು ನಿಯಮಿತವಾಗಿ ಬಳಸುವುದರಿಂದ ನಿಮ್ಮ ದೇಹವನ್ನು ಬೆಚ್ಚಗಿಡಲು ಸಾದ್ಯವಾಗುತ್ತದೆ.ತುಪ್ಪವೂ ಸಹ ಚಳಿಗಾಲದಲ್ಲಿನ ತ್ವಚೆಯ ಶುಷ್ಕತೆಯನ್ನು ತಡೆಯುವಲ್ಲಿ ಸಹಕಾರಿಯಾಗಿದೆ.
  • ಪ್ರತಿನಿತ್ಯವೂ ಸ್ನಾನಕ್ಕೂ ಮೊದಲು ದೆಹಕ್ಕೆ ಎಣ್ಣೆ ಹಚ್ಚಿಕೊಲ್ಳುವುದು, ಆ ನಂತರ ಸ್ನಾನ ಮಾಡುವುದರಿಂದ ದೇಹದ ಚರ್ಮದ ಕಾಂತಿ ಹೆಚ್ಚುವುದು, ಜತೆಗೆ ದೇಹಾರೋಗ್ಯವೂ ಸುಧಾರಿಸಲಿದೆ.
  • ಹಾಗೆಯೇ ಪ್ರತಿನಿತ್ಯ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು. ನೀರು ಅತಿಯಾಗಿ ತಣ್ಣಗಿರಬಾರದು. ಸಾಮಾನ್ಯ ವಾತಾವರಣಕ್ಕೆ ಹೊಂಡುವಂತಹಾ ನೀರನ್ನು ಕುಡಿಯುತ್ತಿದ್ದು  ಅಗಸೆ ಬೀಜಗಳು; ಸೂರ್ಯಕಾಂತಿ, ಕುಂಬಳಕಾಯಿ ಬೀಜಗಳು; ಆಲಿವ್ ಎಣ್ಣೆ; ತುಪ್ಪ; ಮತ್ತು ಹಸಿರು ತರಕಾರಿಗಳು, ಸೊಪ್ಪಿನ ಸೇವನೆ ಮಾಡಬೇಕು
  • ಇನ್ನು ಅಮ್ಲಾ, ಅಲೋವೆರಾ, ಶುಂಠಿ, ಮಂಜೀಷ್ಠ, ಅನಂತಮೂಲ್, ನಂತಹ ಗಿಡಮೂಲಿಕೆಗಳನ್ನು ಬಳಸಿ, ಇದು ಸೌಮ್ಯವಾದ ಗುಣಗಳನ್ನು ಹೊಂದಿರುತ್ತದೆ ಮತ್ತು ಆರೋಗ್ಯದ ವಿಚಾರದಲ್ಲಿ ಪರಿಪೂರ್ಣವಾದ ಆರ್ಧ್ರಕ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com