ನಿದ್ದೆ ಕಡಿಮೆಯಾದರೆ ಸ್ಥೂಲಕಾಯ, ಮಧುಮೇಹ ಬರುವ ಸಂಭವ ಹೆಚ್ಚು!

ರಾತ್ರಿ ವೇಳೆ ನಿದ್ದೆ ಕಡಿಮೆಯಾದರೆ ಸ್ಥೂಲಕಾಯ ಹಾಗೂ ಮಧುಮೇಹ ಬರುವ ಸಾಧ್ಯತೆ ಹೆಚ್ಚು ಎಂದು ಹೊಸ ಅಧ್ಯಯನ ವರದಿ ತಿಳಿಸಿದೆ. ರಾತ್ರಿ ವೇಳೆ ಕೇವಲ 6 ಗಂಟೆ ನಿದ್ದೆ ಮಾಡುವವರ ಸೊಂಟದ ಸುತ್ತಳತೆ 9...
ಕಡಿಮೆ ನಿದ್ದೆ (ಸಾಂಕೇತಿಕ ಚಿತ್ರ)
ಕಡಿಮೆ ನಿದ್ದೆ (ಸಾಂಕೇತಿಕ ಚಿತ್ರ)
ಲಂಡನ್: ರಾತ್ರಿ ವೇಳೆ ನಿದ್ದೆ ಕಡಿಮೆಯಾದರೆ ಸ್ಥೂಲಕಾಯ ಹಾಗೂ ಮಧುಮೇಹ ಬರುವ ಸಾಧ್ಯತೆ ಹೆಚ್ಚು ಎಂದು ಹೊಸ ಅಧ್ಯಯನ ವರದಿ ತಿಳಿಸಿದೆ. ರಾತ್ರಿ ವೇಳೆ ಕೇವಲ 6 ಗಂಟೆ ನಿದ್ದೆ ಮಾಡುವವರ ಸೊಂಟದ ಸುತ್ತಳತೆ 9 ಗಂಟೆಗಳ ಕಾಲ ನಿದ್ದೆ ಮಾಡುವವರಿಗಿಂತ 3 ಸೆಂಟಿ ಮೀಟರ್ ಹೆಚ್ಚಿರುತ್ತದೆ ಎಂದು ಅಧ್ಯಯನ ವರದಿ ಮೂಲಕ ತಿಳಿದುಬಂದಿದೆ. 
ನಿದ್ದೆ ಕಡಿಮೆ ಮಾಡುವುದರಿಂದ ಮಧುಮೇಹ ಬರುವ ಸಾಧ್ಯತೆಗಳಿವೆ ಎಂಬ ಸಂಗತಿಯನ್ನು ಈ ಅಧ್ಯಯನ ವರದಿ ಮತ್ತಷ್ಟು ಪುಷ್ಟೀಕರಿಸಿದ್ದು, 1980 ರಿಂದ ವಿಶ್ವಾದ್ಯಂತ ಇರುವ ಸ್ಥೂಲಕಾಯದ ಜನರ ಸಂಖ್ಯೆ ಹೆಚ್ಚಿದೆ. ಸ್ಥೂಲಕಾಯದಿಂದಾಗಿ ಟೈಪ್2 ಮಧುಮೇಹ ಬರುವ ಸಾಧ್ಯತೆ ಇದೆ ಎಂದು ಯುಕೆಯ ಲೀಡ್ಸ್ ವಿವಿಯ ಗ್ರೆಗ್ ಪಾಟರ್ ಹೇಳಿದ್ದಾರೆ. 
1,615 ವಯಸ್ಕರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, PLOS ONE ಜರ್ನಲ್ ನಲ್ಲಿ ಈ ಅಧ್ಯಯನ ವರದಿ ವಿಸ್ತೃತವಾಗಿ ಪ್ರಕಟಗೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com