ಈ ಬಿರು ಬೇಸಿಗೆಯಲ್ಲಿ ತಂಪಾಗಿರಿ; ಇವುಗಳನ್ನು ನಿಮ್ಮ ಪಥ್ಯದಲ್ಲಿ ಯಥೇಚ್ಛವಾಗಿ ಬಳಸಿ

ಧಗೆ ಬಿಸಿಲು ಧುತ್ತೆಂದು ಆಗಮಿಸಿರುವ ಈ ಸಮಯದಲ್ಲಿ ಉಣ್ಣೆ ಬಟ್ಟೆಗಳನ್ನು ಮಡಚಿಟ್ಟು ತಂಪು ಪ್ರದೇಶಗಳಿಗೆ ಹಾತೊರೆಯುತ್ತಿರುವ ನೀವು ಇನ್ನು ಮುಂದೆ ಜೊತೆಗೆ ಒಂದು ಲೋಟ ಹೆಚ್ಚುವರಿ ನಿಂಬೆ ಪಾನಕವನ್ನೋ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಧಗೆ ಬಿಸಿಲು ಧುತ್ತೆಂದು ಆಗಮಿಸಿರುವ ಈ ಸಮಯದಲ್ಲಿ ಉಣ್ಣೆ ಬಟ್ಟೆಗಳನ್ನು ಮಡಚಿಟ್ಟು ತಂಪು ಪ್ರದೇಶಗಳಿಗೆ ಹಾತೊರೆಯುತ್ತಿರುವ ನೀವು ಇನ್ನು ಮುಂದೆ ಜೊತೆಗೆ ಒಂದು ಲೋಟ ಹೆಚ್ಚುವರಿ ನಿಂಬೆ ಪಾನಕವನ್ನೋ ಅಥವಾ ದೇಹಕ್ಕೆ ತಂಪು ನೀಡುವ ಇನ್ನಿತರ ಹಣ್ಣು-ಹಂಪಲುಗಳನ್ನೋ ಜೊತೆಗಿಟ್ಟುಕೊಳ್ಳಿ. 
ಕೇವಲ ನೀರಷ್ಟೇ ನಿಮ್ಮ ದೇಹವನ್ನು ಈ ಅತಿ ಉಷ್ಣದಿಂದ ದೂರವಿಡುವುದಿಲ್ಲ, ತಂಪಾಗಿಡುವ ಈ ಪದಾರ್ಥಗಳ ಬಗ್ಗೆಯೂ ನಿಮಗೆ ತಿಳಿದಿರಲಿ. 
ಕಲ್ಲಂಗಡಿ: ಬೇಸಿಗೆಯಲ್ಲಿ ಇದೆ ಹಣ್ಣಿನ ರಾಜ. ಈ ಹಣ್ಣಿನಲ್ಲಿ ೯೫% ಭಾಗ ನೀರಿನಿಂದ ಕೂಡಿರುತ್ತದೆ ಎಂದು ನಿಮಗೆ ತಿಳಿದಿದೆಯೇ? 
ಈ ಕೆಂಪಗಿನ ಹಣ್ಣು ನಿಮ್ಮ ದೇಹದ ನೀರಿನ ಅಂಶವನ್ನು ಹೆಚ್ಚಿಸುವುದಲ್ಲದೆ, ಇದರ ಇತರ ಪೋಷಕಾಂಶಗಳು ಮಲಭಾದೆಯನ್ನು ತಡೆಗಟ್ಟಲು ಸಹಕರಿಸುತ್ತವೆ. 
ಎಳನೀರು: ಬೇಸಿಗೆಯಲ್ಲಿ ಎಳನೀರು ಕುಡಿಯುವುದು ಬಹುಷಃ ಅಮೃತಕ್ಕೆ ಸಮ. ಈ ಕಾಲದಲ್ಲಿ ಬೆಲೆ ತುಸು ಹೆಚ್ಚಿದರೂ ದಿನಕ್ಕೊಂದು ಎಳನೀರು ಕುಡಿದು ಹೊಟ್ಟೆ, ದೇಹ ಮತ್ತು ತಲೆಯನ್ನು ತಂಪಾಗಿ ಇಟ್ಟುಕೊಳ್ಳುವುದು ಉತ್ತಮ ಮಾರ್ಗ.
ಸೌತೆಕಾಯಿ: ಈ ತರಕಾರಿಗೆ ಆಂಗ್ಲಭಾಷೆಯಲ್ಲಿ ಒಂದು ನಾಣ್ಣುಡಿಯಿದೆ. ಸೌತೆಯಷ್ಟೇ 'ಕೂಲ್' ವ್ಯಕ್ತಿ ಎಂದು. ಮೊಸರು ಬಜ್ಜಿ, ಕೋಸಂಬರಿ ಮುಂತಾದವಕ್ಕೆ ಅಗತ್ಯವಾದ ಸೌತೆಕಾಯಿಯಲ್ಲಿನ ಅಂಶಗಳು ದೇಹದಲ್ಲಿನ ವಿಷಕಾರಿ ಅಂಶಗಳನ್ನು ತೊಡೆದು ಹಾಕುವುದಕ್ಕೂ ಸಹಕಾರಿ. ಇದು ಜೀರ್ಣಕ್ಕೂ ಸಹಕರಿಸಿ ಬಾಯಾರಿಕೆಯನ್ನು ತಣಿಸುತ್ತದೆ. 
ಪುದಿನ: ಯಾವುದೇ ಡೆಸರ್ಟ್ ಖಾದ್ಯ ಪುದಿನ ಇಲ್ಲದೆ ಅಪೂರ್ಣ. ಘಮ ಘಮಿಸುವ ವಾಸನೆಗೂ ಸೈ ಆರೋಗ್ಯಕ್ಕೂ. ಇದರ ತಂಪಾದ ತಾಜಾ ಘಮಲು ಬಾಯಿಯಲ್ಲಿ ಕೆಲವು ಎಂಜೈಮ್ ಗಳ ಉತ್ಪಾದನೆಗೆ ಸಹಕರಿಸಿ ಜೀರ್ಣಕ್ಕೆ ಸಹಕರಿಸುತ್ತದೆ. ಇದು ವಾಂತಿ ಮತ್ತು ತಲೆನೋವು ತಡೆಗೂ ಪರಿಣಾಮಕಾರಿ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com